6 ವರ್ಷ ಬಾಲಕಿಯ ರೇಪ್: ಸ್ಕೂಲ್ ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ, ಆರೋಪಿ ಅರೆಸ್ಟ್!

By Suvarna News  |  First Published Dec 2, 2019, 1:30 PM IST

6 ವರ್ಷದ ಬಾಲಕಿ ಅತ್ಯಾಚಾರ| ರೇಪ್ ಮಾಡಿ ಕತ್ತು ಹಿಸುಕಿ ಸಾಯಿಸಿದ ದುರುಳ| 38 ವರ್ಷದ ಆರೋಪಿ ಅರೆಸ್ಟ್


ಭೋಪಾಲ್[ಡಿ.02]: ರಾಜಸ್ಥಾನ ಟೋಂಕ್ ಜಿಲ್ಲೆಯಲ್ಲಿ ಶನಿವಾರದಂದು ನಾಪತ್ತೆಯಾಗಿದ್ದ 6 ವರ್ಷದ ಬಾಲಕಿಯ ಶವ ಭಾನುವಾರದಂದು ಪತ್ತೆಯಾಗಿದೆ. ಬಾಲಕಿಯನ್ನು ರೇಪ್ ಮಾಡಲಾಗಿದ್ದು, ಬಳಿಕ ಶಾಲಾ ಸಮವಸ್ತ್ರದ ಬೆಲ್ಟ್ ನಿಂದ ಕತ್ತು ಹಿಡುಕಿ ಸಾಯಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಮಗುವಿನ ಶವ ಆಕೆಯ ಮನೆ ಬಳಿ, ನಿರ್ಜನ ಪ್ರದೇಶದಲ್ಲಿ ಪೊದೆಯೊಂದರಲ್ಲಿ ಪತ್ತೆಯಾಗಿದೆ. ಇನ್ನು ಶವದ ಬಳಿ ಮದ್ಯದ ಬಾಟಲ್, ಕರಿದ ತಿಂಡಿಯ ತುಂಡುಗಳು ಹಾಗೂ ರಕ್ತದ ಕಲೆಗಳು ಪತ್ತೆಯಾಗಿವೆ. 

ಘಟನೆ ಸಂಬಂಧ ಮಾಹಿತಿ ನೀಡಿರುವ ಪೊಲೀಸರು 'ಶನಿವಾರ ಬಾಲಕಿ ಓದುತ್ತಿದ್ದ ಶಾಲೆಯಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದಾಧ ಬಳಿಕ ಮಗು ನಾಪತ್ತೆಯಾಗಿತ್ತು. ಮಧ್ಯಾಹ್ನ 3 ಗಂಟೆಯಾದರೂ ಮಗು ಮನೆಗೆ ಬಾರದಿದ್ದಾಗ ಕುಟುಂಬ ಸದಸ್ಯರು ಹುಡುಕಾಟವನ್ನಾರಂಭಿಸಿದರು. ಹಲವಾರು ತಾಸು ಹೊಲ ಹಾಗೂ ಸಂಬಂಧಿಕರ ಮನೆಯಲ್ಲೂ ಹುಡುಕಾಟ ಮುಂದುವರೆಸಿದರು. ಆದರೆ ಭಾನುವಾರ ಬೆಳಗ್ಗೆ ಶಾಲೆಯಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರದಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಬಾಲಕಿಯ ಶವ ಪತ್ತೆಯಾಗಿದೆ' ಎಂದಿದ್ದಾರೆ.

Tap to resize

Latest Videos

undefined

ವೈದ್ಯೆ ಕಿರುಚದಂತೆ ವಿಸ್ಕಿ ಸುರಿದಿದ್ದ ರೇಪಿಸ್ಟ್‌ಗಳು: ಪ್ರಜ್ಞೆ ತಪ್ಪಿದಾಗ ಅತ್ಯಾಚಾರ!

ಇನ್ನು ಮಗುವಿನ ಮೃತದೇಗಹ ಪತ್ತೆಯಾದ ಬೆನ್ನಲ್ಲೇ ಸ್ಥಳೀಯರು ಗುಂಪುಗೂಡಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳೊಂದಿಗೆ ತನಿಖೆ ನಡೆಸುತ್ತಿದ್ದಾರೆ.

ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರೆದಿದೆ. ಪ್ರಾಥಮಿಕ ವರದಿಯಲ್ಲಿ ಇದೊಂದು ರೇಪ್ ಹಾಗೂ ಕೊಲೆ ಪ್ರಕರಣವೆಂದು ಉಲ್ಲೇಖಿಸಲಾಗಿದೆ.

ಆರೋಪಿ ಅರೆಸ್ಟ್

ಪ್ರಕರಣ ಸಂಬಂಧ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಆರೋಪಿಗಳ ಹುಡುಕಾಟಕ್ಕಾಗಿ ವಿಶೇಷ ತಂಡವೊಂದನ್ನು ನೇಮಿಸಲಾಗಿತ್ತು. ತನಿಖೆ ಮುಂದುವರೆಸಿದ ಪೊಲೀಸರು ಅತ್ಯಾಚಾರ ನಡೆಸಿದ್ದಾನೆನ್ನಲಾದ 36 ವರ್ಷದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೇಪ್ ಸಂತ್ರಸ್ತೆಗೆ ನ್ಯಾಯ ಕೊಡಿ: 20 ನಿಮಿಷ ಬಾಲಾಜಿ ದೇಗುಲ ಬಾಗಿಲು ಮುಚ್ಚಿ ಪ್ರತಿಭಟನೆ!

ಡಿಸೆಂಬರ್ 2ರ ಟಾಪ್ 10  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!