ಬೆಂಗಳೂರಿನಲ್ಲಿ ಪತ್ನಿಯ ಹಣದಾಸೆಯ ಕಾಟಕ್ಕೆ ಬೇಸತ್ತು ಬಾರ್ ಕ್ಯಾಶಿಯರ್ ಆಗಿದ್ದ ಮಂಡ್ಯ ಮೂಲದ ಅಣ್ಣಯ್ಯ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು
ಬೆಂಗಳೂರು (ನ.16) : ಜೀವನದಲ್ಲಿ ಬದುಕೋಕೆ ಹಣ ಬೇಕು ನಿಜ. ಆದರೆ ಎಲ್ಲದಕ್ಕು ಹಣವೇ ಮುಖ್ಯವಲ್ಲ. ಗಂಡನ ಕಷ್ಟ ಸುಖ ಅರಿತು ಬಾಳಬೇಕಾದವಳಿಂದ ಪ್ರತೀದಿನ ಕಿರುಕುಳ ನೀಡಲಾಗುತ್ತಿತ್ತು. ಪತ್ನಿಯ ಹಣದಾಸೆಗೆ ಬೇಸತ್ತ ಪತಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.
ಹಾಸಿಗೆ ಇದ್ದಷ್ಟ ಕಾಲು ಚಾಚು. ಆಸೆಯೇ ದುಃಖಕ್ಕೆ ಮೂಲಕಾರಣ. ಅತಿ ಆಸೆ ಗತಿಕೇಡು ಹೀಗೆ ಸಾಲು ಗಾದೆಗಳನ್ನ ನಮ್ಮ ಹಿರಿಯರು ಸುಮ್ಮನೆ ಹೇಳಿಲ್ಲ. ಮನುಷ್ಯನ ದುರಾಸೆ (Greed) ಏನೆಲ್ಲಾ ಅವಾಂತರಗಳಿಗೆ ಕಾರಣವಾಗುತ್ತೆ ಅನ್ನೋದಕ್ಕೆ ಇಲ್ಲೊಂದು ತಾಜಾ ನಿದರ್ಶನವಿದೆ. ನೆರೆಮನೆಯವರನ್ನ (Neighbor) ಹೋಲಿಕೆ ಮಾಡಿಕೊಂಡು ನಾನು ಅದೇ ತರ ಬದುಕಬೇಕು ಅಂದರೆ ಸಾಧ್ಯವಿಲ್ಲ. ನಮ್ಮ ಶಕ್ತಿ ಸಾಮರ್ಥ್ಯ (Ability) ಇದ್ದಷ್ಟು ಜೀವನ ನಡೆಸಬೇಕು. ಇಲ್ಲಿ ಆಗಿದ್ದೂ ಅದೇ. ಗಂಡ ದುಡಿದು ತರುವ ಸಂಬಳ (Salary)ಸಾಕಾಗುತ್ತಿಲ್ಲ ಎಂದು ಪೀಡಿಸಿದ್ದ ಹಿನ್ನಲೆ ಅಣ್ಣಯ್ಯ (Annayya) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ .ಹಣದಾಹದಿಂದ ಅಣ್ಣಯ್ಯನ ಪತ್ನಿ ಗಂಡನನ್ನ ಕಳ್ಕೊಂಡಿರುವ ಘಟನೆ ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದೆ.
ಅತ್ತೆ ಮಾವನನ್ನು ನೋಡಿಕೊಳ್ಳುವ ವಿಚಾರಕ್ಕೆ ಗಲಾಟೆ, ಸೊಸೆ ಕಾಟಕ್ಕೆ ತಾಯಿ ಮಗ ಆತ್ಮಹತ್ಯೆ!
