
ಬೆಂಗಳೂರು(ಜೂ.04): ಪೊಲೀಸರೇ ಗ್ರಾಹಕರ ಸೋಗಿನಲ್ಲಿ ಲಾಡ್ಜ್‌ಗೆ ತೆರಳಿ ವೇಶ್ಯಾವಾಟಿಕೆಗೆ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿ, ಲಾಡ್ಜ್ ಮ್ಯಾನೇಜರ್‌ನನ್ನು ಉಪ್ಪಾರಪೇಟೆ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಟರ್ಮಿನಲ್ 2ಎ ಬಸ್ ನಿಲ್ದಾಣದ ಬಾಲಾಜಿ ಲಾಡ್ಜ್‌ನ ಮ್ಯಾನೇಜರ್ ಮಹೇಶ್ ಬಂಧಿತ. ದಾಳಿ ವೇಳೆ ಆರೋಪಿಯಿಂದ ವೇಶ್ಯಾವಾಟಿಕೆಯಿಂದ ಸಂಗ್ರಹಿಸಿದ್ದ 1,400 ನಗದು ಜಪ್ತಿ ಮಾಡಲಾಗಿದೆ. ಲಾಡ್ಜ್ ಮಾಲಿಕರಾದ ಯೋಗೇಶ್ ಮತ್ತು ಪೂರ್ಣೇಶ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು : ವೇಶ್ಯಾವಾಟಿಕೆ ಜಾಲ - ಇಬ್ಬರ ಬಂಧನ, ಯುವತಿಯರ ರಕ್ಷಣೆ
ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಪೊಲೀಸ್ ಠಾಣೆಗೆ ಬಾತ್ಮೀದಾರರೊಬ್ಬರು ಕರೆ ಮಾಡಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಾಲಾಜಿ ಲಾಡ್ಜ್‌ನಲ್ಲಿ ಕೆಲವು ಹೆಣ್ಣು ಮಕ್ಕಳಿಗೆ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು. ಈ ಮಾಹಿತಿ ಮೇರೆಗೆ ಪೊಲೀಸರೇ ಗ್ರಾಹಕರ ಸೋಗಿನಲ್ಲಿ ಲಾಡ್ಜ್‌ಗೆ ತೆರಳಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಲಾಡ್ಜ್‌ನ ಮ್ಯಾನೇಜರ್ ಮಹೇಶ್‌ನನ್ನು ಬಂಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