ರಾಮನಗರ: ಹೆಣ್ಣಿನ ಧ್ವನಿಯಲ್ಲಿ ಮಾತನಾಡಿ 41 ಲಕ್ಷ ವಂಚಿಸಿದ್ದವನ ಸೆರೆ

By Kannadaprabha News  |  First Published Aug 7, 2023, 2:00 AM IST

ತಂತ್ರಜ್ಞಾನದಲ್ಲೂ ನಿಪುಣನಾಗಿದ್ದು, ಹೆಣ್ಣಿನ ಧ್ವನಿಯಲ್ಲಿ ಮಾತನಾಡುವ ಕಲೆ ಕರಗತ ಮಾಡಿಕೊಂಡಿದ್ದ. ತನ್ನ ಈ ಎರಡು ಕೌಶಲ್ಯಗಳನ್ನು ಬಳಸಿಕೊಂಡು ಪುರುಷರನ್ನು ಬಲೆಗೆ ಬೀಳಿಸಿಕೊಂಡು, ಬ್ಲ್ಯಾಕ್‌ಮೇಲ್‌ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಆರೋಪಿ. 


ರಾಮನಗರ(ಆ.07):  ಹುಡುಗಿ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಬ್ಲ್ಯಾಕ್‌ಮೇಲ್‌ ಮಾಡಿ . 41 ಲಕ್ಷ ವಂಚಿಸಿದ್ದ ಯುವಕನನ್ನು ರಾಮನಗರ ಸಿಇಎನ್‌ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ದಾಸರಹಳ್ಳಿಯಲ್ಲಿ ರವಿಕುಮಾರ್‌(24) ಬಂಧಿತ ಆರೋಪಿ. ಈತ ಮೂಲತಃ ಕುಣಿಗಲ್‌ ತಾಲೂಕಿನ ಕಗ್ಗೇರಿಯವನಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿ ಖಾಸಗಿ ಡಾಟಾ ಬೇಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ತಂತ್ರಜ್ಞಾನದಲ್ಲೂ ನಿಪುಣನಾಗಿದ್ದು, ಹೆಣ್ಣಿನ ಧ್ವನಿಯಲ್ಲಿ ಮಾತನಾಡುವ ಕಲೆ ಕರಗತ ಮಾಡಿಕೊಂಡಿದ್ದ. ತನ್ನ ಈ ಎರಡು ಕೌಶಲ್ಯಗಳನ್ನು ಬಳಸಿಕೊಂಡು ಪುರುಷರನ್ನು ಬಲೆಗೆ ಬೀಳಿಸಿಕೊಂಡು, ಬ್ಲ್ಯಾಕ್‌ಮೇಲ್‌ ಮಾಡಿ ಹಣ ಸುಲಿಗೆ ಮಾಡುತ್ತಿದ್ದ. ಹಾಗೇ ಈತನ ಜಾಲಕ್ಕೆ ಬಿದ್ದ ರವಿಕುಮಾರ್‌ ಎಂಬುವವರಿಂದ ತಮ್ಮ ಕುಟುಂಬದಲ್ಲಿ ಸಮಸ್ಯೆ ಇದೆ ಎಂದು ಸುಳ್ಳು ಹೇಳಿ ಬೇಡಿಕೆ ಇಟ್ಟು ಆಗಾಗ ಹಣ ಪಡೆಯುತ್ತಿದ್ದ. 

Tap to resize

Latest Videos

ಆರ್‌ಟಿಒ ಕಾರ್ಯಾಚರಣೆ: ಒಂದೇ ನಂಬರಿನ 2 ಖಾಸಗಿ ಬಸ್‌ಗಳು ಸೀಜ್‌

ಕಡೆಗೊಮ್ಮೆ ರಾಜೇಶ್‌ ನಿರಾಕರಿದಾಗ ಅವರ ಫೋಟೊವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ವಾಟ್ಸಪ್‌ಗೆ ಕಳುಹಿಸಿ, ಬ್ಲ್ಯಾಕ್‌ಮೇಲ್‌ ಮಾಡಲಾರಂಭಿಸಿದ್ದ. ಇದೇ ರೀತಿ ಆರೋಪಿ ಆರು ತಿಂಗಳಲ್ಲೇ 41 ಲಕ್ಷ ರು. ಸುಲಿದಿದ್ದ. ಕಡೆಗೆ ರವಿಕುಮಾರ್‌ ದೂರಿನ ಮೇರೆಗೆ ಆರೋಪಿಯನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

click me!