ಬೆಂಗಳೂರು: ಮದುವೆಯಾಗಿ ಎರಡೇ ವರ್ಷದಲ್ಲಿ ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ!

By Ravi Janekal  |  First Published Feb 11, 2024, 9:42 PM IST

ಮನೆಯಲ್ಲಿ ಯಾರೂ ಇಲ್ಲದ ವೇಳೆ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರದಲ್ಲಿ ನಡೆದಿದೆ. ಕಾವ್ಯ(22) ನೇಣಿಗೆ ಶರಣಾಗಿರುವ ಗೃಹಿಣಿ


ಬೆಂಗಳೂರು (ಫೆ.11) ಮನೆಯಲ್ಲಿ ಯಾರೂ ಇಲ್ಲದ ವೇಳೆ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರದಲ್ಲಿ ನಡೆದಿದೆ.

ಕಾವ್ಯ(22) ನೇಣಿಗೆ ಶರಣಾಗಿರುವ ಗೃಹಿಣಿ. ಮೂಲತಃ ತುಮಕೂರಿನ ಕುಣಿಗಲ್ ನಿವಾಸಿಯಾಗಿರುವ ಕಾವ್ಯ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಪ್ರವೀಣ್ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದ ಪೋಷಕರು. 

Tap to resize

Latest Videos

ಪತಿ-ಪತ್ನಿ ರಾಜಗೋಪಾಲನಗರದ ಮೋಹನ್ ಥಿಯೇಟರ್ ಸಮೀಪದ ಮನೆಯಲ್ಲಿದ್ದರು. ದಾಂಪತ್ಯಕ್ಕೆ ಒಂದು ಮುದ್ದಾದ ಮಗುವಿದೆ. ಇದೀಗ ಒಂದು ವರ್ಷದ ಮಗುವನ್ನು ಬಿಟ್ಟು ನೇಣಿಗೆ ಶರಣಾಗಿರುವ ಗೃಹಿಣಿ. ಸಾವಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಸದ್ಯ ಘಟನಾ ಸ್ಥಳಕ್ಕೆ ರಾಜಗೋಪಾಲನಗರ ಪೋಲಿಸರು ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು: ಸ್ನೇಹಿತಗೆ ಸುಪಾರಿ ಕೊಟ್ಟು ಪತ್ನಿಯ ಕೊಲ್ಲಿಸಿದ, ಕೊಂದವನಿಗಿತ್ತು ಪತ್ನಿ ಕೊಂದ ಅನುಭವ!

click me!