
ಮದ್ದೂರು (ನ.30): ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪೂಜಾ ಕುಣಿತ ಕಲಾವಿದ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ತೊರೆಶೆಟ್ಟಿಹಳ್ಳಿಯ ಮದ್ದೂರು - ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಜರುಗಿದೆ.
ತಾಲೂಕಿನ ಆತಗೂರು ಹೋಬಳಿಯ ತೂಬಿನಕೆರೆ ಗ್ರಾಮದ ನಂಜುಂಡಸ್ವಾಮಿ(34) ಮೃತ ದುರ್ದೈವಿ. ವೃತ್ತಿಯಲ್ಲಿ ಪೂಜಾ ಕುಣಿತ ಕಲಾವಿದನಾಗಿದ್ದ ನಂಜುಂಡಸ್ವಾಮಿ ಭಾನುವಾರ ರಾತ್ರಿ ತಾಲೂಕಿನ ಮಾದನಾಯಕನಹಳ್ಳಿಯ ಗೃಹಪ್ರವೇಶ ಕಾರ್ಯಕ್ರಮದ ನಂತರ ತಮ್ಮ ರಾಯಲ್ ಎನಿ ಫೀಲ್ಡ್ ಬೈಕ್ ನಲ್ಲಿ ಸ್ವಗ್ರಾಮಕ್ಕೆ ಬರುತ್ತಿದ್ದರು.
ಆರೋಗ್ಯ ಇಲಾಖೆಯ 262 ಹೊಸ ಆಂಬ್ಯುಲೆನ್ಸ್ ಸೇವೆಗಳಿಗೆ ಇಂದು ಸಿಎಂ ಚಾಲನೆ
ಬೆಳಗಿನ ಜಾವ 4.30ರ ಸಮಯದಲ್ಲಿ ಮದ್ದೂರು - ತುಮಕೂರು ರಾಜ್ಯ ಹೆದ್ದಾರಿಯ ತೊರೆಶೆಟ್ಟಿಹಳ್ಳಿಯ ಅಪ್ಪು ಡಾಬಾ ಬಳಿ ಎದುರಿನಿಂದ ಬಂದ ಲಾರಿ ಬೈಕ್ ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಅಪಘಾತದ ನಂತರ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಸಂಬಂಧ ಕೆಸ್ತೂರು ಠಾಣೆ ಪಿಎಸ್ ಐ ನರೇಶ್ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ವೆಂಕಟೇಗೌಡ ತನಿಖಾ ಕಾರ್ಯ ಕೈಗೊಂಡಿದ್ದಾರೆ.
ತುಮಕೂರು - ಮದ್ದೂರು ರಾಜ್ಯ ಹೆದ್ದಾರಿಯಲ್ಲಿ ಎಂ.ಸ್ಟ್ಯಾಂಡ್ , ಮರಳು ಮತ್ತು ಸಿಮೆಂಟ್ ಲಾರಿಗಳು ಅತಿಯಾಗಿ ಸಂಚರಿಸುತ್ತಿದ್ದವು. ಇಂತಹ ವಾಹನಗಳಿಂದ ಅಪಘಾತ ಸಂಭವಿಸಿರಬಹುದೇ ಎಂಬ ಬಗ್ಗೆ ಪೊಲೀಸರು ಹೆದ್ದಾರಿಯಲ್ಲಿ ಬರುವ ಮದ್ಯದ ಅಂಗಡಿ ಸೇರಿದಂತೆ ಇತರೆ ಅಂಗಡಿ, ಮನೆಗಳ ಮುಂದೆ ಇರುವ ಸಿಸಿ ಟಿವಿ ದೃಶ್ಯಾವಳಿ ಕಲೆಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.
ಅನುಮತಿ ಇಲ್ಲದೇ ತಾಯಿಯ ಮೊಬೈಲ್ ಬಳಸಿದ್ದಕ್ಕೆ ಮಗನಿಗೆ ಚೂರಿ ಇರಿದು ಕೊಂದ ತಂದೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