Bengaluru Crime: ತುಮಕೂರಿಂದ ಬೆಂಗ್ಳೂರಿಗೆ ಬಂದು ಬೈಕ್‌ ಕಳ್ಳತನ ಮಾಡಿದ್ದ ಖದೀಮ ಅರೆಸ್ಟ್‌

Published : Apr 09, 2022, 11:56 AM IST
Bengaluru Crime: ತುಮಕೂರಿಂದ ಬೆಂಗ್ಳೂರಿಗೆ ಬಂದು ಬೈಕ್‌ ಕಳ್ಳತನ ಮಾಡಿದ್ದ ಖದೀಮ ಅರೆಸ್ಟ್‌

ಸಾರಾಂಶ

*   ಕಾಮಾಕ್ಷಿಪಾಳ್ಯ ಪೊಲೀಸರ ಕಾರ್ಯಾಚರಣೆ *  ಗೇರ್ ಗಾಡಿ ಓಡಿಸಲು ಬಾರದವನಿಂದ ವಾಹನ ಕಳ್ಳತನ *  ಬಂಧಿತ ಅರೋಪಿಯಿಂದ 10 ದ್ವಿಚಕ್ರ ವಾಹನ ಜಪ್ತಿ 

ಬೆಂಗಳೂರು(ಏ.09):  ಗೇರ್‌ಲೆಸ್ ವಾಹನವನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಆರೋಪಿ ಶ್ರೀನಿವಾಸ್ ಬಂಧಿಸುವಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. 

ತುಮಕೂರಿನಿಂದ‌ ಬಸ್‌ನಲ್ಲಿ ಬಂದು ವಾಹನ ಕದ್ದು ಪರಾರಿಯಾಗುತ್ತಿದ್ದ. ಗ್ರಾಮಾಂತರ ಭಾಗದಲ್ಲೇ ವಾಹನಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡ್ತಿದ್ದ. ಡಾಕ್ಯೂಮೆಂಟ್ಸ್ ಕೊಡ್ತಿನಿ ಮೊದಲು ವಾಹನ ಖರೀದಿಸಿ ಎಂದು ಮಾರಾಟ ಮಾಡ್ತಿದ್ದನಂತೆ. ಗ್ರಾಮಗಳಲ್ಲಿ ವಾಹನಗಳ ಬಗ್ಗೆ ಅಷ್ಟಾಗಿ ಪೊಲೀಸರು ಪರಿಶೀಲನೆ ನಡೆಸುವುದಿಲ್ಲ. ಇದನ್ನರಿತಿರುವ ಶ್ರೀನಿವಾಸ್ ತುಮಕೂರಿನಿಂದ ನಗರಕ್ಕೆ ಬಂದು ವಾಹನ ಕಳವು ಮಾಡ್ತಿದ್ದ. ಹೆಚ್ಚಾಗಿ ಟಿವಿಎಸ್ ಮತ್ತು ಹೋಂಡಾ ಆಕ್ಟೀವ್‌ಗಳನ್ನೇ ಕದಿಯುತ್ತಿದ್ದ ಗೇರ್ ಗಾಡಿಗಳು ಓಡಿಸಲು ಬಾರದ ಹಿನ್ನಲೆ ಗೇಯರ್ ಲೆಸ್ ಗಾಡಿಗಳನ್ನೇ ಕದಿಯುತ್ತಿದ್ದನು. 

