* ಸಿನಿಮೀಯ ರೀತಿಯಲ್ಲಿ ದರೋಡೆ ನಡೆಸಿದ ಗ್ಯಾಂಗ್.
* ಹೊರ ರಾಜ್ಯದ ನಾಲ್ವರಿಂದ ಮಾರಕಾಸ್ತ್ರ ತೋರಿಸಿ ದರೋಡೆ.
* ಮಧ್ಯರಾತ್ರಿ ಕರ್ಪೂರದ ಕಟ್ಟೆ ಗ್ರಾಮದ ತೋಟದ ಮನೆಗೆ ನುಗ್ಗಿದ ಕಳ್ಳರು
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ, (ಮೇ.21): ಇತ್ತೀಚೆಗೆ ದರೋಡೆ ಮಾಡುವ ಖದೀಮರು ಅತಿ ಹೆಚ್ಚಾಗಿ ಸಿನಿಮೀಯ ರೀತಿಯಲ್ಲಿ ಮನೆಗಳನ್ನು ದೋಚೋದಕ್ಕೆ ಶುರು ಮಾಡಿದರೋದು ಜನರಲ್ಲಿ ಆತಂಕ ಮೂಡಿಸಿದೆ. ಇದಕ್ಕೆ ನಿದರ್ಶನ ಎಂಬಂತೆ, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಹೋಬಳಿಯಲ್ಲಿ ಬರುವ ಕರ್ಪೂರದ ಕಟ್ಟೆ ಗ್ರಾಮದ ತೋಟದಲ್ಲಿರೋ ಚಂದ್ರಶೇಖರ್ ಎಂಬಾತನ ಮನೆಗೆ ನುಗ್ಗಿ ಕಳ್ಳರು ದರೋಡೆ ಮಾಡಿದ್ದಾರೆ.
ನಿನ್ನೆ(ಶುಕ್ರವಾರ) ಮಧ್ಯರಾತ್ರಿ ಪ್ಲಾನ್ ಮಾಡಿಕೊಂಡೆ ಬಂದ ನಾಲ್ಕು ಮಂದಿ ಖದೀಮರು ಸಹಾಯ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ್ದಾರೆ. ದಿಢೀರ್ ನುಗ್ಗಿದ ಪರಿಣಾಮ ಮನೆಯಲ್ಲಿದ್ದ ಅಜ್ಜಿ ಹಾಗೂ ಮೊಮ್ಮಗಳಿಗೆ ಮಾರಕಾಸ್ತ್ರಗಳನ್ನು ತೋರಿಸಿ ಹೆದರಿಸುವ ಮೂಲಕ ದರೋಡೆ ಮಾಡಲು ಮುಂದಾಗಿದ್ದಾರೆ. ಇಬ್ಬರು ಖದೀಮರು ಲಾಂಗು,ಮಚ್ಚು ಇನ್ನಿತರ ಮಾರಕಾಸ್ತ್ರಗಳನ್ನು ಬಳಸಿ, ಬೆದರಿಕೆ ಹಾಕಿದ್ದಾರೆ. ಇದ್ರಿಂದ ಭಯಬೀತರಾದ ಅಜ್ಜಿ ಹಾಗೂ ಮೊಮ್ಮಗಳು ಸೈಲೆಂಟ್ ಆಗಿ ಒಂದು ಕಡೆ ಕುಳಿತಿದ್ದಾರೆ. ಇತ್ತ ಇಬ್ಬರು ಕಳ್ಳರು ಅವರಿಗೆ ಮಾರಾಕಾಸ್ತ್ರಗಳನ್ನ ತೋರಿಸಿ ಹೆದರಿಸಿಕೊಂಡು ನಿಂತಿದ್ದರೆ, ಇನ್ನಿಬ್ಬರು ಖದೀಮರು ಮನೆಯೊಳಗಿರೋ ಎಲ್ಲಾ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಎಸ್ಕೇಪ್ ಆಗಿದ್ದಾರೆ.
