ವಯಾಗ್ರ ಸೇವಿಸಿ ಫರ್ಸ್ಟ್‌ ನೈಟ್‌ನಲ್ಲಿ ಭಾಗಿಯಾದ ಪತಿ, ಸಾವು ಕಂಡ ಪತ್ನಿ!

By Santosh Naik  |  First Published Feb 14, 2024, 7:04 PM IST

sex enhancement pills ಲೈಂಗಿಕ ಸಾಮರ್ಥ್ಯ ವರ್ಧನೆಯಾಗುವಂಥ ವಯಾಗ್ರಾ ಮಾದರಿಯ ಮಾತ್ರೆ ತಿಂದು ಮೊದಲ ರಾತ್ರಿಯಲ್ಲಿ ಪತಿ ಭಾಗಿಯಾಗಿದ್ದ, ಆದರೆ, ಸೆಕ್ಸ್‌ ಎಷ್ಟು ಗಂಭೀರವಾಗಿತ್ತೆಂದರೆ ತೀವ್ರ ಗಾಯಗೊಂಡಿದ್ದ ಪತ್ನಿ ಸಾವು ಕಂಡಿದ್ದಾಳೆ. ಉತ್ತರ ಪ್ರದೇಶ ಹಮೀರ್‌ಪುರದಲ್ಲಿ ಈ ಘಟನೆ ವರದಿಯಾಗಿದೆ.


ನವದೆಹಲಿ (ಫೆ.14): ಆಘಾತಕಾರಿ ಘಟನೆಯಲ್ಲಿ ಹೊಸ ಕನಸು ಕಟ್ಟಿಕೊಂಡು ಗಂಡನ ಮನೆಗೆ ಬಂದಿದ್ದ ಪತ್ನಿಯ ಬಾಳು ಏಳೇ ದಿನದಲ್ಲಿ ಮುಕ್ತಾಯವಾಗಿದೆ. ಮೊದಲ ರಾತ್ರಿಯಲ್ಲಿ ಪತಿ ವಯಾಗ್ರ ಮಾತ್ರೆ ಸೇವಿಸಿ ಸೆಕ್ಸ್‌ನಲ್ಲಿ ಭಾಗಿಯಾಗಿದ್ದ. ಈ ಸೆಕ್ಸ್ ಎಷ್ಟು ಗಂಭೀರವಾಗಿತ್ತದೆಂದರೆ, ತೀವ್ರವಾಗಿ ಗಾಯಗೊಂಡಿದ್ದ ಪತ್ನಿ ಸಾವು ಕಂಡಿದ್ದಾಳೆ. ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಈ ಘಟನೆ ನಡೆದಿದೆ. ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದ ಪತಿ, ಮೊದಲ ರಾತ್ರಿಯ ಸಂಭ್ರಮದಲ್ಲಿ ಭಾಗಿಯಾಗಲು ವಯಾಗ್ರ ಮಾತ್ರೆ ಸೇವಿಸಿದ್ದ. ಆದರೆ, ಇದರಿಂದಾಗಿ ಮಹಿಳೆಯ ಆರೋಗ್ಯ ಸಾಕಷ್ಟು ಹದಗೆಟ್ಟಿತು. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಕಾನ್ಪುರ ಜಿಲ್ಲೆಯ ಖಾಸಗಿ ನರ್ಸಿಂಗ್‌ ಹೋಮ್‌ಗೆ ಸೇರಿಸಲಾಗಿತ್ತು. ಎಷ್ಟೇ ಚಿಕಿತ್ಸೆ ನೀಡಿದರೂ ಆಕೆಯನ್ನು ಬದುಕಿಸಲು ಸಾಧ್ಯವಾಗಲಿಲ್ಲ. ನವವಿವಾಹಿತೆಯನ್ನು ಫೆಬ್ರವರಿ 7 ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಫೆಬ್ರವರಿ 10ರ ಶನಿವಾರದಂದು ಆಕೆ ಸಾವು ಕಂಡಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಮೃತ ಮಹಿಳೆಯ ಸಂಬಂಧಿಕರು ಪೊಲೀಸ್ ಸೂಪರಿಂಟೆಂಡೆಂಟ್ ಗೆ(ಎಸ್‌ಪಿ) ಈಗಾಗಲೇ ದೂರು ಸಲ್ಲಿಸಿದ್ದಾರೆ. ಪತಿ ಮತ್ತು ಅವರ ಕುಟುಂಬದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ಈ ನಡುವೆ ನವವಿವಾಹಿತೆಯ ಪತಿ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಗ್ರಾಮದಿಂದ ಪರಾರಿಯಾಗಿದ್ದಾನೆ ಎಂದೂ ಹೇಳಲಾಗಿದೆ.

