ಇನ್ಮುಂದೆ ಜನ್ಮದಲ್ಲಿ 'ಅದನ್ನ' ತೋರಿಸಲ್ಲ, ಬಿಡ್ರಪ್ಪೋ... ಹೆಂಗಸರ ಧರ್ಮದೇಟಿಗೆ ಮುದುಕನ ಸ್ಥಿತಿ ನೋಡಿ!

Published : Jun 14, 2025, 10:50 PM IST
Indecent gestures in Train

ಸಾರಾಂಶ

ರೈಲಿನಲ್ಲಿ ವೃದ್ಧನೊಬ್ಬ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ವೇಳೆ ಅಲ್ಲಿನ ಮಹಿಳೆಯರು ಮಾಡಿದ್ದೇನು ನೋಡಿ! ಮಹಿಳೆಯರ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರ... 

ಹೆಂಗಸರನ್ನು ಕಂಡ ತಕ್ಷಣ ಕೆಲವು ಪುರುಷರಿಗೆ ಹುಚ್ಚು ನೆತ್ತಗೇರಿ ಬಿಡುತ್ತದೆ. ಎಲ್ಲಂದರೆಲ್ಲಿ ಅಸಭ್ಯ ವರ್ತನೆ ಮಾಡುತ್ತಾ ಪೌರುಷತ್ವ ಮೆರೆಯುತ್ತಾರೆ. ಖಾಸಗಿ ಅಂಗಗಳನ್ನು ತೋರಿಸುತ್ತಾ ಹೆಣ್ಣುಮಕ್ಕಳನ್ನು ಕಂಡು ಜೊಲ್ಲು ಸುರಿಸುವುದು ಎಂದರೆ ಇಂಥ ಕಾಮುಕರಿಗೆ ಇನ್ನಿಲ್ಲದ ಖುಷಿ. ಇಂಥ ಎಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲಿಯೂ ವಯಸ್ಸಾದವರೂ ಇಂಥ ಕೆಟ್ಟ ನಡವಳಿಕೆ ತೋರಿಸುವುದು ಇದೆ. ಅಲ್ಲಿ ಇರುವವರು ಚಿಕ್ಕ ಹೆಣ್ಣುಮಕ್ಕಳೇ ಆಗಿರಲಿ, ಮಹಿಳೆಯರೇ ಆಗಿರಲಿ ಇಲ್ಲವೇ ವೃದ್ಧೆಯರೇ ಇರಲಿ... ಹೆಣ್ಣು ಎಂದು ತಿಳಿದರೆ ಸಾಕು, ಜೊಲ್ಲು ಸುರಿಸುವುದು ಇಂಥವರ ಜಾಯಮಾನ. ಮನೆಯಲ್ಲಿ ಎಷ್ಟೇ ಇದ್ದರೂ ಬೇರೆ ಹೆಣ್ಣುಮಕ್ಕಳನ್ನು ಕಂಡರೆ ಇವರಿಗೆ ಅದೇನೋ ಆಗಿಬಿಡುತ್ತದೆ. ಸಾರ್ವಜನಿಕ ಸ್ಥಳ, ರೈಲು, ಬಸ್ಸು ಯಾವುದೇ ಇರಲಿ, ತಮ್ಮ ಕೊಳಕು ಬುದ್ಧಿ ಪ್ರದರ್ಶಿಸುತ್ತಾರೆ. ಇದನ್ನು ನೋಡಿ ಹೆಣ್ಣುಮಕ್ಕಳು ಸುಮ್ಮನೇ ಇರುತ್ತಾರೆ ಎನ್ನುವುದು ಇವರ ಅನಿಸಿಕೆ.

