ಮದುವೆ ಆಗಲು ಮುಂದಾದ ಬಾರ್‌ ಡ್ಯಾನ್ಸರ್‌ಳನ್ನು ಕೊಂದ..!

By Kannadaprabha News  |  First Published Mar 31, 2021, 7:23 AM IST

ಪತ್ನಿಯ ಅಕ್ಕನೊಂದಿಗೂ ಸ್ನೇಹ| ವಿವಾಹ ಸಿದ್ಧತೆಯಲ್ಲಿದ್ದವಳಿಗೆ ಚಾರು ಇರಿದು ಹತ್ಯೆ| ಕೊಂದು ದೂರು ಕೊಡಲು ಬಂದಿದ್ದ ಆರೋಪಿ| ಆರೋಪಿ ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲು|  


ಬೆಂಗಳೂರು(ಮಾ.31): ನಾಲ್ಕು ದಿನಗಳ ಹಿಂದೆ ನೃಪತುಂಗ ಲೇಔಟ್‌ನ ನಡೆದಿದ್ದ ಬಾರ್‌ ಡ್ಯಾನ್ಸರ್‌ ಜಾರಾ (28) ಕೊಲೆ ಸಂಬಂಧ ಮೃತಳ ಭಾವನನ್ನು ಆರ್‌.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಾಲಹಳ್ಳಿಯ ನವಾಜ್‌ ಪಾಷಾ (28) ಬಂಧಿತ. ವೈಯಕ್ತಿಕ ವಿಚಾರವಾಗಿ ಶನಿವಾರ ರಾತ್ರಿ ನೃತ್ಯಗಾರ್ತಿ ಜತೆ ನವಾಜ್‌ ಪಾಷಾ ಜಗಳ ನಡೆದು ವಿಕೋಪಕ್ಕೆ ಹೋಗಿ ಆಕೆಯನ್ನು ಕೊಂದು ಆರೋಪಿ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Tap to resize

Latest Videos

ಛತ್ತೀಸ್‌ಗಡ ಮೂಲದ ಜಾರಾ, 2016ರಲ್ಲಿ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದಳು. ಬಾರ್‌ ಡ್ಯಾನ್ಸರ್‌ ಆಗಿದ್ದ ಆಕೆ ಬದುಕು ಸಾಗಿಸುತ್ತಿದ್ದಳು. 6 ತಿಂಗಳ ಹಿಂದೆ ಆಕೆಯ ಸೋದರಿಗೆ ನವಾಜ್‌ ಪಾಷಾ ಜತೆಗೆ ವಿವಾಹವಾಗಿತ್ತು. ಜಾಲಹಳ್ಳಿಯಲ್ಲಿ ಆಕೆಯ ಇಬ್ಬರು ಸೋದರರು ನೆಲೆಸಿದ್ದಾರೆ. ಅಸ್ಸಾಂ ಮೂಲದ ಯುವಕನ ಜತೆಗೆ ಜಾರಾಗೆ ಮದುವೆ ನಿಶ್ಚಯವಾಗಿತ್ತು. ಆದರೆ ತಂಗಿ ಜತೆ ವಿವಾಹವಾಗುವ ಮುಂಚಿನ ದಿನದಿಂದಲೂ ಜಾರಾಳೊಂದಿಗೆ ನವಾಜ್‌ ಸ್ನೇಹವಿತ್ತು. ಹೀಗಾಗಿ ಆಕೆಯ ಮದುವೆ ನಿಶ್ಚಯ ವಿಚಾರ ತಿಳಿದು ಕನಲಿದ ಆತ, ಮದುವೆ ಮಾಡಿಕೊಳ್ಳದಂತೆ ಜಾರಾಗೆ ತಾಕೀತು ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮನೆಗೆ ನುಗ್ಗಿ ರಿಯಲ್‌ ಎಸ್ಟೇಟ್‌ ಏಜೆಂಟ್‌ ಕತ್ತು ಕೊಯ್ದು ಬರ್ಬರ ಹತ್ಯೆ

ಮಾರ್ಚ್‌ 26ರ ರಾತ್ರಿ 8ರಲ್ಲಿ ಜಾರಾ ಮನೆಗೆ ಆರೋಪಿ ಹೋಗಿದ್ದ. ಆಗ ಮತ್ತೆ ಮದುವೆ ವಿಚಾರವಾಗಿ ಜಗಳ ಶುರುವಾಗಿ ಅವರ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆತ, ಜಾರಾಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ. ಮರು ದಿನ ಮೃತಳ ಮನೆಗೆ ಆಕೆಯ ಸೋದರರು ಬಂದಾಗ ಕೃತ್ಯ ಬೆಳಕಿಗೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಂದು ದೂರು ಕೊಡಲು ಬಂದಿದ್ದ

ನಾದಿನಿ ಹತ್ಯೆಗೈದ ಬಳಿಕ ನವಾಜ್‌, ತನ್ನ ಮೇಲೆ ಅನುಮಾನಬಾರದಂತೆ ಮುಂಜಾಗ್ರತೆ ವಹಿಸಿದ್ದ. ತನ್ನ ಅಕ್ಕನ ಕೊಲೆ ಬಗ್ಗೆ ಆರ್‌.ಟಿ.ನಗರ ಪೊಲೀಸ್‌ ಠಾಣೆಗೆ ಪತ್ನಿ ಹೋಗಿದ್ದಾಗಲೂ ಆತ ಜೊತೆಯಲ್ಲಿದ್ದ. ಕೊನೆಗೆ ಜಾರಾ ಮೊಬೈಲ್‌ ಕರೆಗಳ ಪರಿಶೀಲಿಸಿದಾಗ ಅತಿ ಹೆಚ್ಚು ಬಾರಿ ನವಾಜ್‌ ಸಂಭಾಷಣೆ ನಡೆಸಿರುವುದು ಗೊತ್ತಾಯಿತು. ಈ ಸುಳಿವು ಆಧರಿಸಿ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!