ನಂಬಿಕೆ ಇಟ್ಟು ತಂಗಿಯನ್ನು ಸ್ನೇಹಿತನ ರೂಮ್ ಕಳುಹಿಸಿದ ಅಣ್ಣ, ಬಳಿಕ ನಡೆದಿದ್ದು ಘನಘೋರ

By Suvarna News  |  First Published Dec 16, 2020, 7:37 PM IST

ಕಾಮುಕನೊಬ್ಬ ತನ್ನ ಸ್ನೇಹಿತನ ತಂಗಿಯನ್ನು ರೂಮ್ ಕರೆಯಿಸಿಕೊಂಡು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.


ಬೆಂಗಳೂರು, (ಡಿ.16): ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಸಿಲಿಆನ್ ಸಿಟಿಯಲ್ಲಿ ನಡೆದಿದೆ.

ಬೆಂಗಳೂರಿಗೆ ವಿದ್ಯಾಭ್ಯಾಸ ಮಾಡುತ್ತಿದ್ದ ಆಕೆ, ಬಾಕಿ ಶುಲ್ಕ ಪಾವತಿಸಲೆಂದು ನಗರಕ್ಕೆ ಬಂದಿದ್ದಳು.  ಈ ವೇಳೆ ತನಗೆ ಪರಿಚಯವಿದ್ದ ಯುವಕನಿಗೆ ಕಾಲ್ ಮಾಡಿದ್ದಳು. ಆತ ತನ್ನ ರೂಂಗೆ ಬರುವಂತೆ ತಿಳಿಸಿದ್ದ. ಅದರಂತೆ ಆಕೆ ಆಟೋ ಮಾಡಿಕೊಂಡು ಬುಧವಾರ ಬೆಳಗ್ಗೆ ಅವನ ರೂಂ ಬಳಿ ಹೋಗಿದ್ದಳು.

Tap to resize

Latest Videos

ಪಾರ್ಟಿ‌ ಮಾಡೋಣ ಬಾ.. ನಂಬಿ ಬಂದ ಆಕೆಗೆ ಮಾಡಬಾರದನ್ನ ಮಾಡಿದ ಕಾಮುಕ ಸ್ನೇಹಿತರು

ಈ ವೇಳೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.ಆದರೆ ಆತ, ಆಕೆ ಮೇಲೆ ಅತ್ಯಾಚಾರ ಮಾಡಿ ಕೊಂದಿದ್ದಾನೆ. ಬಳಿಕ ಅದೇ ಬಿಲ್ಡಿಂಗ್​ನ ಕೆಳ ಮಹಡಿಗೆ ಬಂದು ನನ್ನ ಸ್ನೇಹಿತೆ ಪ್ರಜ್ಞೆತಪ್ಪಿದ್ದಾಳೆ ಎಂದು ಸ್ನೇಹಿತರ ಬಳಿ ಹೇಳಿದ್ದಾನೆ. 

ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

click me!