
ಬೆಂಗಳೂರು(ಜು.12): ವೇಶ್ಯೆಯರ ಚಟಕ್ಕೆ ಬಿದ್ದು ಮೋಜು-ಮಸ್ತಿಗೆ ಹಣ ಹೊಂದಿಸಲು ಯೂಟ್ಯೂಬ್ ನೋಡಿ ಕಾರುಗಳ ಸಾಫ್ಟ್‌ವೇರ್ ಹ್ಯಾಕ್ ಮಾಡುವುದನ್ನು ಕಲಿತು ಕಾರು ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೇವರಬೀಸನಹಳ್ಳಿ ನಿವಾಸಿ ಅರುಣ್ ಕುಮಾರ್(25) ಬಂಧಿತ. ಕೋಲಾರದ ಮುಳಬಾಗಿಲು ಮೂಲದವನಾದ ಈತ ಬಿ.ಕಾಂ ಪದವಿಧರ. ಕಳೆದ ಐದು ತಿಂಗಳಿಂದ ನಗರದ ದೇವರಬೀಸನಹಳ್ಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಕಾರುಗಳ ಸಾಫ್ಟ್‌ವೇರ್ ಹ್ಯಾಕ್ ಮಾಡುವ ಚೀನಾ ಮೂಲದ ‘ಎಕ್ಸ್‌ಟೂಲ್ ಆಟೋ ಡಯಾಗ್ನಿಸ್ಟಿಕ್ ಟೂಲ್ಸ್’ ಎಂಬ ಡಿವೈಸ್, ಹತ್ತು ಕಾರು, ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru: ರಸ್ತೆಯಲ್ಲಿ ಮಲಗಿದ್ದ ಬೀದಿ ನಾಯಿ ಮೇಲೆ ಕಾರು ಹರಿಸಿ ಕೊಂದವನ ಸೆರೆ
ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾರು ಕಳವು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಮಡಿವಾಳ ಎಸಿಪಿ ಸುಧೀರ್ ಎಂ.ಹೆಗಡೆ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಮುನಿರೆಡ್ಡಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಕೆಲ ದಿನಗಳ ಹಿಂದೆ ಎಚ್‌ಎಸ್‌ಆರ್ ಲೇಔಟ್ ಠಾಣಾ ವ್ಯಾಪ್ತಿಯ ಟೀಚರ್ಸ್ ಕಾಲೋನಿ ಮುಖ್ಯರಸ್ತೆಯಲ್ಲಿ ಪೊಲೀಸರು ಗಸ್ತು ತಿರುಗುವಾಗ ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಹೋಗುತ್ತಿದ್ದ ಆರೋಪಿ ಅರುಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ಕಾರು ಕಳವು ಕೃತ್ಯಗಳು ಬೆಳಕಿಗೆ ಬಂದಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯೂಟ್ಯೂಬ್ ನೋಡಿ ಕಲಿತ
ಹೆಂಗಸರ ಚಟಕ್ಕೆ ಬಿದ್ದಿದ್ದ ಆರೋಪಿ ಈ ಹಿಂದೆ ತನ್ನ ಮೋಜು-ಮಸ್ತಿಗೆ ಹಣ ಹೊಂದಿಸಲು ನೆರೆಯ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ದರೋಡೆ, ಕಳ್ಳತನ ಮಾಡಿದ್ದ. ದರೋಡೆ ಪ್ರಕರಣದಲ್ಲಿ ಆಂಧ್ರಪ್ರದೇಶದ ಮದನಪಲ್ಲಿ ಜೈಲು ಸೇರಿದ್ದ. ಈ ವೇಳೆ ಕಾರು ಕಳವು ಪ್ರಕರಣದಲ್ಲಿ ಜೈಲು ಸೇರಿದ್ದ ರಾಕೇಶ್ ಎಂಬಾತನ ಪರಿಚಯಿಸಿಕೊಂಡು