ಐಷಾರಾಮಿ ಜೀವನದ ಮೇಲೆ ಮೋಹ: ಮಂಡ್ಯ (Mandya) ಮೂಲದ ಅಣ್ಣಯ್ಯ 5 ವರ್ಷದ ಹಿಂದೆ ಉಮಾ (Uma) ಎಬಾಕೆಯನ್ನ ಮದುವೆಯಾಗಿದ್ದನು. ಈ ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಅಣ್ಣಯ್ಯ ಬಾರ್ (Bar) ಒಂದರಲ್ಲಿ ಕ್ಯಾಷಿಯರ್ (Cashier) ಆಗಿ ಕೆಲಸ ಮಾಡುತ್ತಿದ್ದ. ಮೊದಲು ಇಬ್ಬರಲ್ಲೂ ಅನ್ಯೋನ್ಯತೆ ಇತ್ತು. ಆಗ ಇವರಿಬ್ಬರ ನಡುವೆ ಹಣ ಅಡ್ಡ ಬಂದಿರಲಿಲ್ಲ. ಆದರೆ, ನಗರದ ಐಷಾರಾಮಿ ಜೀವನ (Luxury life), ಅಕ್ಕ ಪಕ್ಕದ ಮನೆಯವರು ಬಿಂದಾಸ್ ಆಗಿ ಖರ್ಚು ಮಾಡುತ್ತಿದ್ದುದನ್ನು ನೋಡುತ್ತಿದ್ದ ಉಮಾಳಿಗೂ ಹಣದಾಸೆ (Money interest) ಹುಟ್ಟಿಕೊಂಡಿತ್ತು. ಹೀಗಾಗಿ ಪತಿಯ ಜೊತೆ ಹಣಕ್ಕಾಗಿ ಪ್ರತಿದಿನ ಜಗಳ (Hassle)ವಾಡುತ್ತಿದ್ದಳು. ಮೊದಲೇ ಬಾರಲ್ಲಿ ಕೆಲಸ. ಕುಡುಕರ ನಡುವೆ ಗಲಾಟೆಯಿಂದ ತಾಳ್ಮೆ (patience) ಕೆಟ್ಟು ಹೋಗಿರುತ್ತೆ. ಮನೆಗೆ ಬಂದಾದರೂ ನೆಮ್ಮದಿ ಇದ್ಯಾ ಅದೂ ಇಲ್ಲ. ಇದಕ್ಕೆಲ್ಲಾ ಸಾವು ಒಂದೇ ಪರಿಹಾರ ಎಂದು ಅಣ್ಣಯ್ಯ ನೇಣಿಗೆ ಶರಣಾಗಿದ್ದಾನೆ.
ಮಗಳ ಕೈಯಲ್ಲಿ ಡೆತ್‌ನೋಟ್ ಬರೆಸಿ ಕೊಲೆ ಮಾಡಿದ ತಂದೆ..!
ಮಗನೇ ಅಮ್ಮನ ಜೊತೆ ಇರಬೇಡ: ಇನ್ನು ಸಾಯುವ ಮುನ್ನ ಡೆತ್ ನೋಟ್ (Death Note) ಬರೆದಿದ್ದು, ಅದರಲ್ಲಿ ತನ್ನ ಹೆಂಡತಿ ಹಣ ಹಣ ಎಂದು ಯಾವಾಗಲೂ ಕಾಟ ಕೊಡುತ್ತಾಳೆ. ಕೆಲಸವಿದ್ದರೂ ನೆಮ್ಮದಿ (peace of mind) ಇಲ್ಲ. ಮಗನೇ ನೀನು ನಿನ್ನ ಅಮ್ಮ ಕೆಟ್ಟವಳು ಅವಳ ಜೊತೆ ಬದುಕಬೇಡ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಂದು ಕಡೆ ನನ್ನ ಸಾವಿಗೆ ನಾನೇ ಕಾರಣ ಅಂತಾ ಸಹ ಡೆತ್ ನೋಟ್ ಇದೆ. ಮತ್ತೊಂದು ಕಡೆ ಪತ್ನಿಯ (Wife) ಬಗ್ಗೆ ಆರೋಪಿಸಿರುವ ಹಿನ್ನಲೆ ಮೃತ ಅಣ್ಣಯ್ಯನ ಕುಟುಂಬಸ್ಥರ ದೂರು ಪಡೆದ ಬಳಿಕ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಹನುಮಂತನಗರ (Hanumanthanagara) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.