ಗೋಳಗುಮ್ಮಟ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ತಿರುವು?

By Sathish Kumar KHFirst Published Nov 16, 2022, 8:28 PM IST
Highlights

* 198 ಅಡಿಯ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣು
* ನೌಕರಿ ಕೊಡಿಸೋದಾಗಿ ಯುವಕರಿಗೆ ವಂಚಿಸಿದ್ದನಾ ಸಲೀಂ
* ಹಣ ಕೇಳಲು ಯುವಕರಿಂದ ಸಲೀಂ ಮೊಬೈಲ್‌ಗೆ ಕರೆ

ವರದಿ: ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್
ವಿಜಯಪುರ (ನ.16) : ವಿಶ್ವವಿಖ್ಯಾತ ಗೋಳಗುಮ್ಮಟ ನೋಡಲು ದೇಶ ವಿದೇಶಗಳಿಂದ ಜನರು ಬರ್ತಾರೆ. ಇಂದು ಗೋಳಗುಮ್ಮಟ ವೀಕ್ಷಣೆಗೆ ಬಂದಿದ್ದ ಜನರಿಗೆ ಶಾಕ್‌ ಕಾದಿತ್ತು. ವ್ಯಕಿಯೊಬ್ಬ ಗೋಳಗುಮ್ಮಟದ ಮೇಲಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ. ಪ್ರಾಥಮಿಕ ಮಾಹಿತಿಗಳ ಪ್ರಕಾರ ನೌಕರಿ ಕೊಡಿಸೋದಾಗಿ ಹೇಳಿ ಸಾಕಷ್ಟು ಯುವಕರಿಂದ ಹಣ ಸುಲಿಗೆ ಮಾಡಿದ್ದ, ಬಳಿಕ ಒತ್ತಡಕ್ಕೆ ಒಳಗಾಗಿ ಗೋಳಗುಮ್ಮಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ವಿಜಯಪುರ ಗಾಂಧಿಚೌಕ ವ್ಯಾಪ್ತಿಯ ನಿವಾಸಿ 54 ವರ್ಷದ ಸಲೀಂ ತಿಕೋಟ್ಕರ್‌  (Saleem Thikkottar) ಗೋಳಗುಮ್ಮಟದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗೋಳಗುಮ್ಮಟದ (Gola Gummata) ಮೇಲ್ಬಾಗಕ್ಕೆ ಹತ್ತಿ ಹೋಗಿ ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಕ್ಯೂರಿಟಿ ಸಂಚಾರ ಮಾಡುತ್ತಿದ್ದ ವೇಳೆ ಸಲೀಂ ಸಾವನ್ನಪ್ಪಿ (Death) ಬಿದ್ದಿದ್ದರು. ಆಗ ಆತ ಮೇಲಿನಿಂದ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದು ಬಯಲಾಗಿದೆ. ಸ್ಥಳಕ್ಕೆ ಬಂದ ಗೋಳಗುಮ್ಮಟ ಪೊಲೀಸರು ಸಲೀಂ ಮೃತದೇಹವನ್ನ ಶವ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

ಅತ್ತೆ ಮಾವನನ್ನು ನೋಡಿಕೊಳ್ಳುವ ವಿಚಾರಕ್ಕೆ ಗಲಾಟೆ, ಸೊಸೆ ಕಾಟಕ್ಕೆ ತಾಯಿ ಮಗ ಆತ್ಮಹತ್ಯೆ!

