ಬೆಂಗಳೂರು: ನಕಲಿ ಏಷ್ಯನ್‌ ಪೇಂಟ್ಸ್‌ ತಯಾರಿಸಿ ಮಾರಾಟ ಮಾಡುತ್ತಿದ್ದವನ ಬಂಧನ

By Kannadaprabha News  |  First Published Apr 15, 2023, 12:21 PM IST

ಆರೋಪಿ ಚುನ್ನಿಲಾಲ್‌ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ನಕಲಿ ಏಷ್ಯನ್‌ ಪೇಂಟ್ಸ್‌ ತಯಾರಿಸುವ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಫ್ಯಾಕ್ಟರಿ ಮತ್ತು ಶಿವಕೋಟೆ ಗ್ರಾಮದಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿ ನಕಲಿ ಏಷ್ಯನ್‌ ಪೇಂಟ್ಸ್‌ ಜಪ್ತಿ ಮಾಡಲಾಗಿದೆ. 


ಬೆಂಗಳೂರು(ಏ.15):  ನಕಲಿ ‘ಏಷ್ಯನ್‌ ಪೇಂಟ್ಸ್‌’ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ವಿಶ್ವೇಶಶ್ವಪುರಂ ಠಾಣೆ ಪೊಲೀಸರು ಬಂಧಿಸಿ, 20 ಲಕ್ಷ ಮೌಲ್ಯದ ಪೇಂಟ್ಸ್‌ ಜಪ್ತಿ ಮಾಡಿದ್ದಾರೆ.

ಬಂಧಿತ ಆರೋಪಿ ವಿದ್ಯಾರಣ್ಯಪುರ ನಿವಾಸಿ ಚುನ್ನಿಲಾಲ್‌(50) ಎಂಬಾತನಿಂದ 20 ಲಕ್ಷ ಮೌಲ್ಯದ ಏಷ್ಯನ್‌ ಪೇಂಟ್ಸ್‌ ಬ್ರ್ಯಾಂಡ್‌ನ ಅಪೆಕ್ಸ್‌, ಏಸ್‌, ರಾಯಲ್‌, ಟ್ರಾಕ್ಟರ್‌, ಪ್ರೀಮಿಯಮ್‌, ಅಪೊ್ಲೕಲೇಟ್‌, ಟು್ರಕೇರ್‌ ಇಂಟಿರಿಯರ್‌, ಎಕ್ಸ್‌ಟೀರಿಯರ್‌ ವಾಲ್‌ ಪ್ರೈಮರ್‌ಗಳನ್ನು ಜಪ್ತಿ ಮಾಡಿದ್ದಾರೆ. ಕಳೆದ ಮಂಗಳವಾರ ಅಪರಿಚಿತ ವ್ಯಕ್ತಿ ಎನ್‌.ಟಿ.ಪೇಟೆಯ 4ನೇ ಕ್ರಾಸ್‌ನಲ್ಲಿ ನಕಲಿ ಏಷ್ಯನ್‌ಪೇಂಟ್ಸ್‌ ಮಾರಾಟಕ್ಕೆ ಬಂದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಮಾಲು ಸಹಿತ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

undefined

ವಂಚನೆ ಕೇಸ್‌: ಫ್ರೀಡಂ ಆ್ಯಪ್‌ ಸಿಇಒ ಸುಧೀರ್‌ ಬಂಧನ

ಆರೋಪಿ ಚುನ್ನಿಲಾಲ್‌ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ನಕಲಿ ಏಷ್ಯನ್‌ ಪೇಂಟ್ಸ್‌ ತಯಾರಿಸುವ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಫ್ಯಾಕ್ಟರಿ ಮತ್ತು ಶಿವಕೋಟೆ ಗ್ರಾಮದಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿ ನಕಲಿ ಏಷ್ಯನ್‌ ಪೇಂಟ್ಸ್‌ ಜಪ್ತಿ ಮಾಡಲಾಗಿದೆ. ರಾಜಸ್ಥಾನ ಮೂಲದ ಆರೋಪಿ ಚುನ್ನಿಲಾಲ್‌ ಕಳೆದ ಎರಡು ವರ್ಷಗಳಿಂದ ನಗರದಲ್ಲಿ ಈ ನಕಲಿ ಏಷ್ಯನ್‌ ಪೇಂಟ್ಸ್‌ ತಯಾರಿಸಿ ಮಾರಾಟ ಮಾಡುತ್ತಿದ್ದ.

ಕಡಿಮೆ ಅವಧಿಯಲ್ಲಿ ಸುಲಭವಾಗಿ ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಪ್ರತಿಷ್ಠಿತ ಪೇಂಟ್‌ ಕಂಪನಿ ಏಷ್ಯನ್‌ ಪೇಂಟ್ಸ್‌ ಬ್ರಾಂಡ್‌ ಹೆಸರು ದುಬರ್ಳಕೆ ಮಾಡಿಕೊಂಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ವಿಶೆ್ವೕಶ್ವರಪುರಂ ಪೊಲೀಸ್‌ ಠಾಣೆಯಲ್ಲಿ ಹಕ್ಕು ಸ್ವಾಮ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

click me!