ತಂತ್ರಜ್ಞಾನ ಬಳಸಿ ಕಾರು ಕಳವು ಮಾಡುವ ಬಗ್ಗೆ ಮಾಹಿತಿ ಪಡೆದಿದ್ದ. ಬಳಿಕ ಯೂಟ್ಯೂಬ್‌ನಲ್ಲಿ ಕಾರು ಕಳವಿಗೆ ಬಳಸುವ ಡಿವೈಸ್ ಬಗ್ಗೆ ತಿಳಿದುಕೊಂಡು ಆನ್‌ಲೈನ್‌ನಲ್ಲಿ ಸುಮಾರು .50 ಸಾವಿರ ಪಾವತಿಸಿ ಚೀನಾದಲ್ಲಿ ಉತ್ಪಾದಿಸಿದ ಎಕ್ಸ್‌ಟೂಲ್ ಆಟೋ ಡಿಯಾಗ್ನೋಸ್ಟಿಕ್ ಟೂಲ್ ಡಿವೈಸ್ ಖರೀಸಿದ್ದ. ಆ ಡಿವೈಸ್ ಬಳಸಿಕೊಂಡು ನಗರದಲ್ಲಿ ಕಾರುಗಳನ್ನು ಕದ್ದು ಪರಾರಿಯಾಗುತ್ತಿದ್ದ. ಈತನ ಬಂಧನದಿಂದ ಕೋಣನಕುಂಟೆ, ಮೈಕೋ ಲೇಔಟ್, ಬಿಡದಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಏಳು ಕಾರು ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru: ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಬೃಹತ್ ಕಾರ್ಯಾಚರಣೆ
ಸ್ಟೇರಿಂಗ್ ಕೆಳಗೆ ಡಿವೈಸ್ ಕನೆಕ್ಟ್ ಮಾಡಿ ಅನ್‌ಲಾಕ್
ಆರೋಪಿ ರಾತ್ರಿ ವೇಳೆ ನಗರದಲ್ಲಿ ರಸ್ತೆ ಬದಿ ನಿಲುಗಡೆ ಮಾಡಿದ ಕಾರಿನ ಗಾಜು ಒಡೆದು ನಂತರ ಸ್ಟೇರಿಂಗ್ ಕೆಳಗೆ ಡಿವೈಸ್ ಇರಿಸಿ ಕಾರಿನ ಸಾಫ್‌್ಟವೇರ್ ವೈಯರನ್ನು ಡಿವೈಸ್‌ಗೆ ಸಂಪರ್ಕ ಕಲ್ಪಿಸುತ್ತಿದ್ದ. ಬಳಿಕ ಕಾರಿನ ನಕಲಿ ಕೀಯನ್ನು ಡಿವೈಸ್‌ಗೆ ಸಂಪರ್ಕ ಕಲ್ಪಿಸಿ, ಡಿವೈಸ್‌ನಲ್ಲಿ ಕಾರಿನ ಆ್ಯಪ್ ತೆರೆದು ಸಿಸ್ಟಮ್ ಆಪರೇಟ್ ಮಾಡಿ ಕ್ಷಣಮಾತ್ರದಲ್ಲಿ ಕಾರು ಚಾಲನೆ ಮಾಡಿಕೊಂಡು ಪರಾರಿಯಾಗುತ್ತಿದ್ದ. ಕದ್ದ ಕಾರುಗಳನ್ನು ತಮಿಳುನಾಡು ಹಾಗೂ ಆಂಧ್ರಪ್ರದೇಶದ ವಿವಿಧೆಡೆ ತೆಗೆದುಕೊಂಡು ಹೋಗಿ ನೋಂದಣಿ ಫಲಕ ಅಳವಡಿಸಿ, ನಕಲಿ ಆರ್‌ಸಿ, ವಿಮೆ ದಾಖಲೆ ಸೃಷ್ಟಿಸಿ ಗಿರಾಕಿಗಳಿಗೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಹುಡುಗಿಯರ ಜತೆ ಮಸ್ತ್ ಮಜಾ
ಆರೋಪಿ ಅರುಣ್ ಕದ್ದ ಕಾರು ಮಾರಾಟ ಮಾಡಿ ಬಂದ ಹಣವನ್ನು ತೆಗೆದುಕೊಂಡು ಯುವತಿಯರ ಜತೆ ಪ್ರವಾಸಿ ತಾಣಗಳಿಗೆ ತೆರಳಿ ಮಜಾ ಮಾಡುತ್ತಿದ್ದ. ಗೋವಾ, ಪಾಂಡಿಚೇರಿ, ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿದುಕೊಂಡು ಮಜಾ ಮಾಡುತ್ತಿದ್ದ. ಕ್ಯಾಸಿನೋಗಳಲ್ಲಿ ಜೂಜಾಡುತ್ತಿದ್ದ. ಹಣ ಖಾಲಿಯಾದ ಬಳಿಕ ಮತ್ತೆ ಡಿವೈಸ್ ಬಳಸಿ ಕಾರು ಕಳವು ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