ಸೈಫ್​ಗೆ ಇರಿತ- ಪಾರ್ಟಿ ಮೂಡ್​ನಲ್ಲಿ ಪತ್ನಿ ಕರೀನಾ! ಒಂದು ಗಂಟೆ- ಒಂದು ಕೋಟಿ ರೂ. ಬೇಡಿಕೆ? ನಡೆದಿದ್ದೇನು?

By Suchethana D  |  First Published Jan 16, 2025, 9:07 PM IST

ಸೈಫ್​ ಅಲಿ ಖಾನ್​ಗೆ ಚಾಕು ಇರಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಫೋಟೋ ಬಿಡುಗಡೆ ಮಾಡಲಾಗಿದ್ದು, ಮತ್ತೊಂದಿಷ್ಟು ಡಿಟೇಲ್ಸ್​ ಸಿಕ್ಕಿದೆ.
 


ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲಿನ ಮಧ್ಯರಾತ್ರಿ  ನಡೆದ ಚಾಕುವಿನ ಇರಿತ ಇಡಿ ಇಂಡಸ್ಟ್ರಿಯನ್ನು ತಲ್ಲಣಗೊಳಿಸಿದೆ.  ಸೈಫ್ ಅಲಿಗೆ 6 ಬಾರಿ ಚಾಕುವಿನಿಂದ ತಿವಿಯಲಾಗಿದೆ. ಬೆನ್ನು, ಕುತ್ತಿಗೆ, ಕೈ ಮುಂತಾದ ಭಾಗಗಳಿಗೆ ಘಾಸಿಯಾಗಿದೆ. ಗಂಭೀರ ಗಾಯಗಳಿಂದ ಬಳಲುತ್ತಿರುವ ಸೈಫ್​ ಅಲಿ ಅವರಿಗೆ, ಕೆಲ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.  ಇಡೀ ಘಟನೆಗೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಊಹಾಪೋಹಗಳೇ ಹರಿದಾಡುತ್ತಿವೆ. ಸೈಫ್​ ಮನೆಯಲ್ಲಿ ಕೆಲಸ  ಮಾಡುತ್ತಿರುವಾಕೆ ಪೊಲೀಸರಲ್ಲಿ ಹೇಳಿದಂತೆ ಆ ಕಳ್ಳ ಒಂದು ಕೋಟಿ ರೂಪಾಯಿಗೆ ಡಿಮಾಂಡ್​ ಮಾಡಿದ್ದ ಎನ್ನಲಾಗಿದೆ. ಆದರೆ ಈ ಸಂದರ್ಭದಲ್ಲಿ ನಡೆದದ್ದು ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. 

ಇದೀಗ ಪೊಲೀಸರು ಶಂಕಿತನ ಫೋಟೋ ಒಂದನ್ನು ರಿಲೀಸ್​ ಮಾಡಿದ್ದಾರೆ. ಅಷ್ಟಕ್ಕೂ ಘಟನೆಯ ಬಳಿಕ ಈ ಆರೋಪಿ, ಸುಮಾರು ಒಂದು ಗಂಟೆ ಮನೆಯೊಳಕ್ಕೇ ಅವಿತು ಕುಳಿತಿರುವ ಶಂಕೆಯೂ ವ್ಯಕ್ತವಾಗಿದೆ. ಇದಕ್ಕೆ ಕಾರಣ, ಆತ ಮುಂಬೈನ ಬಾಂದ್ರಾದಲ್ಲಿರುವ ಸೈಫ್​ ಅಲಿಯ ಅಪಾರ್ಟ್​ಮೆಂಟ್​ ಒಳಗೆ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಆತ ಓಡಿ ಹೋಗುತ್ತಿರುವುದು ಕೂಡ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇವುಗಳ ನಡುವಿನ ಅಂತರ ಸುಮಾರು ಒಂದು ಗಂಟೆ ಎನ್ನಲಾಗಿದೆ. ಒಳಗೆ ನುಗ್ಗಿದ ಆರೋಪಿ, ಹಣದ ಉದ್ದೇಶಕ್ಕಾಗಿ ಬಂದಿದ್ದನೋ ಅಥವಾ ಕೊಲೆ  ಮಾಡಲು ಬಂದಿದ್ದನೋ ಗೊತ್ತಿಲ್ಲ. ಈ ಬಗ್ಗೆ ಕೂಡ ಇನ್ನಷ್ಟೇ ತನಿಖೆ ಆಗಬೇಕಿದೆ. ಆದರೆ ಸೈಫ್​ ಅಲಿಯ ಬಗ್ಗೆ ಸಂಪೂರ್ಣವಾಗಿ ಗೊತ್ತಿದ್ದೇ ಅಂದು ಬಂದಿರುವುದಂತೂ ದಿಟ.

