ಪ್ರೀತಿಸಿದ ಹುಡುಗನ ಬದಲು ಬೇರೊಬ್ಬನ ಜತೆ ನಿಶ್ಚಿತಾರ್ಥ: ಭಾವಿ ಪತಿಯ ಕತ್ತಿಗೆ ಚೂರಿ ಹಾಕಿದ ಕ್ರಿಮಿನಲ್ ಗರ್ಲ್!

By Ravi Janekal  |  First Published Apr 8, 2023, 11:01 AM IST

ಪ್ರೀತಿ ಮಾಯೆ ಹುಷಾರು... ಅಂತಾ ಹೇಳೋದು ಇದಕ್ಕೆ ಪ್ರೀತಿ, ಪ್ರೇಮದಲ್ಲಿ ಬಿದ್ದವರು ಅದು ದಕ್ಕದಿದ್ದಾಗ ಎಂಥ ಕೃತ್ಯಕ್ಕೂ ಇಳಿದುಬಿಡುತ್ತಾರೆ ಎಂಬುದಕ್ಕೆ ಇಲ್ಲಿ ನಡೆದಿರುವ ಪೈಶಾಚಿಕ ಕೃತ್ಯ ಸಾಕ್ಷಿ


ಹಾವೇರಿ (ಏ.8) : ಪ್ರೀತಿ ಮಾಯೆ ಹುಷಾರು... ಅಂತಾ ಹೇಳೋದು ಇದಕ್ಕೆ ಪ್ರೀತಿ, ಪ್ರೇಮದಲ್ಲಿ ಬಿದ್ದವರು ಅದು ದಕ್ಕದಿದ್ದಾಗ ಎಂಥ ಕೃತ್ಯಕ್ಕೂ ಇಳಿದುಬಿಡುತ್ತಾರೆ ಎಂಬುದಕ್ಕೆ ಇಲ್ಲಿ ನಡೆದಿರುವ ಪೈಶಾಚಿಕ ಕೃತ್ಯ ಸಾಕ್ಷಿ. ಪ್ರೀತಿಸಿದ ಹುಡುಗನ ಬದಲು ಬೇರೊಬ್ಬನೊಂದಿಗೆ ನಿಶ್ಚಿತಾರ್ಥ ಮಾಡಿದ್ದಕ್ಕೆ ಹತಾಶೆಗೊಂಡ ಭಗ್ನ ಅಪ್ರಾಪ್ತೆ ಪ್ರೇಯಸಿಯೊಬ್ಬಳು ಭಾವಿ ಪತಿಯ ಕುತ್ತಿಗೆಗೆ ಚೂರಿ ಹಾಕಿಬಿಟ್ಟಿದ್ದಾಳೆ.

ಹಾವೇರಿ(Haveri) ಜಿಲ್ಲೆಯ ರಾಣೇಬೆನ್ನೂರು ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್(Om public shool) ಬಳಿ ನಡೆದಿರುವ ಘಟನೆ‌. 17 ವರ್ಷದ ಖತರ್ನಾಕ್ ಬಾಲಕಿ ಮಾಡಿದ ಕೃತ್ಯಕ್ಕೆ ಬೆಚ್ಚಿಬಿದ್ದ ಪೋಲಿಸರು. 

Tap to resize

Latest Videos

undefined

ಪ್ರೀತಿಸಿ ಮದುವೆಯಾದರೂ ವರದಕ್ಷಿಣೆ ಕಿರುಕುಳ ಕೊಟ್ಟ: ನಿನ್ನ ಪ್ರೀತಿ ಸಾಕೆಂದು ಕೊಂದೇಬಿಟ್ಟ.!

ಹರಪನಹಳ್ಳಿ ತಾಲೂಕಿನಲ್ಲಿ ಸೇಲ್ಸಮನ್ ಆಗಿ ಕೆಲಸ ಮಾಡುತ್ತಿದ್ದ ಯುವಕ ದೇವೇಂದ್ರಗೌಡ(Devendragowda). ಮಾರ್ಚ್,3 ರಂದು ಕ್ರಿಮಿನಲ್ ಗರ್ಲ್ ಜತೆ ನಿಶ್ಚಿತಾರ್ಥವಾಗಿತ್ತು

ಬೇರೊಬ್ಬನೊಂದಿಗೆ ಪ್ರೀತಿ ಪ್ರೇಮ ಅಂತಾ ಸುತ್ತಾಡಿಕೊಂಡಿದ್ದವಳಿಗೆ ಕುಟುಂಬಸ್ಥರು ದೇವೇಂದ್ರಗೌಡನ ಜತೆಗೆ ನಿಶ್ಚಿತಾರ್ಥ ಮಾಡಿದ್ದಾರೆ. ತನ್ನ ಪ್ರೀತಿಗೆ ಭಾವಿ ಪತಿ ಅಡ್ಡಿಯಾಗುತ್ತಾನೆಂದು ಬಗೆದು ಭಾವಿ ಪತಿಯನ್ನು ಮುಗಿಸಲು ಸಂಚುಮಾಡಿ ಉಪಾಯದಿಂದ ಪಾರ್ಕ್‌ಗೆ ಕರೆಯಿಸಿಕೊಂಡಿದ್ದ ಕ್ರಿಮಿನಲ್ ಗರ್ಲ್.

