ಫೆ. 7ರಂದು ಕೊಲೆ ನಡೆದ ಸ್ಥಳದಲ್ಲಿ ದೊರೆತ ಆಧಾರ್ ಕಾರ್ಡ್ ಗುರುತಿನ ಮೇಲೆ ಮೃತ ವ್ಯಕ್ತಿಯನ್ನು ಗುರುತಿಸಲಾಗಿತ್ತು. ಸಿಸಿ ಕ್ಯಾಮೆರಾ ಫುಟೇಜ್‌ಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಚನ್ನಪಟ್ಟಣ(ಫೆ.15): ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನ ಜೇಬಿನಲಿದ್ದ 500 ರು.ಗಾಗಿ ಕೊಲೆಮಾಡಿ ಪರಾರಿಯಾಗಿದ್ದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕನಕಪುರ ತಾಲೂಕಿನ ಕಲ್ಲಿಗೌಡನದೊಡ್ಡಿ ಗ್ರಾಮದ ಸ್ವಾಮಿ (೨೭) ಬಂಧಿತ ಆರೋಪಿ. ಕಳೆದ ವಾರ ನಗರದ ಸಾತನೂರು ವೃತ್ತದಲ್ಲಿರುವ ಶ್ರೀ ಕಬ್ಬಾಳಮ್ಮ ಹೋಟೆಲ್ ಹಿಂಭಾಗದ ಬಯಲಿನಲ್ಲಿ ಬಿಹಾರ ಮೂಲದ ಸಂಜೀತ್ ಕುಮಾರ್ ಎಂಬ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿಯನ್ನು ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಫೆ. ೭ರಂದು ಕೊಲೆ ನಡೆದ ಸ್ಥಳದಲ್ಲಿ ದೊರೆತ ಆಧಾರ್ ಕಾರ್ಡ್ ಗುರುತಿನ ಮೇಲೆ ಮೃತ ವ್ಯಕ್ತಿಯನ್ನು ಗುರುತಿಸಲಾಗಿತ್ತು. ಸಿಸಿ ಕ್ಯಾಮೆರಾ ಫುಟೇಜ್‌ಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಕುಡಿದು ಮತ್ತಿನಲ್ಲಿದ್ದ ಕೊಲೆಯಾದ ಸಂಜೀತ್ ಕುಮಾರ್‌ಗೆ ಮಲಗಲು ಬಯಲಿನ ಜಾಗ ತೋರಿಸಿದ ಸ್ವಾಮಿ, ಆತ ಮಲಗಿದ ಮೇಲೆ ಕಲ್ಲು ಎತ್ತಿಹಾಕಿ, ಜೇಬಿನಲಿದ್ದ 500 ರು. ಎತ್ತಿಕೊಂಡು ಪರಾರಿಯಾಗಿದ್ದು ಪೊಲೀಸರು ಕಾರ್ಯಾಚರಣೆ ವೇಳೆ ತಿಳಿದುಬಂದಿದ್ದು, ಆರೋಪಿಯನ್ನು ಸೆರೆ ಹಿಡಿಯಲಾಗಿದೆ.
ಕಲಬುರಗಿ: ಗಂಡ, ಅತ್ತೆಯ ಕಿರುಕುಳ, 2 ವರ್ಷದ ಕಂದಮ್ಮಳನ್ನ ಕೊಲೆಗೈದು ನೇಣಿಗೆ ಶರಣಾದ ತಾಯಿ
ಇದೇ ಆರೋಪಿ ನಗರದ ಕುರುಬರ ಹಾಸ್ಟೆಲ್ ಬಳಿ ಇರುವ ಗಣೇಶನ ದೇವಸ್ಥಾನದ ಹುಂಡಿಯನ್ನು ಒಡೆದು ಹಣ ದೋಚಿದ್ದನ್ನು ಸಹ ತನಿಖಾ ತಂಡ ಪತ್ತೆ ಹೆಚ್ಚಿದೆ.