ಒಬ್ಬಂಟಿ ವೃದ್ಧೆಯನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು!

By Ravi Janekal  |  First Published Nov 22, 2023, 10:06 AM IST

ಭವಿಷ್ಯ ಹೇಳಿ ಬದುಕುತ್ತಿದ್ದ ಒಬ್ಬಂಟಿ ವೃದ್ಧೆಯನ್ನು ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸಂತೋಷ್ ಕಾಲೋನಿಯಲ್ಲಿ ನಡೆದಿದೆ.


ಕಲಬುರಗಿ (ನ.22): ಭವಿಷ್ಯ ಹೇಳಿ ಬದುಕುತ್ತಿದ್ದ ಒಬ್ಬಂಟಿ ವೃದ್ಧೆಯನ್ನು ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸಂತೋಷ್ ಕಾಲೋನಿಯಲ್ಲಿ ನಡೆದಿದೆ.

ರತ್ನಾಬಾಯಿ  (65) ಹತ್ಯೆಯಾದ ದುರ್ದೈವಿ. ಮೈ ಮೇಲೆ ದೇವರು ಬರುತ್ತಾರೆಂದು ಭವಿಷ್ಯ ಹೇಳುತ್ತಿದ್ದ ಅಜ್ಜಿ. ಅವರಿವರು ಕೊಟ್ಟ ಹಣದಲ್ಲಿ ಶೆಡ್‌ ಒಂದರಲ್ಲಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಳು. ಇಂಥ ಒಬ್ಬಂಟಿ ವೃದ್ಧೆಯನ್ನು ಮಲಗಿದ್ದ ವೇಳೆ ಕೊಂದು ಬಾಗಿಲು ಹಾಕಿಕೊಂಡು ಹೋಗಿರುವ ಹಂತಕರು. ಬಾಗಿಲು ಮುಚ್ಚಿದ್ದರಿಂದ ಕೊಲೆಯಾದರೂ ಸುತ್ತಮುತ್ತಲಿನ ಯಾರಿಗೂ ತಿಳಿದಿರಲಿಲ್ಲ. ಆದರೆ ವೃದ್ಧೆ ವಾಸವಾಗಿದ್ದ ಶೆಡ್‌ನಿಂದ ಸತ್ತ ವಾಸನೆ ಬರುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು ಬಂದು ಬಾಗಿಲು ತೆರೆದು ನೋಡಿದಾಗ ವೃದ್ಧೆ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಯಾರು ಕೊಲೆ ಮಾಡಿದ್ದಾರೆ ? ಯಾಕಾಗಿ ಕೊಲೆ ಮಾಡಿದ್ದಾರೆ ? ಎನ್ನುವುದು ಇನ್ನೂ ನಿಗೂಢವಾಗಿದೆ.

Tap to resize

Latest Videos

undefined

ಬೆಂಗಳೂರಲ್ಲೊಬ್ಬ ವಿಚಿತ್ರ ಕಳ್ಳ; ಎಳನೀರು ಕದಿಯಲು ಕಾರಿನಲ್ಲಿ ಬರುತ್ತಿದ್ದ ಆಸಾಮಿ!

ಸದ್ಯ ಸ್ಥಳಕ್ಕೆ ಭೇಟಿ ನೀಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಆರ್.ಜಿ ನಗರ ಠಾಣೆ ಪೊಲೀಸರು. 

click me!