ಆದರೆ, ಎಲ್ಲಾ ಹೆಂಗಸರೂ ಸುಮ್ಮನೆ ಕುಳಿತುಕೊಳ್ಳುವವರು ಅಲ್ಲ ಎನ್ನುವುದನ್ನು ಆಗಾಗ್ಗೇ ಹಲವರು ತೋರಿಸುತ್ತಲೇ ಇರುತ್ತಾರೆ. ಇಂಥವರಿಗೆ ಧರ್ಮದೇಟು ಕೊಟ್ಟರೇನೇ ಹೆಣ್ಣು ಎಂದರೇನು ಎನ್ನುವುದು ತಿಳಿಯುತ್ತದೆ. ಹೆಣ್ಣು ಎಂದರೆ ಕಾಮದ ವಸ್ತು ಎಂದೇ ಅಂದುಕೊಳ್ಳುವ ದೊಡ್ಡ ವರ್ಗವೇ ಇದೆ. ಆದ್ದರಿಂದಲೇ ಇಂಥವರ ಕೆಟ್ಟ ನಡವಳಿಕೆಗೆ ಕೊನೆಯೇ ಇಲ್ಲದಂತಾಗಿದೆ. ಆದರೆ ಅವರ ಗ್ರಹಚಾರ ಕೆಟ್ಟರೆ ದುರ್ಗತಿ ಬರುತ್ತದೆ ಎನ್ನುವುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಧರ್ಮನಗರ ಬಳಿ ತ್ರಿಪುರ ಸುಂದರಿ ಎಕ್ಸ್‌ಪ್ರೆಸ್‌ನಲ್ಲಿ ಹಿಂದೂ ಹುಡುಗಿಯೊಬ್ಬಳೊಂದಿಗೆ ಅಸಭ್ಯ ಸನ್ನೆ ಮಾಡಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮೊಹಮ್ಮದ್ ಇಬ್ರಾಹಿಂ ಉರ್ಫ್ ಇಸ್ಲಾಮಿ ಭಧ್ವಾ ಎಂಬ ವ್ಯಕ್ತಿಯನ್ನು ಮಹಿಳೆಯರು ಥಳಿಸಿದ್ದಾರೆ ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ಹೆಣ್ಣು ಮಕ್ಕಳನ್ನು ಕಂಡು ಅಸಭ್ಯವಾಗಿ ವರ್ತಿಸಿದರೆ ಹೆಂಗಸರು ಒಟ್ಟಾಗಿ ಹೀಗೆಯೇ ಬುದ್ಧಿ ಕಲಿಸಬೇಕು ಎಂದು ಶಾರದಾ ಭಟ್​ ಎನ್ನುವವರು ಶೇರ್​ ಮಾಡಿರುವ ಈ ವಿಡಿಯೋದಲ್ಲಿ ತೋರಿಸಿದ್ದಾರೆ. ಈ ವಿಡಿಯೋದಲ್ಲಿ ಆರಂಭದಲ್ಲಿ ವೃದ್ಧನೊಬ್ಬ (ಆತನ ಹೆಸರನ್ನು ಮೊಹಮ್ಮದ್ ಇಬ್ರಾಹಿಂ ಉರ್ಫ್ ಇಸ್ಲಾಮಿ ಭಧ್ವಾ ಎಂದು ಹೇಳಲಾಗಿದೆ) ತನ್ನ ಖಾಸಗಿ ಅಂಗವನ್ನು ತೋರಿಸುತ್ತಾ ಅಸಭ್ಯವಾಗಿ ವರ್ತಿಸುವುದನ್ನು ನೋಡಬಹುದು. ಇದನ್ನು ಅಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಅದಾದ ಬಳಿಕ ಹೆಂಗಸರೆಲ್ಲಾ ಸೇರಿ ಆತನಿಗೆ ಸರಿಯಾದ ಶಿಕ್ಷೆ ಕೊಟ್ಟಿದ್ದಾರೆ. ದಮ್ಮಯ್ಯ ಬಿಟ್ಟುಬಿಡ್ರೋ ಎಂದು ಆ ಮುದುಕ ಕೇಳಿಕೊಂಡಿದ್ದಾನೆ. ವಿಡಿಯೋ ಮಾಡುವುದು ತಿಳಿಯುತ್ತಿದ್ದಂತೆಯೇ ಮುಖವನ್ನು ಮುಚ್ಚಿಕೊಳ್ಳಲು ನೋಡಿದ್ದಾನೆ. ಮಹಿಳೆಯರು ದೂರು ದಾಖಲು ಮಾಡಿದ ಬಳಿಕ ಆತನನ್ನು ಅರೆಸ್ಟ್​ ಕೂಡ ಮಾಡಲಾಗಿದೆ ಎನ್ನಲಾಗಿದೆ.

ಹೆಂಗಸರು ಎಂದರೆ ಮಾನಕ್ಕೆ ಅಂಜಿ ಕುಳಿತುಕೊಳ್ಳುವವರು ಎಂದುಕೊಂಡಿದ್ದ ಈ ವೃದ್ಧನಿಗೆ ಸರಿಯಾಗಿ ಥಳಿಸಿದ ಮಹಿಳೆಯರು ಮುಖ ತೋರಿಸುವಂತೆ ಹೇಳಿದ್ದಾರೆ. ಆದರೆ ಆತ ಹೊಡೆಯಬೇಡಿರಿ ಎಂದು ಕೈಮುಗಿದು ಕೇಳಿಕೊಂಡಿದ್ದಾನೆ. ಕೊನೆಗೂ ಬಿಡದ ಮಹಿಳೆಯರು ಆತನ ಮುಖವನ್ನು ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಜೀವನದಲ್ಲಿ ಯಾವುದೇ ಹೆಂಗಸರನ್ನು ಕಂಡರೂ ಆ ಮುದುಕ ಅಸಭ್ಯವಾಗಿ ವರ್ತಿಸದಂತ ಪಾಠವನ್ನು ಮಹಿಳೆಯರು ಕಲಿಸಿದ್ದಾರೆ. ಮಹಿಳೆಯರ ಈ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ಹೀಗೆ ಮಾಡಿದಾಗ ಮಹಿಳೆಯರು ಮುಜುಗರ ಪಟ್ಟುಕೊಂಡು, ಅಸಹ್ಯವಾದರೂ ಸಹಿಸಿಕೊಂಡು ಹೋಗುತ್ತಾರೆ. ಆದರೆ ಅವರು ಒಗ್ಗಟ್ಟಾಗಿ ಇಂಥ ಕಾಮುಕರಿಗೆ ಧರ್ಮದೇಟು ನೀಡಿ ಅದನ್ನು ವಿಡಿಯೋ ಮಾಡಿ ಹರಿಬಿಟ್ಟರೆ ಜೀವನಪರ್ಯಂತ ಪರಸ್ತ್ರೀಯರನ್ನು ನೋಡಿ ಹೀಗೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೈಸೂರು: ಬಲೂನ್ ಹೀಲಿಯಂ ಸಿಲಿಂಡರ್ ಸ್ಫೋಟ; ಮೃತ ಸಲೀಂ ವಿರುದ್ಧ ಎಫ್‌ಐಆರ್ ದಾಖಲು
4.7 ಮಹಿಳಾ ಸ್ನೇಹಿ ರೇಟಿಂಗ್ ಹೊಂದಿದ್ದ ಕಂಪನಿ ಸಿಇಒನಿಂದಲೇ ಉದ್ಯೋಗಿಯ ಗ್ಯಾಂಗ್‌ರೇ*ಪ್ : ಮಹಿಳೆಯೂ ಆರೋಪಿ