Drug Bust: ಬೆಂಗ್ಳೂರಲ್ಲಿ ಪೊಲೀಸರ ಭರ್ಜರಿ ಭೇಟೆ: 38 ಕೋಟಿ ಡ್ರಗ್ಸ್‌ ಜಪ್ತಿ

ಖರ್ಚಿಗೆ ಹಣವಿಲ್ಲವೆಂದು ವಾಹನ ಕದಿಯುತ್ತಿದಾಗಿ ವಿಚಾರಣೆ ವೇಳೆ ಆರೋಪಿ ಶ್ರೀನಿವಾಸ್ ತಪ್ಪೊಪಿಕೊಂಡಿದ್ದಾನೆ. ತುಮಕೂರಿನ ಗುಬ್ಬಿ ನಿವಾಸಿಯಾಗಿರುವ ಶ್ರೀನಿವಾಸ್ ನನ್ನ ಪತ್ನಿ ಕೂಡ ಬಿಟ್ಟು ಹೋಗಿದ್ದಾಳೆ ಅಂತ ತಿಳಿದು ಬಂದಿದೆ. ಹೀಗಾಗಿ ಹಣ ಮಾಡಲು ಶ್ರೀನಿವಾಸ್ ಕಳ್ಳತನಕ್ಕಿಳಿದಿದ್ದನಂತೆ. 

ಬಂಧಿತ ಆರೋಪಿಯಿಂದ 5 ಲಕ್ಷ 20 ಸಾವಿರ ಬೆಲೆಯ 10 ದ್ವಿಚಕ್ರವಾಹನ ವಶ ಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ವ್ಯಕ್ತಿಯ ತಲೆ ಕಡಿದು ಜಮೀನಿನಲ್ಲಿ ಹೂತಿಟ್ಟಿದ್ದ ಸಿನಿಮಾ ಕಲಾವಿದನ ಬಂಧನ

ಚಿತ್ರದುರ್ಗ: ಆತ ಯಾರ ಸಹವಾಸಕ್ಕೂ ಹೋಗದೇ ತನ್ನ ಪಾಡಿಗೆ ತಾನು ಗೂಡಂಗಡಿ ಇಟ್ಕೊಂಡು ಜೀವನ ಸಾಗಿಸ್ತಿದ್ದ ವ್ಯಕ್ತಿ. ಸಿನಿಮಾದಲ್ಲಿ ವಿಲನ್ ಪಾರ್ಟ್ ಮಾಡುತ್ತಿದ್ದ ಪಕ್ಕದ ಮನೆಯವ ರಿಯಲ್ ಲೈಫ್‌ನಲ್ಲೂ ವಿಲನ್ ರೀತಿ ವರ್ತಿಸಿ ಆತನ ತಲೆ ಕಡಿದು ಜಮೀನಿನಲ್ಲಿ ಹೂತಾಕಿರೋ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ಏ.08 ರಂದು ನಡೆದತ್ತು. 

ಹೀಗೆ ತನ್ನ ಗಂಡನನ್ನು ಕಳೆದುಕೊಂಡ ನೋವಿನಲ್ಲಿ ಮಕ್ಕಳೊಂದಿಗೆ ನಡು ರಸ್ತೆಯಲ್ಲೇ ಕಣ್ಣೀರು ಹಾಕ್ತಿರೋ ಗಂಗಮ್ಮ. ಅತ್ತ ತಲೆ ಬೇರ್ಪಟ್ಟು ಶವವಾಗಿ ಮಲಗಿರೋ ಮೃತ ದುರ್ದೈವಿ ರಮೇಶ (45). ಇಂತಹ ಭೀಕರ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಶ್ರವಣಗೆರೆ ಗ್ರಾಮ. ಮೃತ ದುರ್ದೈವಿ ರಮೇಶ ಹಾಗೂ ಪಕ್ಕದ ಮನೆಯಲ್ಲೇ ಇದ್ದ ಶ್ರೀನಿವಾಸ್ ಅಲಿಯಾಸ್‌ ರೌಡಿ ಸೀನ. ಇಬ್ಬರು ಮೊದಲಿನಿಂದಲೂ ಉತ್ತಮ ಸ್ನೇಹಿತರು. ಇಬ್ಬರೂ ನಿನ್ನೆ ಸಂಜೆಯವರೆಗೂ ಎಣ್ಣೆ ಹೊಡೆದುಕೊಂಡೆ ಜೊತೆಯಲ್ಲೇ ಓಡಾಡಿದ್ದರು. 

