ಪ್ರೀತಿ ಪ್ರೇಮ ಅಂತಾ ಹುಡುಗರ ಜೊತೆ ಮರ ಸುತ್ತೋ ಹುಡುಗಿಯರೇ ಎಚ್ಚರ, ಆ ವಿಷಯದಲ್ಲಿ ಯಾಮಾರಿದರೆ ಬದುಕು ನರಕ, ಇಲ್ಲಿ ಏನಾಗಿದೆ ನೋಡಿ

Published : Feb 21, 2025, 10:40 AM ISTUpdated : Feb 21, 2025, 11:23 AM IST
ಪ್ರೀತಿ ಪ್ರೇಮ ಅಂತಾ ಹುಡುಗರ  ಜೊತೆ  ಮರ ಸುತ್ತೋ ಹುಡುಗಿಯರೇ ಎಚ್ಚರ, ಆ ವಿಷಯದಲ್ಲಿ ಯಾಮಾರಿದರೆ ಬದುಕು ನರಕ, ಇಲ್ಲಿ ಏನಾಗಿದೆ ನೋಡಿ

ಸಾರಾಂಶ

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ, ಗರ್ಭಪಾತಕ್ಕೂ ಕಾರಣನಾಗಿ ವಂಚಿಸಿ ಕೈಕೊಟ್ಟ ಪ್ರಿಯಕರ ಸೇರಿ ಆತನ ತಂದೆ ಹಾಗೂ ತಾಯಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೊಂದ ಯುವತಿ ದೂರುನೀಡಿದ್ದಾರೆ.

ಕೊಳ್ಳೇಗಾಲ (ಫೆ.21): ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ, ಗರ್ಭಪಾತಕ್ಕೂ ಕಾರಣನಾಗಿ ವಂಚಿಸಿ ಕೈಕೊಟ್ಟ ಪ್ರಿಯಕರ ಸೇರಿ ಆತನ ತಂದೆ ಹಾಗೂ ತಾಯಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೊಂದ ಯುವತಿ ದೂರುನೀಡಿದ್ದಾರೆ.

ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ರೋಹಿಣಿ (30) ವಂಚನೆಗೊಳಗಾದ ಯುವತಿಯಾಗಿದ್ದು ಈಕೆ ಕೊಳ್ಳೇಗಾಲ ತಾಲೂಕಿನ ತೆಳ್ಳನೂರು ಗ್ರಾಮದ ಸಿದ್ದಪ್ಪಾಜಿ ಅಲಿಯಾಸ್ ಶಿವು ಯುವತಿಯನ್ನು ಮದುವೆಯಾಗುವುದಾಗಿ ವಂಚಿಸಿರುವ ಆರೋಪಿ. ಈತನ ವಂಚನೆ ಕುರಿತು ಯುವತಿ ಪೋಷಕರ ಬಳಿ ಹೇಳಿಕೊಂಡರು ಸಹಾ ಯುವಕನ ಕುಕೃತ್ಯಕ್ಕೆ ಸಾಥ್ ನೀಡಿದ್ದು ಅಲ್ಲದೆ ತನ್ನನ್ನು ಗರ್ಭಪಾತಕ್ಕೆ ದೂಡಿದ ಸಿದ್ದಪ್ಪಾಜಿ ತಂದೆ ದೊಡ್ಡಸಿದ್ದಯ್ಯ, ತಾಯಿ ಲಕ್ಷ್ಮಿ ವಿರುದ್ಧವೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೂರು ಪಟ್ಟು ಹೆಚ್ಚು ಹಣದ ಆಮಿಷ: ಇಬ್ಬರು ಮಹಿಳೆಯರಿಂದ ಬರೋಬ್ಬರಿ 246 ಜನರಿಗೆ ಮೋಸ!

ದೂರಿನ ಸಾರಾಂಶ:

ಯುವತಿ ರೋಹಿಣಿ ಬೆಂಗಳೂರಿನ ಆರ್.ಆರ್.ನಗರದಲ್ಲಿ ಶುಶ್ರೂಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಆರೋಪಿ ಸಿದ್ದಪ್ಪಾಜಿ ಮತ್ತು ರೋಹಿಣಿ ನಡುವೆ ಪ್ರೇಮಾಂಕುರವಾಗಿತ್ತು. ನಮ್ಮಿಬ್ಬರ ಪ್ರೀತಿ, ಸಲುಗೆ ಹಿನ್ನೆಲೆ ಬೈಕ್ ಖರೀದಿಗಾಗಿ, ಲ್ಯಾಪ್ ಟ್ಯಾಪ್‌ ಕೊಳ್ಳಲು ಮತ್ತು ಜಮೀನಿನಲ್ಲಿ ಕೊಳವೆಬಾವಿ ಅಳವಡಿಕೆಗಾಗಿ ₹4.50ಲಕ್ಷ ನೀಡಲಾಗಿತ್ತು ಎಂದು ಯುವತಿ ವಿವರಿಸಿದ್ದಾರೆ. 

