MA ಮಾಡಿ ಲಾರಿ ಕ್ಲೀನರ್! ಶಿಕ್ಷಕನಾಗಬೇಕಂದಿದ್ದ ಯುವಕ ವಿದ್ಯುತ್ ತಂತಿ ತಗುಲಿ ಸಾವು

By Ravi Janekal  |  First Published Dec 12, 2022, 9:27 PM IST

ಲಾರಿ ಕ್ಯಾಬಿನ್‌ ಮೇಲಿದ್ದ ಟೈರ್ ಕೆಳಗಿಳಿಸುವ ವೇಳೆ ವಿದ್ಯುತ್ ವೈರ್ ತಗುಲಿ ಲಾರಿ ಕ್ಲೀನರ್ ಸುಟ್ಟು ಕರಕಲಾದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ತೋರಣಗಲ್ಲು ಗ್ರಾಮದ ಬಳಿ ನಡೆದಿದೆ.


ಬಳ್ಳಾರಿ (ಡಿ.12): ಲಾರಿ ಕ್ಯಾಬಿನ್‌ ಮೇಲಿದ್ದ ಟೈರ್ ಕೆಳಗಿಳಿಸುವ ವೇಳೆ ವಿದ್ಯುತ್ ವೈರ್ ತಗುಲಿ ಲಾರಿ ಕ್ಲೀನರ್ ಸುಟ್ಟು ಕರಕಲಾದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ತೋರಣಗಲ್ಲು ಗ್ರಾಮದ ಬಳಿ ನಡೆದಿದೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮೇಗಳ ಕಣವಿ ಗ್ರಾಮದ ಯುವಕ ತಿಪ್ಪೇಸ್ವಾಮಿ (25) ಮೃತ ದುರ್ದೈವಿ. ಲಾರಿ ಕ್ಯಾಬೀನ್ ಮೇಲೆ ಇದ್ದ ಟೈರ್ ಕೆಳಗಿಳಿಸಲು ಮುಂದಾಗಿದ್ದ ಕ್ಲೀನರ್. ಟೈರ್ ಕೆಳಗಿಳಿಸುವ ವೇಳೆ ಆಯತಪ್ಪಿ ಹೈಪರ್ ವಿದ್ಯುತ್ ತಂತಿ ತಗುಲಿದೆ. ನೋಡುನೋಡ್ತಿದ್ದಂತೆ ಸುಟ್ಟುಕರಕಲಾದ ಯುವಕ.

ವಿದ್ಯಾವಂತನಾಗಿದ್ದ ಯುವಕ ತಿಪ್ಪೇಸ್ವಾಮಿ ಎಂಎ ಮುಗಿಸಿ ಬಿ.ಎಡ್‌ಗೆ ಅರ್ಜಿ ಸಲ್ಲಿಸಿದ್ದ. ಮುಂದಿನ ವಿದ್ಯಾಭ್ಯಾಸದ ಖರ್ಚಿಗೆ ಪಾರ್ಟ್ ಟೈಂ ಕೆಲಸ ಮಾಡಲು ಹಲವೆಡೆ ಪ್ರಯತ್ನಿಸಿದ್ದರೂ ಕೆಲಸ ಸಿಕ್ಕಿರಲಿಲ್ಲ. ಕುಟುಂಬದ ಮೇಲೆ ಅವಲಂಭಿತನಾಗದೆ ಲಾರಿ ಕ್ಲೀನರ್ ಆಗಿ ದುಡ್ಡಿಯುತ್ತಿದ್ದ ತಿಪ್ಪೇಸ್ವಾಮಿ. ಇಂದು ಟೈರ್ ಇಳಿಸುವ ವೇಳೆ ವಿಧಿ ಬಲಿಪಡೆದಿದೆ. 

Latest Videos

undefined

ತುಮಕೂರು: ವಿದ್ಯುತ್ ತಗುಲಿ ಜೂನಿಯರ್ ಖ್ಯಾತಿಯ ರವಿಚಂದ್ರನ್ ಸಾವು

ಕಾರು ಪಲ್ಟಿ: ತಾಯಿ, ಮಗು ಸಾವು

ಸುಳ್ಯ: ಜಾಲ್ಸೂರು-ಕಾಸರಗೋಡು ರಸ್ತೆಯ ಪರಪ್ಪೆ ಬಳಿ ಇನ್ನೋವಾ ಕಾರೊಂದು ಸ್ಕಿಡ್‌ ಆಗಿ ಪಲ್ಟಿಹೊಡೆದ ಪರಿಣಾಮವಾಗಿ ಆ ವಾಹನದಲ್ಲಿದ್ದ ಸುಳ್ಯ ಮೂಲದ ತಾಯಿ ಮತ್ತು ಮಗು ಮೃತಪಟ್ಟು, ನಾಲ್ವರು ತೀವ್ರ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.

ಕಾಸರಗೋಡು ಜಿಲ್ಲೆಯ ಗಾಳಿಮುಖ ಗೋಳಿತ್ತಡಿ ಶಾನ್‌ ಎಂಬವರ ಪತ್ನಿ, ಸುಳ್ಯದ ನಾವೂರು ಬೋರುಗುಡ್ಡೆ ಅಬ್ದುಲ್ಲ ಎಂಬವರ ಪುತ್ರಿ 28ವರ್ಷದ ಶಾಹಿನಾ ಹಾಗೂ 3 ವರ್ಷದ ಮಗು ಶಜಾ ಮೃತಪಟ್ಟವರು. ಇನ್ನೋವಾ ಕಾರಲ್ಲಿದ್ದ ಇನ್ನು ನಾಲ್ವರು ತೀವ್ರ ಗಾಯಗೊಂಡಿದ್ದು, ಅವರನ್ನು ಕಾಸರಗೋಡು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಮೃತಪಟ್ಟತಾಯಿ ಮತ್ತು ಮಗುವಿನ ಮೃತದೇಹವನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ತರಲಾಗಿದೆ. ಗಾಳಿಮುಖದಿಂದ ಕಾರ್ಯಕ್ರಮವೊಂದಕ್ಕೆ ಪೈಂಬೆಚ್ಚಾಲಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. 

ಚಲಿಸುತ್ತಿದ್ದ ಬಸ್‌ನಲ್ಲಿ ವಿದ್ಯುತ್, 8 ಮಂದಿ ಸುಟ್ಟು ಕರಕಲು!

click me!