ಹೋಗಿದ್ದು 2 ಲಕ್ಷ ಕದಿಯಲು, ಸಿಕ್ಕಿದ್ದು 2 ಕೋಟಿ: ಹಣ ಸಿಕ್ಕ ಖುಷಿಯಲ್ಲಿ ಅಲ್ಲೇ ಎಣ್ಣೆ ಪಾರ್ಟಿ..!

ಆದರೆ ರಮೇಶ ತಮ್ಮದೇ ಇನ್ನೊಂದು ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಯಾರಿಗೂ ಗೊತ್ತಾಗಬಾರದು ಎಂಬ ಉದ್ದೇಶದಿಂದ ಎಲ್ಲರೂ ಮಲಗಿದ ವೇಳೆ ಸ್ಕೆಚ್ ಹಾಕಿ ಸೀನ ಮನೆಗೆ ನುಗ್ಗಿ, ರಮೇಶನ ಕತ್ತು ಕತ್ತರಿಸಿ ಊರಾಚೆ ಇರುವ ಜಮೀನಿನಲ್ಲಿ ಊತಿಟ್ಟಿದ್ದಾನೆ. ನಂತರ ಆ ಕೊಲೆಗೂ ನನಗೂ ಸಂಬಂಧವೇ ಇಲ್ಲ ಎಂಬಂತೆ ತಮ್ಮ ಮನೆಯಲ್ಲಿ ಅರಾಮಗಿ ಮಲಗಿದ್ದಾನೆ ಭೂಪ. ಇತ್ತ ಕೊಲೆಗೆ ಕಾರಣ ಏನಿರಬಹುದು ಎಂದು ಕೆದಕಿದಾಗ, ರೌಡಿ ಸೀನ ನನಗೆ ಯಾರೋ ವಾಮಾಚಾರ ಮಾಡಿಸಿದ್ದಾರೆ ಅದಕ್ಕಾಗಿಯೇ ನಮ್ಮ ಸಂಸಾರ ಸರಿಯಿಲ್ಲ ಎಂದೆಲ್ಲಾ ಮೂಢನಂಬಿಕೆಯ ಅನುಮಾನ ಇಟ್ಟುಕೊಂಡು ಓಡಾಡುತ್ತಿದ್ದನಂತೆ. ಆದರೆ ಅಮಾಯಕ ರಮೇಶ ಮಾತ್ರ ಸೀನನ ಅನುಮಾನಕ್ಕೆ ತುತ್ತಾಗಿ ಕೊಲೆಯಾಗಿರೋದು ದುರಂತ ಅಂತಿದ್ದಾರೆ ಸ್ಥಳೀಯರು. 

ಇನ್ನೂ ಈ ಕೊಲೆ ನಡೆಯುವುದಕ್ಕೂ ಮುನ್ನ ರಮೇಶ ಮಲಗಿದ್ದ ಮನೆಯ ಹೊರಭಾಗದಲ್ಲೇ ಅವರ ತಂದೆ ಮಲಗಿದ್ದರು. ರಾತ್ರಿ ವೇಳೆ ಸೀನ ಕೊಲೆ ಮಾಡಿ ಮನೆಯಿಂದ ಹೊರಗೆ ಬರುವ ವೇಳೆ ಎಚ್ಚರಗೊಂಡು ಕಳ್ಳ, ಕಳ್ಳ ಎಂದು ಕೂಗಿದ್ದಾರೆ. ಅಷ್ಟೊತ್ತಿಗಾಗಲೇ ಚೀಲದಲ್ಲಿ ರಮೇಶನ ತಲೆಯನ್ನು ಕತ್ತರಿಸಿಕೊಂಡು ಓಡೋಗ್ತಿದ್ದನಂತೆ ರೌಡಿ ಸೀನ. ಕೂಡಲೇ ಮನೆಯೊಳಗೆ ಹೋಗಿ ಮಗನನ್ನು ನೋಡಿದಾಗ ರುಂಡ ಬೇರ್ಪಟ್ಟು ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿರೋದನ್ನು ಕಂಡು ಹೌಹಾರಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