ಬೆಂಗಳೂರು: ಬೈಕ್‌ ಕದ್ದು ಮೋರಿಯಲ್ಲಿ ನಿಲ್ಲಿಸುತ್ತಿದ್ದ ಖರ್ತನಾಕ್‌ ಖದೀಮ ಅರೆಸ್ಟ್‌..!

Published : Aug 25, 2024, 12:33 PM IST
ಬೆಂಗಳೂರು: ಬೈಕ್‌ ಕದ್ದು ಮೋರಿಯಲ್ಲಿ ನಿಲ್ಲಿಸುತ್ತಿದ್ದ ಖರ್ತನಾಕ್‌ ಖದೀಮ ಅರೆಸ್ಟ್‌..!

ಸಾರಾಂಶ

ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಮನೆಗಳವು ಪ್ರಕರಣ ಸಂಬಂಧ ಆರೋಪಿ ರಘುನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ವಿಚಾರ ತಿಳಿದು ಗಿರಿನಗರ ಠಾಣೆ ಪೊಲೀಸರು, ನ್ಯಾಯಾಲಯ ದಲ್ಲಿ ಬಾಡಿ ವಾರೆಂಟ್ ಪಡೆದು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಆರೋಪಿ ರಘುನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ದ್ವಿಚಕ್ರ ವಾಹನ ಕಳವು ತಾನೇ ಮಾಡಿದ್ದಾಗಿ ತಪ್ಪೋಪ್ಪಿಕೊಂಡಿದ್ದಾನೆ. 

ಬೆಂಗಳೂರು(ಆ.25):  ಮನೆಗಳವು ಪ್ರಕರಣದಲ್ಲಿ ಬಂಧಿತನಾಗಿದ್ದ ಕನಕಪುರ ಮುಖ್ಯ ರಸ್ತೆಯ ಬಾಲಾಜಿ ಲೇಔಟ್ ನಿವಾಸಿ ಕುಖ್ಯಾತ ಕಳ್ಳ ರಘು ಅಲಿಯಾಸ್ ಪೆಪ್ಪಿ ರಘು (26) ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ 4.10 ಲಕ್ಷ ರು. ವಾಹನಗಳನ್ನು ಗಿರಿನಗರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. 

ಮೌಲ್ಯದ 4 ದ್ವಿಚಕ್ರ ಬನಶಂಕರಿ 3ನೇ ಹಂತದ ವಾಟರ್ ಟ್ಯಾಂಕ್ ರಸ್ತೆಯ ನಿವಾಸಿಯೊಬ್ಬರು ಜು.15ರಂದು ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಘಟನಾ ಸ್ಥಳದ ಸುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವಿನ ಮೇರೆಗೆ ಆರೋಪಿ ರಘುವಿನ ಪತ್ತೆಗೆ ಮುಂದಾಗಿದ್ದರು.

ಮಂಡ್ಯದಿಂದ ಬಂದು ಬೆಂಗ್ಳೂರಲ್ಲಿ ಬೈಕ್‌ ಕಳ್ಳತನ: 46 ಬೈಕ್‌ ಜಪ್ತಿ

ಇತ್ತೀಚೆಗೆ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಮನೆಗಳವು ಪ್ರಕರಣ ಸಂಬಂಧ ಆರೋಪಿ ರಘುನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ವಿಚಾರ ತಿಳಿದು ಗಿರಿನಗರ ಠಾಣೆ ಪೊಲೀಸರು, ನ್ಯಾಯಾಲಯ ದಲ್ಲಿ ಬಾಡಿ ವಾರೆಂಟ್ ಪಡೆದು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಆರೋಪಿ ರಘುನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ದ್ವಿಚಕ್ರ ವಾಹನ ಕಳವು ತಾನೇ ಮಾಡಿದ್ದಾಗಿ ತಪ್ಪೋಪ್ಪಿಕೊಂಡಿದ್ದಾನೆ. 

ವೃತ್ತಿಪರ ಕಳ್ಳ: 

ಆರೋಪಿ ರಘು ವೃತ್ತಿಪರ ಕಳ್ಳ ನಾಗಿದ್ದು, ಈತನ ವಿರುದ್ದ ಈ ಹಿಂದೆ ಬೆಂಗ ಳೂರು ನಗರದ ವಿವಿಧ ಪೊಲೀಸ್ ಠಾಣೆಗಳು, ಹಾಸನ, ಮೈಸೂರು ನಗರ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮನೆಗಳವು, ರಾಬರಿ, ಕೊಲೆಗೆ ಯತ್ನ, ದ್ವಿಚಕ್ರ ವಾಹನ ಕಳವು ಸೇರಿದಂತೆ 15 ಅಪರಾಧ ಪ್ರಕರಣಗಳು ದಾಖ ಲಾಗಿವೆ. ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಗೆ ಬಂದರೂ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ.

ಮೋರಿ, ರಾಜ ಕಾಲುವೆ ಬಳಿ 4 ಬೈಕ್ ಜಪ್ತಿ 

ವಿಚಾರಣೆ ವೇಳೆ ಆರೋಪಿಯು ನೀಡಿದ ಮಾಹಿತಿ ಮೇರೆಗೆ ಹೊಸಕೆರೆಹಳ್ಳಿ ಕ್ರಾಸ್ ಸಮೀಪದ ಮೋರಿ ಬಳಿ ಎರಡು ದ್ವಿಚಕ್ರವಾಹನಹಾಗೂಚಾಮುಂಡಿನಗರ ಸಮೀಪದ ರಾಜಕಾಲುವೆ ಬಳಿ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಆರೋಪಿಯ ವಿಚಾರಣೆಯಿಂದ ಆಡುಗೋಡಿ ಠಾಣೆ ಒಂದು ಮತ್ತು ಗಿರಿನಗರ ಠಾಣೆಯಲ್ಲಿ ದಾಖಲಾಗಿದ್ದ ಮೂರು ಸೇರಿ ಒಟ್ಟು 4 ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