ಪ್ರವಾಸಿಗರಂತೆ ಬಂದು ಗುಮ್ಮಟ ಮೇಲಿಂದ ಹಾರಿದ : ಗೋಳಗುಮ್ಮಟ ಬೆಳಿಗ್ಗೆ 6 ಗಂಟೆಗೆ ಪ್ರವಾಸಿಗರ (Tourists) ಭೇಟಿಗೆ ಬಾಗಿಲು ತೆರೆಯುತ್ತದೆ. ಸಂಜೆ 6 ಗಂಟೆಗೆ ಬಂದ್‌ ಆಗುತ್ತದೆ. ಸಲೀಂ ಕೂಡ 8 ಗಂಟೆ ಸುಮಾರಿಗೆ ಗೋಳಗುಮ್ಮಟಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದಾನೆ. ಟಿಕೇಟ್‌ ಇಲ್ಲದೆ ಒಳಗೆ ಪ್ರವಾಸಿಗರನ್ನ ಬಿಡುವುದಿಲ್ಲ. ಹಾಗಾಗಿ ತಾನು ಒಂದು ಟಿಕೇಟ್‌ (Ticket) ತೆಗೆದು ಪ್ರವಾಸಿಗರಂತೆ ಗೋಳಗುಮ್ಮಟ ಒಳಗೆ ಹೋಗಿದ್ದಾನೆ. ಆದರೆ ಈ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ತಾನೊಬ್ಬನೇ ಗುಮ್ಮಟದ ಮೇಲ್ಬಾಗಕ್ಕೆ ಹೋಗಿದ್ದಾನೆ. ವೀಕ್ಷರಂತೆ ಮೇಲೆ ನಿಂತು ಅಲ್ಲಿಂದ ಹಾರಿದ್ದಾನೆ. ಕೆಳಗೆ ಬಿದ್ದ ರಭಸಕ್ಕೆ ಸಲೀಂ ಸ್ಥಳದಲ್ಲೆ ಮೃತಪಟ್ಟಿದ್ದಾನೆ. 198 ಅಡಿಗಳಷ್ಟು ಎತ್ತರದ ಹೊರಗೋಡೆಯಿಂದ ಜಿಗಿದ ಕಾರಣ ಸಲೀಂನ ದೇಹದ ಎಲ್ಲ ಎಲುಬುಗಳು ಪುಡಿಪುಡಿ (crushed)ಯಾಗಿದೆ. ಜೊತೆಗೆ ಕೈ ಕಾಲುಗಳು ಮುರಿದು ತುಂಡು ತುಂಡಾಗಿವೆ.

ಸಲೀಂ ಆತ್ಮಹತ್ಯೆಗೆ ಪ್ರಕರಣಕ್ಕೆ ಸಿಕ್ತು ತಿರುವು: ಸಲೀಂ ಗೋಳಗುಮ್ಮಟದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ವಿಜಯಪುರ ನಗರದಲ್ಲಿ ಗಾಳಿಯಂತೆ ಹಬ್ಬಿದೆ. ಅಲ್ಲದೆ ಸಲೀಂ ಆತ್ಮಹತ್ಯೆ ಪ್ರಕರಣಕ್ಕು ಪ್ರಮುಖ ತಿರುವು (Major twist) ಸಿಕ್ಕಿದೆ. ಆರಂಭದದಲ್ಲಿ ಸಲೀಂ ಆತ್ಮಹತ್ಯೆಗೆ ಕಾರಣ ಏನು ಅನ್ನೋದೆ ಗೊತ್ತಾಗಿರಲಿಲ್ಲ. 55 ವರ್ಷದ ವ್ಯಕ್ತಿ ಗೋಳಗುಮ್ಮಟ ಹತ್ತಿ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎನ್ನುವ ಜಿಜ್ಞಾಸೆಗಳು (inquisitive) ಕೂಡ ಇದ್ದವು. ಆದರೆ ಈಗ ಇಡೀ ಪ್ರಕರಣಕ್ಕೆ ತಿರುವು ಸಿಕ್ಕಿದು, ಯುವಕರಿಗೆ ನೌಕರಿ ಕೊಡಿಸೋದಾಗಿ ಯಾಮಾರಿಸಿದ್ದುದೇ ಸಲೀಂ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

