ಸಿನಿಮಾಗಳಲ್ಲಿ ಕಳ್ಳರು ಕೈಯಲ್ಲಿ ಮಚ್ಚು ಹಿಡಿದು ಬ್ಯಾಂಕ್ ಲೂಟಿ ಮಾಡುವುದನ್ನು ನೋಡಿದ್ದೇವೆ.ಅದೇ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಯುವಕ ಮಚ್ಚು ಹಿಡಿದು ಬ್ಯಾಂಕಿನೊಳಗೆ ಎಂಟ್ರಿಕೊಟ್ಟಿದ್ದಾನೆ.. ಯಾರು? ಎಲ್ಲಿ?ಯಾಕೆ? ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು/ದೊಡ್ಡಬಳ್ಳಾಪುರ [ಡಿ.2]: ಸಿನಿಮೀಯ ರೀತಿಯಲ್ಲಿ ರೀತಿಯಲ್ಲಿ ಯುವಕನೊಬ್ಬ ಹಾಡು ಹಗಲೇ ಮಚ್ಚು ಹಿಡಿದು ಬ್ಯಾಂಕಿನೊಳಗೆ ನುಗ್ಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೂಬಗೆರೆಯಲ್ಲಿ ಘಟನೆ ನಡೆದಿದೆ.
ಇಂದು [ಸೋಮವಾರ] ಬೆಳಗ್ಗೆ 11ರ ಸುಮಾರಿಗೆ ದುರ್ಗೇನಹಳ್ಳಿ ಕುಮಾರ್ ಎನ್ನುವ ಯುವಕ ಮಚ್ಚು ಹಿಡಿದು ತೂಬಗೆರೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕಿನೊಳಗೆ ನುಗ್ಗಿದ್ದಾನೆ.
undefined
ದಾಂಪತ್ಯ ಜೀವನಕ್ಕೆ ಕ್ರಿಕೆಟಿಗ ಮನೀಶ್, ನಿತ್ಯನ ಲೀಲೆಗೆ ಡೆಲ್ಲಿ ಸ್ಕೂಲ್ ಫಿನೀಶ್; ಡಿ.2ರ ಟಾಪ್ 10 ಸುದ್ದಿ!
ಬ್ಯಾಂಕ್ ಗೆ ನುಗ್ಗಿ ಮಚ್ಚಿನಿಂದ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಇದರಿಂದ ಕೆಲ ಕಾಲ ಯುವಕನ ಕೃತ್ಯಕ್ಕೆ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. ಈ ದೃಶ್ಯ ಬ್ಯಾಂಕಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದುರ್ಗೇನಹಳ್ಳಿ ಕುಮಾರ್ ನನ್ನು ಸ್ಥಳೀಯರು ಹಿಡಿದು ಥಳಿಸಿ, ಬಳಿಕ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು.
ಅಗತ್ಯ ದಾಖಲಾತಿಗಳಿಲ್ಲದೇ ಹಣ ಕೊಡಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಹೇಳಿ ಕಳುಹಿಸಿದ್ದಾರೆ. ಇದರಿಂದ ಕುಪಿತಗೊಂಡು ಮಚ್ಚು ತಂದು ಹಲ್ಲೆಗೆ ಮುಂದಾಗಿದ್ದಾನೆಂದು ಸ್ಥಳೀಯರ ಅಭಿಪ್ರಾಯವಾಗಿದೆ.
ಸದ್ಯ ಕುಮಾರ್ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಚ್ಚು ಹಿಡಿದು ಹಲ್ಲೆಗೆ ಮುಂದಾಗಿದ್ದು ಯಾಕೆ ಎಂಬುದರ ಬಗ್ಗೆ ವಿಚಾರಣೆ ನಡೆಸಿದ್ದಾರೆ.