ಶಾ, ನಡ್ಡಾ ಹೆಸರು ಹೇಳಿಕೊಂಡು ಕೋಟಿಗಟ್ಟಲೇ ಹಣ ವಂಚಿಸಿದ್ದವನನ್ನ ಬಂಧಿಸಿದ ಸಿಸಿಬಿ

By Suvarna NewsFirst Published Dec 16, 2020, 4:53 PM IST
Highlights

ಅಮಿತ್ ಶಾ, ಜೆಪಿ ನಡ್ಡಾ ಹೆಸರು ಹೇಳಿಕೊಂಡು ಆರ್ ಎಸ್ ಎಸ್ ಮುಖವಾಡ ಹಾಕಿಕೊಂಡು ಕೋಟ್ಯಾಂತರ ರೂಪಾಯಿ ವಂಚಿಸಿದ್ದ ಆಸಾಮಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, (ಡಿ.16): ನಾನು ಆರ್ ಎಸ್ ಎಸ್ ಮುಖಂಡ, ತನಗೆ ಅಮಿತ್ ಶಾ, ಜೆಪಿ ನಡ್ಡಾ ಮುಂತಾದವರ ಪರಿಚಯವಿದೆ ಎಂದು ಹೇಳಿಕೊಂಡು ಜನರಿಗೆ ಕೋಟ್ಯಾಂತರ ರೂ. ವಂಚನೆ ಮಾಡಿದ ಆರೋಪದಲ್ಲಿ ಯುವರಾಜ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

"

ಯುವರಾಜ್ ಅಲಿಯಾಸ್ ಸ್ವಾಮಿ ಎಂಬಾತ ಅನೇಕರಿಗೆ ವಂಚನೆ ನಡೆಸಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಇಂದು (ಬುಧವಾರ) ಆತನ ನಿವಾಸದ ಮೇಲೆ ದಾಳಿ ನಡೆಸಿದ್ದರು.

ಪಿಎ​ಸ್‌ಐ ಹೆಸ​ರಿ​ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿ​ಕೆ

ಆರೋಪಿಯು ಪ್ರಮುಖ ರಾಜಕೀಯ ನಾಯಕರ ಜೊತೆ ಚಿತ್ರಗಳನ್ನು ತೆಗೆದುಕೊಂಡು, ತನಗೆ ಎಲ್ಲರ ಪರಿಚಯವಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಇದೇ ರೀತಿ ಉದ್ಯಮಿಯೋರ್ವರಿಗೆ ಕೋಟ್ಯಾಂತರ ರೂ. ವಂಚಿಸಿದ್ದ ಎನ್ನಲಾಗಿದೆ.

ಉದ್ಯಮಿ ನೀಡಿದ ದೂರಿನ ಅನ್ವಯ ವಾರಂಟ್ ಪಡೆದು ಯುವರಾಜ್ ಅಲಿಯಾಸ್ ಸ್ವಾಮಿ ಮನೆಗೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿ, ನಂತರ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

click me!