Bengaluru: ಓವರ್ ಟೇಕ್ ಮಾಡಿ ಸಾರಿ ಕೇಳುವ ನೆಪದಲ್ಲಿ ಕಾರನ್ನು ಕದ್ದೊಯ್ದಿದ್ದವನ ಬಂಧನ

By Govindaraj S  |  First Published Nov 15, 2022, 8:41 AM IST

ಬೈಕಲ್ಲಿ ಕಾರನ್ನ ಓವರ್ ಟೇಕ್ ಮಾಡ್ತಾರೆ, ಮುಂದೆ ಕಾರನ್ನ ಅಡ್ಡ ಹಾಕಿ ಸಾರಿನೂ ಕೇಳ್ತಾರೇ, ಇಟ್ಸ್ ಓಕೆ ಅನ್ನೊ ಅಷ್ಟರಲ್ಲಿ ಚಾಕು ತೆಗೆದು ಚುಚ್ಚಲು ಮುಂದಾಗ್ತಾರೆ. ಹೌದು! ಚಾಕು ತೋರಿಸಿ ವಿದೇಶಿ ಪ್ರಜೆಯ ಕಾರನ್ನ ದೋಚಿದ್ದ ಆರೋಪಿಯನ್ನು ನಗರದ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. 


ಬೆಂಗಳೂರು (ನ.15): ಬೈಕಲ್ಲಿ ಕಾರನ್ನ ಓವರ್ ಟೇಕ್ ಮಾಡ್ತಾರೆ, ಮುಂದೆ ಕಾರನ್ನ ಅಡ್ಡ ಹಾಕಿ ಸಾರಿನೂ ಕೇಳ್ತಾರೇ, ಇಟ್ಸ್ ಓಕೆ ಅನ್ನೊ ಅಷ್ಟರಲ್ಲಿ ಚಾಕು ತೆಗೆದು ಚುಚ್ಚಲು ಮುಂದಾಗ್ತಾರೆ. ಹೌದು! ಚಾಕು ತೋರಿಸಿ ವಿದೇಶಿ ಪ್ರಜೆಯ ಕಾರನ್ನ ದೋಚಿದ್ದ ಆರೋಪಿಯನ್ನು ನಗರದ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಸೈಯ್ಯದ್ ಯಾಸೀನ್ (26) ಬಂಧಿತ ಆರೋಪಿಯಾಗಿದ್ದು, ತನ್ನ ಗೆಳೆಯ ಮಹಮ್ಮದ್ ಮನ್ಸೂರ್ ಜೊತೆಗೂಡಿ ಚಾಕು ತೋರಿಸಿ ಕಾರನ್ನ ದೋಚಿದ್ದ. ಆರೋಪಿಯು ನವೆಂಬರ್ 11ರಂದು ಸುಡಾನ್ ದೇಶದ ಪ್ರಜೆಗೆ ಚಾಕು ತೋರಿಸಿ ಹ್ಯೂಂಡೈ ವರ್ನಾ ಕಾರನ್ನ ಕದ್ದೊಯ್ದಿದ್ದ. 

ಪ್ರಕರಣ ಸಂಬಂಧ ಸುಡಾನ್ ಪ್ರಜೆ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆರೋಪಿಗಳು ಚಾಕು ತೋರಿಸಿ ಕಾರನ್ನ ಕದ್ದೊಯ್ಯುವ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಯಾಸೀನ್‌ನನ್ನು ಬಂಧಿಸಲಾಗಿದ್ದು, ನಾಪತ್ತೆಯಾಗಿರೋ ಮಹಮ್ಮದ್ ಮನ್ಸೂರ್‌ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಇನ್ನು ಬಂಧಿತನಿಂದ 2 ಲಕ್ಷ ಮೌಲ್ಯದ ಒಂದು ಹ್ಯೂಂಡೈ ಕಾರು ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.

