
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್.
ಮಂಡ್ಯ (ಆ.3) ಡೆತನೋಟ್ ಬರೆದಿಟ್ಟು ಮಗುವಿನೊಂದಿಗೆ ತಾಯಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಮಂಡ್ಯ(Mandya) ಜಿಲ್ಲೆ ನಾಗಮಂಗಲ(Nagamangala) ತಾಲೂಕಿನ ಕೆಂಚೇಗೌಡನಕೊಪ್ಪಲು(Kenchegowdanakoppalu) ಗ್ರಾಮದಲ್ಲಿ ನಡೆದಿದೆ. 25 ವರ್ಷದ ಬಿಂದು ಆತ್ಮಹತ್ಯೆ ಮಾಡಿಕೊಂಡಾಕೆ. ಆತ್ಮಹತ್ಯೆಗೂ ಮುನ್ನ ತನ್ನ 10 ತಿಂಗಳ ಹಸುಗೂಸು ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆ(Suicide)ಗೆ ಕುಟುಂಬ ಕಲಹ ಕಾರಣ ಎನ್ನಲಾಗಿದೆ.
ಘಟನೆ ಹಿನ್ನೆಲೆ
ಕುಟುಂಬಸ್ಥರ ವಿರೋಧ ಕಟ್ಟಿಕೊಂಡು ಬಿಂದು ನಾಗಮಂಗಲ ನಿವಾಸಿ ನವೀನ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ನಾಲ್ಕು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಈ ಜೋಡಿಗೆ ಮುದ್ದಾದ ಮಗುವಿತ್ತು. ಆರಂಭದಲ್ಲಿ ಬಿಂದು-ನವೀನ್ ಪರಸ್ಪರ ಪ್ರೀತಿಯಿಂದ ಸಂಸಾರ ಮಾಡುತ್ತಿದ್ದರು. ಅಷ್ಟೊಂದು ಚೆನ್ನಾಗಿದ್ದ ದಾಂಪತ್ಯ. ದಿನಕಳೆದಂತೆ ಪರಸ್ಪರ ಭಿನ್ನಭಿಪ್ರಾಯ, ಜಗಳ, ಮನಸ್ತಾಪಗಳು ಶುರುವಾದವು. ಮೊದಲಿಗೆ ಇದೆಲ್ಲ ಸಹಜವೆಂಬಂತೆ ಸಂಸಾರ ಮುಂದುವರಿಯಿತು. ಆದರೆ. ಪತಿ ಯಾವಾಗ ಸಣ್ಣಪುಟ್ಟ ವಿಚಾರಗಳಿಗೂ ಜಗಳ ತೆಗೆದು ಹಿಂಸಿಸಲು ಶುರು ಮಾಡಿದನೋ ಆಗ ಬಿಂದುಗೆ ದಿನ ಕಳೆಯುವುದು ಅಸಹನೀಯವಾಗತೊಡಗಿತು. ಮೊದಲೇ ಮನೆಯವರ ವಿರೋಧ ಕಟ್ಟಿಕೊಂಡಿದ್ದ ಬಿಂದು ವಾಪಸ್ ಹೋಗಲು, ಕಷ್ಟ ಹೇಳಿಕೊಳ್ಳಲು ಮುಖವಿಲ್ಲದಂತಾಗಿದ್ದಳು. ಈ ಘಟನೆಗಳಿಂದಾಗಿ ಬಿಂದು ತೀವ್ರವಾಗಿ ನೊಂದುಕೊಂಡಿದ್ದಳು. ಪತಿಯ ಕಿರುಕುಳ ಸಾಲದೆಂಬಂತೆ ಅತ್ತೆ ಮತ್ತು ಇಬ್ಬರು ನಾದಿನಿಯರಿಂದ ನಿರಂತರ ಕಿರುಕುಳಕ್ಕೆ ಒಳಗಾಗಿದ್ದರಂತೆ. ಇದಲ್ಲದೇ ಪತಿಗೆ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇತ್ತು ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಮಗುವಿನೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನ, ಪೊಲೀಸ್ ಸಿಬ್ಬಂದಿಯ ಸಮಯ ಪ್ರಜ್ಞೆಗೆ ಉಳಿದ ಪ್ರಾಣ!
ಡೆತ್‌ನೋಟ್ ಬರೆದು ನೇಣಿಗೆ ಶರಣು:
ಸಾಯುವ ಮುನ್ನ ಬಿಂದು ಡೆತ್‌ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ತನ್ನ ಗಂಡನ ಮನೆಯವರೂ ನೀಡ್ತಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದು ಗಂಡನ ಅಕ್ರಮ ಸಂಬಂಧ ಬಗ್ಗೆ ಬರೆದಿದ್ದಾರೆ. ನನ್ನ ಸಾವಿಗೆ ಪತಿ, ಅತ್ತೆ, ನಾದಿನಿಯರು ಹಾಗೂ ನನ್ನ ಗಂಡ ಅಕ್ರಮ ಸಂಬಂಧ ಹೊಂದಿರುವ ಮಹಿಳೆ ಕಾರಣ ಎಂದು ಬರೆದಿರುವ ಬಿಂದು ಅಪ್ಪ, ಅಮ್ಮ ನಿಮ್ಮನ್ನು ತುಂಬ ನೋಯಿಸಿದ್ದೇನೆ. ಪ್ರೀತಿಸಿ ಮದುವೆಯಾಗುವ ಹುಡುಗಿಯರಿಗೆ ನಾನೇ ಉದಾಹರಣೆಯಾಗಬೇಕು. ನನ್ನನ್ನು ಕ್ಷಮಿಸಿ' ಎಂದು ಡೆತ್‌ನೋಟ್‌ನಲ್ಲಿ ಬರೆದು ತನ್ನ ಹತ್ತು ತಿಂಗಳ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.\
ವಿಜಯಪುರ: ಇಬ್ಬರು ಹೆಣ್ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ, ಕಾರಣ ಕೇಳಿದ್ರೆ ಹೌಹಾರ್ತಿರಿ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