ಸಿನಿಮೀಯ ಶೈಲಿಯಲ್ಲಿ ನಟೋರಿಯಸ್ ರೌಡಿಯನ್ನು ಪೊಲೀಸ್ ಪೇದೆ ಹಿಡಿದ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ. ಪ್ರಾಣವನ್ನೇ ಪಣಕ್ಕಿಟ್ಟು ಖತರ್ನಾಕ್ ರೌಡಿಯನ್ನ ಪೇದೆಯು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು (ಆ.07): ಸಿನಿಮೀಯ ಶೈಲಿಯಲ್ಲಿ ನಟೋರಿಯಸ್ ರೌಡಿಯನ್ನು ಪೊಲೀಸ್ ಪೇದೆ ಹಿಡಿದ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ. ಪ್ರಾಣವನ್ನೇ ಪಣಕ್ಕಿಟ್ಟು ಖತರ್ನಾಕ್ ರೌಡಿಯನ್ನ ಪೇದೆಯು ವಶಕ್ಕೆ ಪಡೆದಿದ್ದಾರೆ. ನಟೋರಿಯಸ್ ರೌಡಿಯ ಚೇಸಿಂಗ್ ಮಾಡಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೊರಟಗೆರೆ ಪೊಲೀಸರಿಂದ ನಟೋರಿಯಸ್ ರೌಡಿಯ ಬಂಧನವಾಗಿದೆ. ಸಿಗ್ನಲ್‌ನಲ್ಲಿ ಬೈಕ್‌ನಲ್ಲಿ ಬರುವ ವೇಳೆ ಸಿನಿಮಿಯ ಶೈಲಿಯಲ್ಲಿ ಪೇದೆ ರೌಡಿಯನ್ನ ಬಂಧಿಸಿದ್ದಾರೆ.
ಸದ್ಯ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಹೊಟ್ಟೆ ಮಂಜನನ್ನ ಪೊಲೀಸರು ಹಿಡಿದಿದ್ದು, ಬಂಧನದ ವೇಳೆ ಪೇದೆಯ ಮೇಲೆಯೇ ಹೊಟ್ಟೆ ಮಂಜ ಬೈಕ್ ಹತ್ತಿಸಲು ಮುಂದಾಗಿದ್ದಾನೆ. ಸಂಚಾರಿ ಠಾಣೆಯ ಮಹಿಳಾ ಎಸ್ಐ ಮೇಲೆಯೂ ಹೊಟ್ಟೆ ಮಂಜನಿಂದ ಹಲ್ಲೆಯಾಗಿದ್ದು, ಈ ಎಲ್ಲಾ ದೃಶ್ಯಗಳು ಸಿಗ್ನಲ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಕೊರಟಗೆರೆ ಠಾಣೆಯ ದೊಡ್ಡ ಲಿಂಗಯ್ಯ ಎಂಬ ಪೇದೆಯಿಂದ ನಟೋರಿಯಸ್ ರೌಡಿಯ ಕಳ್ಳನ ಬಂಧನವಾಗಿದ್ದು, ಕೊಲೆ ಸುಲಿಗೆ ಡಕಾಯಿತಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ನಟೋರಿಯಸ್ ರೌಡಿ ಹೊಟ್ಟೆ ಮಂಜ ಬೇಕಾಗಿದ್ದ.
ವಾಲ್ಮೀಕಿ, ಮುಡಾ ಹಗರಣಗಳ ನೈತಿಕ ಹೊಣೆಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು
ಎಟಿಎಂ ಹಣ ಡ್ರಾ ಬಂದ ಹಿರಿಯ ನಾಗರಿಕರಿಗೆ ವಂಚನೆ: ಎಟಿಎಂಗಳಲ್ಲಿ ಹಣ ಪಡೆಯಲು ನೆರವು ನೀಡುವ ನೆಪದಲ್ಲಿ ಹಿರಿಯ ನಾಗರಿಕರಿಗೆ ವಂಚಿಸಿ ಕಾರ್ಡ್ ಕದ್ದು ಬಳಿಕ ಹಣ ದೋಚುತ್ತಿದ್ದ ಮೂವರು ವಂಚಕರನ್ನು ಪ್ರತ್ಯೇಕವಾಗಿ ಸುಬ್ರಹ್ಮಣ್ಯಪುರ ಹಾಗೂ ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದ ಸಾಗರ್ ಅಲಿಯಾಸ್ ದಡಿಯಾ ದೀಪಕ್, ಬಿಹಾರ ಮೂಲದ ವಿವೇಕ್ ಕುಮಾರ್ ಹಾಗೂ ಚುನಿಲಾಲ್ ಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ 67 ಎಟಿಎಂ ಕಾರ್ಡ್‌ಗಳು ಹಾಗೂ ₹10 ಸಾವಿರ ಜಪ್ತಿಯಾಗಿದೆ.