ಮೈಸೂರಿನ ಟೆರಿಷಿಯನ್ ಕಾಲೇಜಿನಲ್ಲಿ ವಾಸ್ತವ್ಯ ಹೂಡಿದ್ದ ಆರೋಪಿ ಈಕೆಯೊಂದಿಗೆ ಸಲುಗೆ ಬೆಳೆಸಿ, ಮದುವೆಯಾಗುವುದಾಗಿ ನಂಬಿಸಿ ಕಳೆದ 2024ರ ಅಕ್ಟೋಬರ್ ತಿಂಗಳಲ್ಲಿ 12ರಿಂದ 29ನೇ ತಾರೀಖಿನ ತನಕ ನನ್ನ ಜೊತೆ ಸಲುಗೆ ಬೆಳೆಸಿ ಅತ್ಯಾಚಾರ ಎಸಗಿದ್ದಾನೆ. ಪರಿಣಾಮ ಗರ್ಭವತಿಯಾದ ನನ್ನನ್ನು ಮದುವೆ ಆಗಲಾರೆ ಎಂದು ವಂಚಿಸಿದ. ಈ ವಿಚಾರವನ್ನು ತೆಳ್ಳನೂರು ಗ್ರಾಮದಲ್ಲೆ ಇರುವ ಅವರ ತಂದೆ, ತಾಯಿಯರಿಗೆ ತಿಳಿಸಿ ನಾನು ಗರ್ಭವತಿಯಾಗಿದ್ದು ಮದುವೆ ಮಾಡಿಸಿ ಎಂದು ಕೇಳಿದಾಗ ಗರ್ಭವತಿಯಾಗಿರುವ ನಿನ್ನ ಮದುವೆಯಾಗಲು ನಮ್ಮ ಕುಲಸ್ಥರು, ಕುಟುಂಬ ಒಪ್ಪಲ್ಲ, ಗರ್ಭಪಾತ ಮಾಡಿಸಿಕೊಂಡರೆ ಮದುವೆ ಮಾಡಿಸುತ್ತೇವೆ ಎಂದು ಸಿದ್ದಪ್ಪಾಜಿ ತಂದೆ, ತಾಯಿ ಮಾತು ನಂಬಿ ಗರ್ಭ ನಿರೋಧಕ ಮಾತ್ರೆ ತೆಗೆದುಕೊಂಡೆ.

ಇದನ್ನೂ ಓದಿ: ಮ್ಯಾರೆಜ್‌ ದೋಖಾ: ಹಣ ಪಡೆದು ಮದುವೆಯಾಗ್ತಾಳೆ ಸುಂದರ ಯುವತಿ, ಅವಿವಾಹಿತ ಪುರುಷರೇ ಟಾರ್ಗೆಟ್!

ಕೆಲ ದಿನಗಳ ಬಳಿಕ ಸಿದ್ದಪ್ಪಾಜಿಗೆ ನನ್ನ ಮದುವೆಯಾಗು ಎಂದರೆ ಕೇಳಲಿಲ್ಲ, ನಾನು ಜೈಲಿಗೆ ಹೋದರೂ ಮದುವೆ ಆಗಲ್ಲ ಎಂದು ನಿರಾಕರಿಸಿದ್ದಾನೆ. ಹಾಗಾಗಿ ನನ್ನನ್ನು ನಂಬಿಸಿ ಮೋಸ ಮಾಡಿದ್ದು ಅಲ್ಲದೆ ಗರ್ಭಪಾತಕ್ಕೆ ಕಾರಣನಾದ ಸಿದ್ದಪ್ಪಾಜಿ, ಈತನ ಮಾತು ಕೇಳಿ ನನಗೆ ವಂಚನೆಗೆ ಸಹಕಾರ ನೀಡಿದ ಆತನ ತಂದೆ ದೊಡ್ಡಸಿದ್ದಯ್ಯ ಹಾಗೂ ತಾಯಿ ಲಕ್ಷ್ಮೀ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ನೊಂದ ಯುವತಿ ನೀಡಿದ ದೂರಿನ ಹಿನ್ನೆಲೆ ಪಿಎಸ್ಸೈ ವರ್ಷ ಕ್ರಮಕೈಗೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!