Chikkamagaluru: ಅಡಕೆಗೆ ಎಲೆಚುಕ್ಕಿರೋಗ, ಹಳದಿ ರೋಗ ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಯುವಕರಿಗೆ ನೌಕರಿ ಆಸೆ ತೋರಿಸಿ ಹಣ ವಸೂಲಿ?: ಇನ್ನು ಸಲೀಂ ಸಾವಿನ ಬೆನ್ನಲ್ಲೆ ಹಲವು ಸಂಗತಿಗಳು ಬೆಳಕಿಗೆ ಬಂದಿವೆ. ಸಲೀಂ ಸಾಕಷ್ಟು ಯುವಕರಿಗೆ ಪ್ರತಿಷ್ಟಿತ ಅಲ್‌ ಅಮೀನ್‌ ಆಸ್ಪತ್ರೆಯಲ್ಲಿ (Alameen Hospital)ನೌಕರಿ ಕೊಡಿಸುವ ಆಮೀಷ ಒಡ್ಡಿದ್ದನಂತೆ. ಅಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲು ನೌಕರಿ ಕೊಡಿಸುವ ಆಸೆ ತೋರಿಸಿ ಹಣ ವಸೂಲಿ ಮಾಡಿದ್ದ ಎನ್ನುವ ಸಂಗತಿಗಳು ಹಲವು ಯುವಕರ (Youths) ಬಾಯಿಂದ ಕೇಳ ಸಿಗುತ್ತಿದೆ. ನೌಕರಿ ಆಸೆ ತೋರಿಸಿ ಹಲವು ಯುವಕರಿಂದ ಮುಂಗಡ ರೂಪದಲ್ಲಿ 15 ರಿಂದ 20 ಸಾವಿರ ವಸೂಲಿ ಮಾಡಿದ್ದ ಎನ್ನಲಾಗಿದೆ. ಇನ್ನು ನೌಕರಿ (Job) ಕೊಡಿಸಿದ ಮೇಲೆ 4 ಲಕ್ಷ ರೂ. ನೀಡುವ ಕರಾರುಗಳು ಆಗಿದ್ದವು ಎಂಬ ಮಾಹಿತಿ ಲಭ್ಯವಾಗುತ್ತಿದೆ.

ದೂರು ನೀಡಲು ಮುಂದಾಗಿದ್ದ ಯುವಕರು: ಆತ್ಮಹತ್ಯೆ ಮಾಡಿಕೊಂಡ ಸಲೀಂ ತಿಕೋಟ್ಕರ್‌ ವಿರುದ್ಧ ಮೋಸ ಯುವಕರು ದೂರು ಕೊಡಲು ಮುಂದಾಗಿದ್ದರು. ಆದ್ರೆ ಹಣ ವಾಪಾಸ್‌ ಮಾಡೋದಾಗಿ ಹೇಳಿ ಯುವಕರನ್ನ ಮನವೊಲಿಕೆ ಮಾಡಿದ್ದ. ಇಂದು ಬೆಳಿಗ್ಗೆ 11 ಗಂಟೆಗೆ ಕೆಲ ಯುವಕರಿಗೆ ಹಣ ವಾಪಾಸ್‌ (Return) ಮಾಡುವುದಾಗಿ ಹೇಳಿದ್ದನಂತೆ. ಒಬ್ಬ ಹುಡುಗ ಕೂಡ ಹಣ ವಾಪಾಸ್‌ ಕೇಳಲು ಕಾಲ್‌ (Call) ಮಾಡಿದಾಗ ರಿಂಗಾದ ಪೋನ್‌ ಎತ್ತಿದವರು ನಾನು ಗೋಳಗುಮ್ಮಟ ಎಎಸ್‌ಐ (ASI), ಈ ಪೋನ್‌ ಇರುವ ವ್ಯಕ್ತಿ ಗೋಳಗುಮ್ಮಟ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದರು ಎನ್ನಲಾಗಿದೆ. ಗೋಳಗುಮ್ಮಟ ಪೊಲೀಸ್‌ ಠಾಣೆಯಲ್ಲಿ ಆತ್ಮಹತ್ಯೆ ಸಂಬಂಧ ಪ್ರಕರಣ ದಾಖಲಾಗಿದ್ದು, ಚುರುಕಾಗಿ ತನಿಖೆ ಮಾಡಲಾಗುತ್ತಿದೆ. ಆತ್ಮಹತ್ಯೆಗೆ ಕಾರಣ ಏನು ಎನ್ನುವ ಬಗ್ಗೆಯೂ ನಿಖರ ಮಾಹಿತಿಗಳನ್ನ ಪೊಲೀಸರು ಕಲೆ ಹಾಕುತ್ತಿದ್ದಾರೆ. ಇನ್ನು ನೌಕರಿ ಕೊಡಿಸೋದಾಗಿ ಹೇಳಿ ಹಣ ಪಡೆದಿದ್ದು, ಹಣ ವಾಪಾಸ್ಸಾತಿಗೆ ಹೆಚ್ಚಿದ ಒತ್ತಡ ಆತ್ಮಹತ್ಯೆಗೆ ಕಾರಣ ಎಂದು ಬಹುತೇಕರಿಗೆ ಸಂಶಯಗಳು ಕಾಡುತ್ತಿವೆ.

click me!