Tap to resize

Latest Videos

ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿ, ಆಸ್ಪತ್ರೆಗೆ ದಾಖಲು

ಇದಕ್ಕೆ ಕಾರಣ, ಘಟನೆ ನಡೆದಾಗ ಮಧ್ಯರಾತ್ರಿ. ಆದರೆ ಕರೀನಾ ಮತ್ತು ಮಕ್ಕಳು ಮನೆಯಲ್ಲಿ ಇರಲಿಲ್ಲ.  ಅವರು ತಮ್ಮ ತಂಗಿ ಕರೀಷ್ಮಾ ಕಪೂರ್ ಹಾಗೂ ರಿಯಾ, ಸೋನಂ ಜೊತೆ ಪಾರ್ಟಿಯೊಂದಕ್ಕೆ ತೆರಳಿದ್ದರು. ಮಧ್ಯರಾತ್ರಿ ಪಾರ್ಟಿಯಲ್ಲಿ ಎಂಜಾಯ್​ ಮಾಡುತ್ತಾ ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ‘ಗರ್ಲ್ಸ್ ನೈಟ್ ಇನ್’ ಎಂದು ಶೀರ್ಷಿಕೆ ಕೊಟ್ಟಿದ್ದರು. ಆದ್ದರಿಂದ ಮನೆಯಲ್ಲಿ ಯಾರೂ ಇಲ್ಲದೇ ಇರುವುದು ಕಳ್ಳರಿಗೆ ಗೊತ್ತಿತ್ತಾ ಎನ್ನುವ ಸಂದೇಹವೂ ಇದೆ. ಇದೇ ವೇಳೆ ಸೈಫ್​ ಮನೆಯಲ್ಲಿ ನಡೆಯುತ್ತಿರುವ ಫ್ಲೋರಿಂಗ್ ಮತ್ತು ಫಿನಿಶಿಂಗ್ ಕೆಲಸ ಮಾಡುತ್ತಿರುವ ಕಾರ್ಮಿಕರ ಮೇಲೂ ಪೊಲೀಸರ ಕಣ್ಣು ಹೋಗಿದೆ. 

ಕೆಲ ದಿನಗಳಿಂದ ಸೈಫ್​ ಮನೆಯಲ್ಲಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಿನ್ನೆ ಕೆಲಸ ಮುಗಿಸಿ ಒಬ್ಬ ಮನೆಯೊಳಗೆ ಅಡಗಿಕೊಂಡಿರಬಹುದು ಎನ್ನುವ ಸುದ್ದಿಯೂ ಇದೆ.  ಅದೇ ಇನ್ನೊಂದೆಡೆ, ನಟನ ಮನೆಕೆಲಸದಾಕೆ ಲಿಮಾ ಜೊತೆ ಆ ಆರೋಪ ಜಗಳಕ್ಕಿಳಿದಿದ್ದಾನೆ. ಆಗ ಎಂಟ್ರಿ ಕೊಟ್ಟ ಸೈಫ್​ಗೆ ಇರಿದಿದ್ದಾನೆ ಎನ್ನಲಾಗಿದೆ. ಆದರೆ ಕೆಲಸದಾಕೆ ಹೇಳುವಂತೆ ಆತ ಒಂದು ಕೋಟಿಯ ಡಿಮಾಂಡ್​ ಇಟ್ಟಿದ್ದ. ಕೊನೆಗೆ ಇರಿದು ಹೋದ ಎನ್ನುವುದು. ಒಟ್ಟಿನಲ್ಲಿ ಪೊಲೀಸ್​ ತನಿಖೆಯಿಂದ ಎಲ್ಲವೂ ಬಹಿರಂಗವಾಗಬೇಕಿದೆಯಷ್ಟೇ. 

ಮನೆಯಲ್ಲಿ ದುಬಾರಿ ಕಾರಿದ್ದರೂ ಸೈಫ್‌‌ನನ್ನು ಪುತ್ರ ಆಟೋ ರಿಕ್ಷಾ ಮೂಲಕ ಆಸ್ಪತ್ರೆ ಕರೆದೊಯ್ದಿದ್ದೇಕೆ?

click me!