ಕೆಲ ತಿಂಗಳ ಹಿಂದೆ ಬೇಗೂರು ಮುಖ್ಯರಸ್ತೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂ ಘಟಕದಲ್ಲಿ ಕೋಲಾರ ಜಿಲ್ಲೆ ಮಾಲೂರು ಭಂಟಹಳ್ಳಿ ಗ್ರಾಮದ ನಿವಾಸಿ ಹಣ ಪಡೆಯಲು ಹೋದಾಗ ವಂಚನೆ ನಡೆದಿತ್ತು. ಈ ಕೃತ್ಯದ ತನಿಖೆಗಿಳಿದ ಬೇಗೂರು ಪೊಲೀಸರು, ಇತ್ತೀಚೆಗೆ ಬೇಗೂರು ರಸ್ತೆ ಬಳಿಯ ಎಟಿಎಂ ಘಟಕದ ಹತ್ತಿರ ಶಂಕಾಸ್ಪದವಾಗಿ ಓಡಾಡುತ್ತಿದ್ದ ಸಾಗರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆ. ಅದೇ ರೀತಿ ಉತ್ತರಹಳ್ಳಿ ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಸಂಜಯ್ ಸಿಂಗ್ ಎಂಬುವರಿಗೆ ಸಹಾಯ ಮಾಡುವ ನೆಪದಲ್ಲಿ ಈ ಇಬ್ಬರು ಬಿಹಾರಿಗಳು ವಂಚಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ತಾಕತ್ತಿದ್ದರೆ ಬಿಜೆಪಿ-ಜೆಡಿಎಸ್‌ನವರು ಎನ್‌ಸಿಆರ್‌ಬಿ ವರದಿ ಬಿಡುಗಡೆಗೊಳಿಸಿ: ಸಚಿವ ಸಂತೋಷ್ ಲಾಡ್
ಓದಿದ್ದು ಹೈಸ್ಕೂಲ್, ವಂಚನೆಯಲ್ಲಿ ಮಾಸ್ಟರ್: ಶಿವಮೊಗ್ಗ ಜಿಲ್ಲೆಯ ಸಾಗರ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಎಟಿಎಂ ಕೇಂದ್ರಗಳ ಬಳಿ ಜನರಿಗೆ ವಂಚಿಸಿ ಹಣ ದೋಚುವ ಕೃತ್ಯಕ್ಕೆ ಆತ ಕುಖ್ಯಾತಿ ಪಡೆದಿದ್ದಾನೆ. ಎಟಿಎಂಗಳಿಗೆ ಬರುವ ಹಿರಿಯ ನಾಗರಿಕರು ಅಥವಾ ಅನ್ಯ ಭಾಷಿಕರನ್ನು ಗುರಿಯಾಗಿಸಿಕೊಂಡು ಆತ ಕೃತ್ಯ ಎಸಗುತ್ತಿದ್ದ. ಇದೇ ರೀತಿ ಕೃತ್ಯ ಸಂಬಂಧ ಆತನ ಮೇಲೆ ಉಪ್ಪಾರಪೇಟೆ ಹಾಗೂ ಚಂದ್ರಾಲೇಔಟ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಈ ಪ್ರಕರಣದ ಸಂಬಂಧ ಬಂಧಿತನಾಗಿದ್ದ ಈತನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಅಟ್ಟಿದ್ದರು. ಆದರೆ ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದು ತನ್ನ ದುಷ್ಕೃತ್ಯವನ್ನು ಸಾಗರ್ ಮುಂದುವರೆಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.