undefined
ಕಳವಿಗೂ ಮೊದಲು ಬ್ಯಾಂಕ್‌ನಲ್ಲಿ ಪೂಜೆ ಮಾಡಿದ ಕಳ್ಳರು
ಮಾಸ್ಟರ್ ಪ್ಲಾನ್ ಮಾಡಿ ದರೋಡೆಗೆ ಸ್ಕೆಚ್
ಈ ದರೋಡೆಯನ್ನು ಮಾಡೋದಕ್ಕೆ ಖದೀಮರು ಸುಮಾರು ದಿನಗಳಿಂದ ಪ್ಲಾನ್ ಮಾಡಿದ್ದಾರೆ. ನಿನ್ನೆ ಚಂದ್ರಶೇಖರ್ ಹಾಗೂ ಮನೆಯವರು ಅಜ್ಜಿ ಹಾಗೂ ಮೊಮ್ಮಗಳು ಇಬ್ಬರನ್ನು ಬಿಟ್ಟು ಸಂಬಂಧಿಕರ ಮದುವೆಗೆಂದು ತೆರಳಿದ್ದ ಸಮಯವನ್ನೇ ಉಪಯೋಗಿಸಿಕೊಂಡು ಮಧ್ಯರಾತ್ರಿ ಏಕಾಏಕಿ ಮನೆಗೆ ಅಟ್ಯಾಕ್ ಮಾಡಿದ್ದಾರೆ. ಇದನ್ನೆಲ್ಲಾ ಇಲ್ಲೇ ಸುತ್ತಮುತ್ತಲಿನ ನವರೇ ಮಾಡಿದ್ದಾರೋ ಅಥವಾ ಬೇರೆ ರಾಜ್ಯಗಳಿಂದ ಖದೀಮರ ಗ್ಯಾಂಗ್ ಬಂದಿದೆಯೋ ಎಂಬ ಅನುಮಾನ ಹಾಗೂ ಭಯದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಮೂಡಿದೆ. ಅದ್ರಲ್ಲಂತೂ ಅವರು ತೋಟದಲ್ಲಿ ಇರುವ ಒಂಟಿ ಮನೆಯನ್ನೇ ಟಾರ್ಗೆಟ್ ಮಾಡಿರೋದಕ್ಕೆ ಸುತ್ತಮುತ್ತ ಇರುವ ತೋಟದ ಮನೆಯ ಮಾಲೀಕರು ಭಯ ಪಡ್ತಿದ್ದಾರೆ.
ಕಳೆದೊಂದು ವಾರದಿಂದಲೂ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ ದರೋಡೆಗಳು ನಡೆಯುತ್ತಲೇ ಇವೆ. ಮೊನ್ನೆ ತಾನೆ ಶ್ರೀರಾಂಪುರದಿಂದ ಕೇವಲ ೨ ಕಿಲೋಮೀಟರ್ ದೂರದಲ್ಲಿ ಓರ್ವ ಶಿಕ್ಷಕಿ ತನ್ನ ಸ್ಕೂಟಿಯಲ್ಲಿ ಮಧ್ಯಾಹ್ನದ ವೇಳೆ ಬರುವ ಸಮಯದಲ್ಲಿ ಯಾರೋ ಅವರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಾಕಾಸ್ತ್ರಗಳನ್ನು ತೋರಿಸುವ ಮೂಲಕ ಹೆದರಿಸಿ ಅವರ ಬಳಿ ಇದ್ದ ಹಣವನ್ನು ದೋಚಿ ಪಾರಾರಿಯಾಗಿದ್ದಾರೆ. ಈ ರೀತಿಯ ಘಟನೆಗಳು ನಡೆದಿದ್ದರೂ ಪೊಲೀಸ್ ಅಧಿಕಾರಿಗಳು ಮಾತ್ರ ಸೀರಿಯಸ್ ಆಗಿ ತೆಗೆದುಕೊಳ್ಳದ ಕಾರಣ ಇಂದು ಚಂದ್ರಶೇಖರ್ ಅವರ ಮನೆಯ ಮೇಲೆ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ದರೋಡೆ ಮಾಡಿದ್ದಾರೆ. ಇನ್ನಾದ್ರು ಪೊಲೀಸರು ಅಂತಹ ಖದೀಮರನ್ನು ಎಡೆಮುರಿಕಟ್ಟಿ ಸುತ್ತಮುತ್ತಲಿನ ಗ್ರಾಮದ ಜನರ ನೆಮ್ಮದಿ ಕಾಪಾಡಬೇಕಿದೆ.