Bengaluru: ಕಾಲೇಜಿನ ಲೇಡಿಸ್ ಟಾಯ್ಲೆಟ್‌ಗೆ ನುಗ್ಗಿದ್ದ ಆರೋಪಿ ಬಂಧನ

Published : Jan 23, 2023, 02:28 PM IST
Bengaluru: ಕಾಲೇಜಿನ ಲೇಡಿಸ್ ಟಾಯ್ಲೆಟ್‌ಗೆ ನುಗ್ಗಿದ್ದ ಆರೋಪಿ ಬಂಧನ

ಸಾರಾಂಶ

ಜಯನಗರದ ವಿಜಯ ಕಾಲೇಜಿನಲ್ಲಿ ಹುಡುಗಿಯರ ಶೌಚಾಲಯಕ್ಕೆ ಯುವಕನೊಬ್ಬ ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಜಯ್ ಕುಮಾರ್ (42) ಬಂಧಿತ ಆರೋಪಿ. 

ಬೆಂಗಳೂರು (ಜ.23): ಜಯನಗರದ ವಿಜಯ ಕಾಲೇಜಿನಲ್ಲಿ ಹುಡುಗಿಯರ ಶೌಚಾಲಯಕ್ಕೆ ಯುವಕನೊಬ್ಬ ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಜಯ್ ಕುಮಾರ್ (42) ಬಂಧಿತ ಆರೋಪಿ. ಇದೇ ತಿಂಗಳು 10 ತಾರೀಖು ವಿಜಯ ಕಾಲೇಜಿನ ಮಹಿಳಾ ಶೌಚಾಲಯಕ್ಕೆ ಆರೋಪಿಯು ನುಗಿದ್ದ. ಘಟನೆ ನಡೆದ 13 ದಿನಗಳ ಬಳಿಕ ಕೊನೆಗೂ ಆರೋಪಿಯನ್ನು ಜಯನಗರ‌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಗ್ಯಾಸ್ಟ್ರೊಲಜಿ ಖಾಯಿಲೆಯಿಂದ ಬಳಲುತ್ತಿದ್ದ ಅಜಯ್, ವಿಜಯ ಕಾಲೇಜು ಬಳಿ ತೆರಳುತಿದ್ದ. ಈ ವೇಳೆ ಗಡಿಬಿಡಿಯಲ್ಲಿ ಲೇಡಿಸ್ ಬಾತ್ ರೂಂಗೆ ತೆರಳಿದ್ದ.ಈ ವೇಳೆ ಹೆಣ್ಣುಮಕ್ಕಳನ್ನು ಕಂಡು ಗಾಬರಿಯಾಗಿ ಅವರ ಬಾಯಿ ಮುಚ್ಚಿ, ಬೆದರಿಕೆ ಹಾಕಿದ್ದ. ಸದ್ಯ ಆಡಳಿತ ಮಂಡಳಿ ದೂರಿನನ್ವಯ ಆರೋಪಿ ಅಜಯ್ ಬಂಧನವಾಗಿದೆ. ಜ. 10ರಂದು ವಿದ್ಯಾರ್ಥಿನಿಯೊಬ್ಬಳು ಶೌಚಾಗೃಹದ ಒಳಗೆ ಹೋಗಿದ್ದಳು. ಈ ವೇಳೆ ಅದೇ ಶೌಚಗೃಹದ ಒಳಗಡೆ ಯುವಕನೊಬ್ಬ ನುಗ್ಗಿದ್ದ. ಬಳಿಕ ವಿದ್ಯಾರ್ಥಿನಿಯ ಜೊತೆ ಅಸಭ್ಯ‌ವಾಗಿ ವರ್ತಿಸಿದ್ದ. 

ಪ್ಲಾಸ್ಟಿಕ್ ರೇಷನ್ ಅಕ್ಕಿಯೆಂದು ಭಯಗೊಂಡ ಗ್ರಾಮಸ್ಥರು: ಅಡುಗೆ ಮಾಡಲು ಭಯ ಪಡುತ್ತಿರುವ ಮಹಿಳೆಯರು

ತಕ್ಷಣ ವಿದ್ಯಾರ್ಥಿನಿ ಕಿರುಚಲು ಶುರು ಮಾಡಿದಾಗ, ಆತ ಗಾಬರಿಯಿಂದ ಟಾಯ್ಲೆಟ್​ನ ಬಾಗಿಲು ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದ. ಈ ಘಟನೆ ಕಾಲೇಜು ವಿದ್ಯಾರ್ಥಿನಿಯರಲ್ಲಿ ಆತಂಕ ಸೃಷ್ಟಿಸಿತ್ತು. ಘಟನೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಸಹ ನಡೆಸಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಹೆದರಿದ ಕಾಲೇಜಿನ ಆಡಳಿತ ಮಂಡಳಿ ಜಯನಗರ ಪೊಲೀಸರಿಗೆ ದೂರು ನೀಡಿತ್ತು. ಇದೀಗ ಅಜಯ್​ ಕುಮಾರ್​ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಹನುಮಂತನಗರ ಎರಡನೇ ಹಂತದಲ್ಲಿ ಆರೋಪಿಯು ತಲೆ ಮರೆಸಿಕೊಂಡಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?