ನಿನಗೆ ಒಂದು ಗಿಫ್ಟ್‌ ಕೊಡಬೇಕು ಬಾ:

ನಿನಗೆ ಒಂದು ಗಿಪ್ಟ್ ಕೊಡಬೇಕು, ಪಾರ್ಕ್‌ನಲ್ಲಿ ರೀಲ್ಸ್ ಮಾಡೋಣ ನಿನ್ನ ಕೈ ಕಟ್ಟಿ ಪೋಟೊ ತೆಗೆಯುತ್ತೇನೆ ಎಂದು ಪ್ರೀತಿಯಿಂದ ಕರೆಯಿಸಿಕೊಂಡ ಯುವತಿ. ಭಾವಿ ಪತ್ನಿ ಕರೆದಿದ್ದಾಳೆಂದು ಖುಷಿಯಿಂದ ಬಂದಿದ್ದ ಯುವಕ, ಪಾರ್ಕ್‌ಗೆ ಬಂದು ಅವಳು ಹೇಳಿದಂತೆ ಕೈ ಕಟ್ಟಿಸಿಕೊಂಡು ಶಿಲುಬೆ ರೀತಿ ನಿಂತುಬಿಟ್ಟಿದ್ದಾನೆ ಪಾಪ!

ಮುಂದೇನಾಯ್ತು ನೋಡಿ!

ಭಾವಿ ಪತ್ನಿಯ ಪ್ರೇಮಪಾಶದಲ್ಲಿ ಬಿದ್ದ ಹುಡುಗನಿಗೆ ಅವಳಿಂದಲೇ ಕುತ್ತಿಗೆ ಚೂರಿ ಬೀಳಲಿದೆ ಅಂತಾ ರಾಗಿ ಕಾಳಷ್ಟು ಅನುಮಾನವೂ ಇರದ  ಹುಡುಗ. ಅವಳು ಹೇಳಿದಂತೆ ಬಿಗಿಯಾಗಿ ಕೈಕಟ್ಟಿಕೊಂಡು ಶಿಲುಬೆಯಂತೆ ನಿಂತುಬಿಟ್ಟ. ಈ ಕ್ಷಣಕ್ಕೆ ಕಾದಿದ್ದ ಯುವತಿ ಚೂರಿ ಹೊರತೆಗೆದವಳೇ "ನೋಡು,ನನ್ನ ಗಿಪ್ಟ್" ಎಂದು ದೇವೆಂದ್ರಗೌಡ ಎಂಬ ಯುವಕನ ಕತ್ತಿಗೆ ಚೂರಿ ಇರಿದೇ ಬಿಟ್ಟಿದ್ದಾಳೆ.

ಕೆಲವೇ ದಿನಗಳಲ್ಲಿ ಪತ್ನಿಯಾಗುವವಳು ಹೀಗೆ ಕುತ್ತಿಗೆಗೆ ಚೂರಿ ಹಾಕುತ್ತಾಳೆಂದು ಊಹಿಸಿಯೂ ಇರದಿದ್ದ ಹುಡುಗನಿಗೆ ಯುವತಿಯ  ಏಕಾಏಕಿ ನಡೆಸಿದ ಅಟ್ಯಾಕ್‌ನಿಂದ ದೇವೇಂದ್ರಗೌಡ ಶಾಕ್ ಆಗಿದ್ದಾನೆ. ಅಷ್ಟೊತ್ತಿಗಾಗಲೇ ಕತ್ತಿಗೆ ಚೂರಿ ಇರಿದು ಗಂಭೀರ ಗಾಯಗೊಳಿಸಿಬಿಟ್ಟಿದ್ದ ಕ್ರಿಮಿನಲ್ ಗರ್ಲ್. 

ವಿವಾಹಿತೆಯ ಜೊತೆ ತಮ್ಮನ ಲವ್ವಿ ಡವ್ವಿ, ಅಣ್ಣನನ್ನು ಕಾರ್‌ನಲ್ಲಿ ಸಜೀವವಾಗಿ ಸುಟ್ಟ ದುರುಳರು!

ಗಂಭೀರ ಗಾಯಗೊಂಡಿದ್ದ ದೇವೇಂದ್ರಗೌಡ ತಕ್ಷಣ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಆಗಿದ್ದಾನೆ. ಸದ್ಯ ಯುವಕನ ಪೋಷಕರಿಂದ ಅಪ್ರಾಪ್ತ ಬಾಲಕಿಯ ಮೇಲೆ ದೂರು ದಾಖಲಿಸಿದ್ದಾರೆ.  ಪ್ರಕರಣ ಗಂಭೀರ ಸ್ವರೂಪ ಪಡೆದ ಹಿನ್ನಲೆ, ಯುವತಿಯನ್ನು ಅರೆಸ್ಟ್ ಮಾಡಲಾಗಿದೆ. ಹಲಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

click me!