2022, 2023ರಲ್ಲಿ ಈತ ಚಿತ್ತಾಪುರ ವಲಯದಲ್ಲೇ ಹಲವು ಕಳವಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ವಾಡಿ ರೈಲು ನಿಲ್ದಾಣದ ಮುಂದೆ ನಸುಕಿನಲ್ಲಿ ಶಂಕಾಸ್ಪದವಾಗಿ ಅಡ್ಡಾಡುತ್ತಿದ್ದಾಗ ಈತ ಪೊಲೀಸರ ಗಮನಕ್ಕೆ ಬಂದು ಬಂಧಿಸಿ ವಿಚಾರಣೆ ನೆಸಿದಾಗ ಈತನ ಚಾಲಾಕಿತನ ಬಯಲಾಗಿದೆ: ಜಿಲ್ಲಾ ಎಸ್ಪಿ ಅಡ್ಡೂರು ಶ್ರೀನಿವಾಸುಲು
ಕಲಬುರಗಿ(ಜ.05): ಚಿತ್ತಾಪುರ, ವಾಡಿ, ಶಹಾಬಾದ್ ಸೀಮಾಂತರದಲ್ಲಿ ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಚಾಲಾಕಿ ಚಾಲಕ ಕಳ್ಳ ಚಾಂದ್ ಪಾಶಾ ಬಾಬೂಮಿಯಾ ಅಲಿಯಾಸ್ ಬಾಬಾ ಮೈನೋದ್ದೀನ್ ಈತ ಕೊನೆಗೂ ಚಿತ್ತಾಪುರ ವೃತ್ತದ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾನೆ.
2022, 2023ರಲ್ಲಿ ಈತ ಚಿತ್ತಾಪುರ ವಲಯದಲ್ಲೇ ಹಲವು ಕಳವಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ವಾಡಿ ರೈಲು ನಿಲ್ದಾಣದ ಮುಂದೆ ನಸುಕಿನಲ್ಲಿ ಶಂಕಾಸ್ಪದವಾಗಿ ಅಡ್ಡಾಡುತ್ತಿದ್ದಾಗ ಈತ ಪೊಲೀಸರ ಗಮನಕ್ಕೆ ಬಂದು ಬಂಧಿಸಿ ವಿಚಾರಣೆ ನೆಸಿದಾಗ ಈತನ ಚಾಲಾಕಿತನ ಬಯಲಾಗಿದೆ ಎಂದು ಜಿಲ್ಲಾ ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ.
undefined
ಬೆಳಗಾವಿ: ಅಂಗನವಾಡಿ ಸಹಾಯಕಿ ಮೂಗು ಕತ್ತರಿಸಿದವ ಸೆರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಾಡಿಯಲ್ಲಿ ಡಿಸಂಬರ್ 2023 ರಲ್ಲಿ ಬೀಗ ಹಾಕಿದ ಮನೆಯಿಂದ 70 ಗ್ರಾಂ ಚಿನ್ನಾಭರಣ ಕಳವಾದ ದೂರು ದಾಖಲಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾಗಲೇ ಈ ಕಳ್ಳ ಸಿಕ್ಕುಬಿದ್ದಿದ್ದಾನೆ. ವಿಚಾರಣೆಯಲ್ಲಿ ಈತನೇ ಚಿತ್ತಾಪುರ, ವಾಡಿ, ಶಹಾಬಾದ್‌ನ ನಾಲ್ಕು ಕಳವು ಪ್ರಕರಣದಲ್ಲಿ ಪಾಲ್ಗೊಂಡಿರೋದು ಗೊತ್ತಾಗಿದೆ ಎಂದರು.
ವಾಡಿಯ ಕೋಂಚೂರ್ ರಸ್ತೆಯ ನಿವಾಸಿಯಗಿರುವ ಚಾಂದ್ ಪಾಶಾ ವೃತ್ತಿಯಲ್ಲಿ ಚಾಲಕನಾಗಿದ್ದಾನೆ. ಈತ ಚಿತ್ತಾಪುರದ ವೆಂಟೇಷ ನಗರದ ಕಳವು ಪ್ರಕರಣ ಸೇರಿದಂತೆ ಸುಗೂರು, ವಾಡಿ ಇಲ್ಲೆಲ್ಲಾ ನಡೆದ ಕಳವಿನ ಪ್ರಕರಣಗಲ್ಲಿ ಪಾಲ್ಗೊಂಡಿದ್ದನೆಂಬುದು ಗತ್ತಾಗಿದೆ.