Tap to resize

Latest Videos

PSI Recruitment Scam: 20 ಲಕ್ಷ ಪಡೆದು ಉತ್ತರ ಹೇಳಿದ್ದವ ಸೆರೆ

ಗ್ರಾಹಕರ ಸೋಗಿನಲ್ಲಿ 6 ಚಿನ್ನದ ನಾಣ್ಯ ಕಳವು: ಗ್ರಾಹಕ ಸೋಗಿನಲ್ಲಿ ಆಭರಣ ಅಂಗಡಿಗೆ ಬಂದಿರುವ ಇಬ್ಬರು ದುಷ್ಕರ್ಮಿಗಳು ಸಿಬ್ಬಂದಿಯ ಗಮನ ಬೇರೆಡೆ ಸೆಳೆದು 60 ಗ್ರಾಂ ತೂಕದ 6 ಚಿನ್ನದ ನಾಣ್ಯಗಳನ್ನು ಕದ್ದು ಪರಾರಿಯಾಗಿರುವ ಘಟನೆ ತಿಲಕನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಯನಗರ 9ನೇ ಬ್ಲಾಕ್‌ನ 41 ಅಡ್ಡ ರಸ್ತೆಯ ಅಂಬಿಕಾ ಜ್ಯೂವೆಲರಿ ಅಂಗಡಿಯಲ್ಲಿ ನ.2ರಂದು ಈ ಘಟನೆ ನಡೆದಿದ್ದು, ನ.9ರಂದು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಕಳ್ಳರ ಕೈಚಳಕ ಬೆಳಕಿಗೆ ಬಂದಿದೆ. ಈ ಸಂಬಂಧ ಅಂಗಡಿ ಮಾಲೀಕ ರಮೇಶ್ವರ ಲಾಲ್‌ಜತ್‌ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಅಂಗಡಿಯಲ್ಲಿ ನ.2ರಂದು ದೂರುದಾರ ರಮೇಶ್ವರ ಲಾಲ್‌, ಕೆಲಸಗಾರರಾದ ದೀಪಕ ಮತ್ತು ಪ್ರವೀಣ್‌ ಇದ್ದರು. ಮಧ್ಯಾಹ್ನ 3 ಗಂಟೆಗೆ ರಮೇಶ್ವರಲಾಲ್‌ ಕೆಲಸಗಾರರನ್ನು ಅಂಗಡಿಯಲ್ಲೇ ಬಿಟ್ಟು ಊಟಕ್ಕೆ ಮನೆಗೆ ತೆರಳಿದ್ದರು. ಈ ವೇಳೆ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದಿರುವ ಇಬ್ಬರು ಅಪರಿಚಿತರು ಕೆಲಸಗಾರರ ಗಮನ ಬೇರೆಡೆ ಸೆಳೆದು 60 ಗ್ರಾಂ ತೂಕದ 6 ಚಿನ್ನದ ನಾಣ್ಯಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ನ.9ರಂದು ಅಂಗಡಿಯಲ್ಲಿದ್ದ ಚಿನ್ನಾಭರಣ ಪರಿಶೀಲಿಸುವಾಗ 60 ಗ್ರಾಂ ಚಿನ್ನ ಕಡಿಮೆ ಬಂದಿದೆ. ಈ ವೇಳೆ ಅಂಗಡಿಯ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ನ.2ರಂದು ಬಂದಿದ್ದ ಇಬ್ಬರು ಅಪರಿಚಿತರು ಚಿನ್ನದ ನಾಣ್ಯ ಕದ್ದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಗಳ ಬಂಧನಕ್ಕೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆ ಕಳ್ಳನ ಬಂಧನ: ಕಲಬುರಗಿ ನಗರದಲ್ಲಿ ಹಗಲು ಮತ್ತು ರಾತ್ರಿ ಮನೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಸಬ್‌ ಅರ್ಬನ್‌ ಪೊಲೀಸರು ಬಂಧಿಸಿದ್ದಾರೆ. ನಗರದ ಕೃಷ್ಣಾ ಕಾಲೋನಿಯ ಮುಸ್ತಫಾ ಮಜೀದ್‌ ಹತ್ತಿರದ ನಿವಾಸಿ ಶೇಖ್‌ ಶಾರುಖ್‌ ಅಲಿಯಾಸ್‌ ಇಮ್ರಾನ್‌ ಶೇಖ್‌ (25) ಎಂಬಾತನನ್ನು ಬಂಧಿಸಿ 390,000 ರು. ಮೌಲ್ಯದ 78 ಗ್ರಾಂ. ಬಂಗಾರದ ಆಭರಣ, 23,400 ರು. ಮೌಲ್ಯದ 290 ಗ್ರಾಂ. ಬೆಳ್ಳಿ ಆಭರಣ ಸೇರಿ 4,13,400 ರು. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣ ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Bengaluru: ಯುವತಿ ಹಿಂಬಾಲಿಸಿ ಮೊಬೈಲ್‌ ಕಸಿದು ಪರಾರಿಯಾಗುತ್ತಿದ್ದ ಚಾಲಾಕಿ ಬಂಧನ

ಈತ ನಗರದ ವಿಶ್ವರಾಧ್ಯ ದೇವಸ್ಥಾನ ಹಿಂದುಗಡೆ, ಸ್ವರಗೇಟ್‌ ನಗರ, ರೇವಣಸಿದ್ದೇಶ್ವರ ಕಾಲೋನಿ, ಮಿಲ್ಲತ್‌ ನಗರಗಳಲ್ಲಿ ಮನೆಗಳನ್ನು ಕಳ್ಳತನ ಮಾಡಿದ್ದ. ಈ ಸಂಬಂಧ ಸಬ್‌ ಅರ್ಬನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತ ವೈ.ಎಸ್‌.ರವಿಕುಮಾರ, ಉಪ ಪೊಲೀಸ್‌ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ, ಸಬ್‌ ಅರ್ಬನ್‌ ಉಪ ವಿಭಾಗದ ಎಸಿಪಿ ಗೀತಾ ಬೇನಹಾಳ ಅವರ ಮಾರ್ಗದರ್ಶನದಲ್ಲಿ ಪಿ.ಎಸ್‌.ಐ. ಸಲಿಮೋದ್ದಿನ್‌, ಸಿಬ್ಬಂದಿಗಳಾದ ಎ.ಎಸ್‌.ಐ ನಾಗರಾಜ, ರಾಜಕುಮಾರ ಮೂಲಗೆ, ಮಲ್ಲಿಕಾರ್ಜುನ, ನಾಗೇಂದ್ರ, ಪ್ರಕಾಶ, ಅನಿಲ ಅವರನ್ನೊಳಗೊಂಡ ತಂಡ ತನಿಖೆ ನಡೆಸಿ ಕಳ್ಳನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.

click me!