ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮ; ಬೀದಿಗೆ ಬಿದ್ದ ಬಡಮಹಿಳೆ! ಸೂಕ್ತ ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯ

By Ravi Janekal  |  First Published Feb 6, 2024, 10:25 AM IST

ಆಕಸ್ಮಿಕವಾಗಿ ಮನೆಗೆ ಬೆಂಕಿಬಿದ್ದು ಸಂಪೂರ್ಣ ಸುಟ್ಟು ಕರಕಲಾದ ದುರ್ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾದಪಟ್ಟಣದಲ್ಲಿ ನಡೆದಿದೆ. ಇಂದ್ರಮ್ಮ ಎಂಬುವವರಿಗೆ ಸೇರಿದ ಮನೆ.


ತುಮಕೂರು (ಫೆ.6) : ಆಕಸ್ಮಿಕವಾಗಿ ಮನೆಗೆ ಬೆಂಕಿಬಿದ್ದು ಸಂಪೂರ್ಣ ಸುಟ್ಟು ಕರಕಲಾದ ದುರ್ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾದಪಟ್ಟಣದಲ್ಲಿ ನಡೆದಿದೆ.

ಇಂದ್ರಮ್ಮ ಎಂಬುವವರಿಗೆ ಸೇರಿದ ಮನೆ. ಮನೆಯಲ್ಲಿಇಂದ್ರಮ್ಮ ಮತ್ತು ಅವರ ಮಗ ಇಬ್ಬರೇ ವಾಸವಾಗಿದ್ದರು. ಬೆಳಗ್ಗೆಯೇ ಮಗ ಕೆಲಸಕ್ಕೆ ಹೋಗಿದ್ದ, ಇತ್ತ ಇಂದ್ರಮ್ಮ ಸಹ ತೋಟದ ಕೆಲಸಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ತಗುಲಿ ಇಡೀ ಮನೆ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಹೋಗಿದೆ. ಮನೆಯಲ್ಲಿ ಬೆಂಕಿ, ದಟ್ಟ ಹೊಗೆ ಕಾಣಿಸಿಕೊಳ್ತಿದ್ದಂತೆ ಸ್ಥಳೀಯರು ಹಾಗೂ ಗ್ರಾಮಸ್ಥರೆಲ್ಲ ಸೇರಿ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ಇಡೀ ಮನೆಗೆ ಬೆಂಕಿ ಆವರಿಸಿದ್ದರಿಂದ ನಂದಿಸಲು ಹರಸಾಹಸಪಟ್ಟರು. ಆಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಸ್ಥಳೀಯರು. ತಕ್ಷಣ ಸ ಸ್ಥಳಕ್ಕಾಗಮಿಸಿದ  ಅಗ್ನಿಶಾಮಕ ದಳದ ಸಿಬ್ಬಂದಿ. ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Tap to resize

Latest Videos

undefined

ಉದ್ಯಮಿಗೆ ಮಂಜೂರಾಗಿದ್ದ ಸಾಲ ಅಕ್ರಮವಾಗಿ ಪಡೆದವನ ಬಂಧನ

ಬೆಂಕಿಯ ಕೆನ್ನಾಲಿಗೆ ಮನೆಯ ಅಟ್ಟದಲ್ಲಿದ್ದ 4 ಸಾವಿರ ಕೊಬ್ಬರಿ, ಟಿವಿ, ಬಟ್ಟೆಬರೆ, ದಿನಸಿ ಸೇರಿ ಅಗತ್ಯ ವಸ್ತುಗಳು ಸುಟ್ಟು ಕರಕಲು ಆಗಿವೆ. ಬೆಂಕಿ ಅವಘಡದಿಂದ ಮನೆ ಸಂಪೂರ್ಣ ಸುಟ್ಟುಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿ ಅಕ್ಷರಶಃ ಇಂದ್ರಮ್ಮ ಕುಟುಂಬ ಬೀದಿಗೆ ಬಿದ್ದಿದೆ. ಸರ್ಕಾರದಿಂದ ಸೂಕ್ತ ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

click me!