
ದಾಬಸ್‌ಪೇಟೆ(ನ.10): ಆನ್‌ಲೈನ್ ತರಗತಿಗೆಂದು ಮೊಬೈಲ್ ಪಡೆದಿದ್ದ ಬಾಲಕಿಗೆ ಇನ್‌ಸ್ಟಾಗ್ರಾಂನಲ್ಲಿ ಬೆದರಿಸಿ 16 ಲಕ್ಷ ಮೌಲ್ಯದ ಚಿನ್ನ ಪಡೆದಿದ್ದ ವ್ಯಕ್ತಿಯೊಬ್ಬ ಈಗ ಜೈಲು ಸೇರಿದ್ದಾನೆ.
ತಮಿಳುನಾಡು ಮೂಲದ, ದಾಬಸ್‌ಪೇಟೆ ನಿವಾಸಿ ರಾಬರ್ಟ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಕಿಯೋರ್ವಳಿಗೆ ಸ್ನೇಹ ಸಂದೇಶ ಕಳುಹಿಸಿ ನಂತರ ಆಕೆಗೆ ಬೆದರಿಸಿ ಆಕೆಯ ಮನೆಯಿಂದ 165 ಗ್ರಾಂ ಚಿನ್ನಾಭರಣ ತರಿಸಿಕೊಂಡಿದ್ದಾನೆ. ಅದೇ ರೀತಿ ಮತ್ತೋರ್ವ ವಿದ್ಯಾರ್ಥಿಗೂ ಸ್ನೇಹಿತನ ಸೋಗಿನಲ್ಲಿ ಸಂದೇಶ ಕಳುಹಿಸಿ ಆತನಿಗೂ ಬೆದರಿಕೆಯೊಡ್ಡಿ ಆತನಿಂದಲೂ 110 ಗ್ರಾಂ ಚಿನ್ನಾಭರಣ ತರಿಸಿದ್ದಾನೆ. ನಂತರ ಬೇರೆ ಬೇರೆ ಸ್ನೇಹಿತರ ಹೆಸರಿನಲ್ಲಿ ದಾಬಸ್‌ಪೇಟೆ, ದೊಡ್ಡಬಳ್ಳಾಪುರ ಸೇರಿದಂತೆ ವಿವಿಧೆಡೆ ಮುತ್ತೂಟ್ ಫೈನಾನ್ಸ್ ಕಂಪನಿಗಳಲ್ಲಿ ಚಿನ್ನಾಭರಣ ಅಡಮಾನವಿಟ್ಟು ಮೋಜು ಮಸ್ತಿ ಮಾಡಿದ್ದಾನೆ.
Davanagere: ಸೋಷಿಯಲ್ ಮೀಡಿಯಾ ಕೀಚಕರಿಗೆ ಎಚ್ಚರಿಕೆಯ ಗಂಟೆ
ಬಳಿಕ ಒಡವೆ ಕಳೆದುಕೊಂಡಿದ್ದ ವಿದ್ಯಾರ್ಥಿಗಳ ಪೋಷಕರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ದಾಬಸ್‌ಪೇಟೆ ಪೊಲೀಸರು ರಾಬರ್ಟ್‌ನನ್ನು ಬಂಧಿಸಿದ್ದಾರೆ. ವಿದ್ಯಾರ್ಥಿಗಳಿಗೆ ಬೆದರಿಕೆಯೊಡ್ಡಿ ಒಡವೆ ಪಡೆದಿರುವ ವಿಚಾರ ಬಾಯಿಬಿಟ್ಟಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