ಸದ್ಯ ಕಲಬುರಗಿಯ ಜಫ್ರಾಬಾದ್ ರಸ್ತೆಯಲ್ಲಿ ವಾಸ್ತವ್ಯ ಹೂಡಿದ್ದನೆಂದು ಹೇಳಿದ್ದಾನೆ. ಈತ ನಿತ್ಯ ವಾಡಿ, ಚಿತ್ತಾಪುರ ಭಾಗದಲ್ಲಿ ಸುತ್ತಾಡಿ ಬಂದು ಕಳವು ಮಾಡುತ್ತಿದ್ದನೆಂದು ಗೊತ್ತಾಗಿದೆ. ಚಾಂದ್ ಪಾಶಾ ನಾಲ್ಕೂ ಕಳುವಿನ ಪ್ರಕರಣಗಳಲ್ಲಿ ಒಟ್ಟು 265 ಗ್ರಾಂ ಚಿನ್ನ ದೋಚಿದ್ದಾನೆ. ಈತನನ್ನು ಬಂಧಿಸಿ ವಿಚಾರಣೆ ನಡೆಸಿದ್ದರಿಂದ 210 ಗ್ರಾಂ ಚಿನ್ನ ಜಪ್ತಿಯಾಗಿದೆ. ಇದಲ್ಲದೆ ಈತನಿಂದ 90 ಗ್ರಾಂ ಬೆಳ್ಳಿ ಸಹ ಜಪ್ತಿ ಮಾಡಿದ್ದು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
12ರ ಹರೆಯದ ಬಾಲಕಿಯ ಮದುವೆಯಾಗಿ ಗರ್ಭಿಣಿ ಮಾಡಿದ್ದ 29 ವರ್ಷದ ವ್ಯಕ್ತಿಯ ಬಂಧನ!
ಸದರಿ ಪ್ರಕರಣದಲ್ಲಿ ಚಿತ್ತಾಪುರದ ಸಿಪಿಐ ಚಂದ್ರಶೇಖರ ತಿಗಡಿ, ತಿರುಮಳೇಶ, ದಿವ್ಯಾ ಮಹಾದೇವನ್ ಮತ್ತು ಸಿಬ್ಬಂದಿಗಳು ಉತ್ತಮ ಕೆಲಸ ಮಾಡಿ ಕಳ್ಳನ ಪತ್ತೆ ಮಾಡಿದ್ದಾರೆಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ಇಡೀ ತಂಡವನ್ನು ಅಭಿನಂದಿಸಿದರು. ಎಎಸ್‌ಪಿ ಶ್ರೀನಿಧಿ, ನಾಗೇಶ ಐತಾಳ್, ಡಿವೈಎಸ್ಪಿ ಶೀಲವಂತ ಹೊಸ್ಮನಿ ಇದ್ದರು.
ಗ್ರಾಮೀಣ ಭಾಗದಲ್ಲಿ ಬಿಗಿ ಬಂದೋಬಸ್ತ್:
ಕಳೆದ ಡಿಸಂಬರ್‌ನಲ್ಲಿ ಜಿಲ್ಲೆಯ ಹಳ್ಳಿಗಾಡಲ್ಲಿ ಹೆಚ್ಚಿರುವ ಕಳವಿನ ಪ್ರಕರಣಗಳ ಬಗ್ಗೆ ಎಸ್ಪಿಯವರ ಗಮನ ಸೆಳೆದಾಗ ಅದನ್ನವರು ಒಪ್ಪಿಕೊಂಡರಲ್ಲದೆ ಈ ತಿಂಗಳಲ್ಲಿನ ಕಳವಿನ ಪ್ರಕರಣಗಳ ಪತ್ತೆಗೆ ಆದ್ಯತೆ ನೀಡಲಾಗಿದೆ. ಅಫಜಲ್ಪುರ, ಆಳಂದ ಇಲ್ಲೆಲ್ಲಾ ಪಕ್ಕದ ಮಹಾರಾಷ್ಟ್ರದ ತಂಡಗಳು ಕಳವು ಮಾಡಿರೋದು ಗೊತ್ತಾಗಿದೆ. ಜಿಲ್ಲಾದ್ಯಂತ ಇಂತಹ ಹೊರ ರಾಜ್ಯದ ತಂಡಗಳ ಕೈವಾದಿಂದ ಆಗಿರುವ ಕಳವಿನ ಪ್ರಕರಣಗಳನ್ನು ಸೂಕ್ಷ್ಮವಾಗಿ ಕೈಗೆತ್ತಿಕೊಂಡು ಭೇದಿಸಲಾಗುತ್ತಿದೆ. ಸಾಕಷ್ಟು ಸುಳಿವು ಗೊತ್ತಾಗಿದೆ. ಪೊಲೀಸ್ ತಂಡಗಲು ಹೊರ ರಾಜ್ಯಗಳಿಗೂ ಭೇಟಿ ನೀಡವ. ಶೀಘ್ರದಲ್ಲೇ ಇವನ್ನೆಲ್ಲ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಎಸ್ಪಿ ಶ್ರೀನಿವಾಸುಲು ಹೇಳಿದ್ದಾರೆ. ಹಳ್ಳಿಗಾಡಲ್ಲಿ ಕಳವಿನ ಪ್ರಕರಣಗಳು ಮರುಕಳಿಸದಂತೆ ತಕ್ಕ ಬಂದೋಬಸ್ತ್, ಬೀಟ್ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದರು.