
ಬೆಂಗಳೂರು(ಮಾ.02): ಇತ್ತೀಚಿಗೆ ನಿವೃತ್ತ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್‌ವೊಬ್ಬರಿಂದ ಚಿನ್ನದ ಸರ ದೋಚಿದ್ದ ಚಾಲಾಕಿ ಖದೀಮನೊಬ್ಬ ಚಂದ್ರಾಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಉಲ್ಲಾಳ ನಿವಾಸಿ ದರ್ಶನ್ ಬಂಧಿತನಾಗಿದ್ದು, ಆರೋಪಿಯಿಂದ 3 ಲಕ್ಷ ರು ಮೌಲ್ಯದ 76.4 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಮೂಡಲಪಾಳ್ಯ ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಕಾಲೋನಿ ನಿವಾಸಿ ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಗೀತಾರೆಡ್ಡಿ ಅವರು ಮನೆ ಮುಂದೆ ಕಸ ಗುಡಿಸುವಾಗ ಸರ ಕಳವು ಮಾಡಿ ಕಿಡಿಗೇಡಿ ಪರಾರಿಯಾಗಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಟ್ಕಳ: ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ
ತನ್ನ ತಾಯಿ ಜತೆ ನೆಲೆಸಿದ್ದ ದರ್ಶನ್, ಪಿಯುಸಿಗೆ ವ್ಯಾಸಂಗ ಮೊಟಕುಗೊಳಿಸಿ ಮಾರ್ಚ್‌ವೊಂದರಲ್ಲಿ ಕೆಲ ದಿನಗಳು ಕೆಲಸ ಮಾಡಿದ್ದ. ಪ್ರಸುತ್ತ ನಿರುದ್ಯೋಗಿಯಾಗಿ ಆತ ಅಲೆಯುತ್ತಿದ್ದ. ಸುಲಭವಾಗಿ ಹಣ ಸಂಪಾದನೆ ಸಲು ವಾಗಿ ಸರಗಳ್ಳತನಕ್ಕಿಳಿದಿದ್ದ ಆತ, ಮೊದಲ ಯತ್ನದಲ್ಲೇ ನಿವೃತ್ತ ಪೊಲೀಸ್ ಅಧಿಕಾರಿಯಿಂದಲೇ ಚಿನ್ನ ದೋಚಿ ಸಿಕ್ಕಿಬಿದ್ದಿದ್ದಾನೆ. ಇತ್ತೀಚಿಗೆ ಕೆನರಾ ಬ್ಯಾಂಕ್ ಕಾಲೋನಿಯ ತಮ್ಮ ನಿವಾಸದ ಮುಂದೆ ಮುಂಜಾನೆ ಗೀತಾರೆಡ್ಡಿ ಕಸ ಗುಡಿಸುತ್ತಿದ್ದರು. ಆಗ ವಾಯು ವಿಹಾರ ಸೋಗಿನಲ್ಲಿ ಅಲ್ಲಿಗೆ ಬಂದ ದರ್ಶನ್, ಗೀತಾ ರೆಡ್ಡಿ ಅವರ ಬಳಿ ಬಸ್ ನಿಲ್ದಾಣ ಯಾವ ಕಡೆ ಇದೆ ಎಂದು ಕೇಳಿದ್ದಾನೆ. ಆಗ ದಾರಿ ತೋರಿಸಲು ಗೇಟ್ ದಾಟಿ ಮುಂದೆ ಬಂದಾಗ ಅವ ರಿಂದ ಚಿನ್ನ ಸರ ಎಗರಿಸಿ ಆರೋಪಿ ಪರಾರಿಯಾಗಿದ್ದ. ನಾಲ್ಕು ಕಿ.ಮೀ ಓಡಿ ಬಳಿ ಆಟೋ ಹತ್ತಿ ಆತ ಪರಾರಿಯಾಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಚಿನ್ನ ಕರಗಿಸಿ ಗಟ್ಟಿ ಮಾಡಿದ್ರು:
ಈ ಕೃತ್ಯ ಎಸಗಿದ ಬಳಿಕ ಅಟ್ಟಿಕಾ ಗೋಲ್ಡ್ ಕಂಪನಿಗೆ ಕದ್ದ ಚಿನ್ನವನ್ನು ಆರೋಪಿ ಮಾರಾಟ ಮಾಡಿದ್ದ. ಬಳಿಕ ಆ ಚಿನ್ನವನ್ನು ಕರಗಿಸಿ ಗಟ್ಟಿಮಾಡಿ ಕಂಪನಿ ಮಾರಾಟಕ್ಕೆ ಯತ್ನಿಸಿತ್ತು. ಅಷ್ಟರಲ್ಲಿ ಮಾಹಿತಿ ಪಡೆದು ಚಿನ್ನ ಗಟ್ಟಿಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