ಆದರೆ, ಕೊತ್ವಾಲಿ ನಗರ ಠಾಣೆಯಲ್ಲಿ ಈ ಬಗ್ಗೆ ಯಾವುದೇ ಮಾಹಿತಿ/ದೂರು ಬಂದಿಲ್ಲ, ದೂರನ್ನು ಸ್ವೀಕರಿಸಿದ ನಂತರ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಮೀರ್‌ಪುರ ಪೊಲೀಸರು ತಿಳಿಸಿದ್ದಾರೆ. ವಧುವಿನ ಪತಿ, ಲೈಂಗಿಕ ವರ್ಧನೆಯ ಮಾತ್ರೆಗಳನ್ನು ಸೇವಿಸಿದ ಆಕೆಯೊಂದಿಗೆ ಸೆಕ್ಸ್‌ನಲ್ಲಿ ಭಾಗಿಯಾಗಿದ್ದ. ಇದು ಎಷ್ಟು ಘಾತಕವಾಗಿತ್ತೆಂದರೆ, ಆಕೆಗೆ ತೀವ್ರತರ ಆಂತರಿಕ ಗಾಯಗಳಾಗಿದ್ದವು. ಆಂತರಿಕ ರಕ್ತಸ್ರಾವ ಆರಂಭವಾದ ಬೆನ್ನಲ್ಲಿಯೇ ಆಕೆಯ ಆರೋಗ್ಯವೂ ಕ್ಷಿಣಿಸಲು ಆರಂಭವಾಯಿತು ಎಂದು ವರದಿಯಾಗಿದೆ. ಆಕೆಯ ಸ್ಥಿತಿ ಹದಗೆಟ್ಟಾಗ ಆಕೆಯನ್ನು ಸ್ತ್ರೀರೋಗತಜ್ಞರ ಬಳಿಗೆ ಕರೆತರಲಾಯಿತು. ಈ ವೇಳೆ ಆಕೆಯನ್ನು ಪರೀಶೀಲನೆ ಮಾಡಿದ ವೈದ್ಯರು, ಸಾಮೂಹಿಕ ಅತ್ಯಾಚಾರವಾಗುವಷ್ಟು ಸಮನಾದ ಲೈಂಗಿಕ ಕ್ರೌರ್ಯವನ್ನು ಆಕೆ ಸಹಿಸಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.

'ಸ್ತ್ರೀಯ ಸೆಕ್ಸ್‌ ಹೀಗಿರುತ್ತೆ....' ಇದನ್ನು ಹೇಳಿದವರು ಚಾಣಕ್ಯರಲ್ಲ, ವಾತ್ಸಾಯನನೂ ಅಲ್ಲ, ಮತ್ಯಾರು?

ಹಮೀರ್‌ಪುರ ಮೂಲದ ಟೆಕ್ಕಿಯೊಂದಿಗೆ ಫೆಬ್ರವರಿ 3 ರಂದು ಆಕೆಯ ವಿವಾಹವಾಗಿತ್ತು. ದುರಾದೃಷ್ಟವಶಾತ್‌ ಆಕೆಯ ಪೋಷಕರು ಈಗಾಗಲೇ ಸಾವು ಕಂಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಈಕೆಯ ಸಹೋದರ ಸಂಪೂರ್ಣವಾಗಿ ಮದುವೆ ಸಿದ್ಧತೆ ನಡೆಸಿದ್ದ.

Tap to resize

Latest Videos

ತುಂಬಾ ದಿನ ಸೆಕ್ಸ್‌ ಅನುಭವಿಸದಿದ್ದರೆ ನಿಮ್ಮ ದೇಹವೇ ಹೀಗೆಲ್ಲಾ ಹೇಳುತ್ತೆ!

click me!