ಕೌಟುಂಬಿಕ ಆಸ್ತಿ ವಿಚಾರ ಹಾಗೂ ಕೃಷಿ ಇಲಾಖೆಯಲ್ಲಿ ಕೈಗೊಂಡಿದ್ದ ಕಾಮಗಾರಿ ಬಿಲ್ ಮಂಜೂರಾಗದ ಹಿನ್ನೆಲೆ ಚನ್ನಗಿರಿ ತಾಲೂಕು ಸಂತೇಬೆನ್ನೂರು ಗ್ರಾಮದ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರಿನ ಪಿ.ಎಸ್. ಗೌಡರ್ (48) ಮೃತ ಗುತ್ತಿಗೆದಾರ.
ದಾವಣಗೆರೆ (ಜೂ.1): ಕೌಟುಂಬಿಕ ಆಸ್ತಿ ವಿಚಾರ ಹಾಗೂ ಕೃಷಿ ಇಲಾಖೆಯಲ್ಲಿ ಕೈಗೊಂಡಿದ್ದ ಕಾಮಗಾರಿ ಬಿಲ್ ಮಂಜೂರಾಗದ ಹಿನ್ನೆಲೆ ಚನ್ನಗಿರಿ ತಾಲೂಕು ಸಂತೇಬೆನ್ನೂರು ಗ್ರಾಮದ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರಿನ ಪಿ.ಎಸ್. ಗೌಡರ್ (48) ಮೃತ ಗುತ್ತಿಗೆದಾರ.
ಕಳೆದ ವರ್ಷ ಫೆಬ್ರವರಿಯಲ್ಲಿ ಸಂತೇಬೆನ್ನೂರಿನ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಕೆಲ ಕಾಮಗಾರಿ ಮುಗಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳು ಬಿಲ್ ಕ್ಲಿಯರ್ ಮಾಡಿರಲಿಲ್ಲ. ಅಲ್ಲದೇ, ತಮ್ಮ ಸಹೋದರರು ಪೂರ್ವಜರ ಆಸ್ತಿ ಬಿಟ್ಟುಕೊಡಲು ಸಿದ್ಧರಿಲ್ಲದ ಕಾರಣಕ್ಕೆ ಮನನೊಂದಿದ್ದ ಗೌಡರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೆಟ್ಟ ವಾಸನೆ ಬರ್ತಿದೆ, ಎಸ್‌ಐಟಿ ರೂಂನಲ್ಲಿ ಉಸಿರಾಡಲು ಕಷ್ಟ: ಪ್ರಜ್ವಲ್ ರೇವಣ್ಣ
ಕಾಮಗಾರಿ ಬಿಲ್ ಕ್ಲಿಯರ್ ಆಗದಿದ್ದುದು, ಪೂರ್ವಜರ ಆಸ್ತಿ ತಮ್ಮ ಪಾಲಿಗೆ ಬಾರದ್ದರಿಂದ ಪಿ.ಎಸ್.ಗೌಡರ್ ತೀವ್ರ ನೊಂದಿದ್ದರು. ಆರ್ಥಿಕ ಸಮಸ್ಯೆ, ಮಾನಸಿಕ ಒತ್ತಡಗಳಿಂದಾಗಿ ಆತ್ಮಹತ್ಯೆ ನಿರ್ಧಾರಕ್ಕೆ ತೆಳೆದಿದ್ದಾರೆ. ತಮ್ಮ ಸಾವಿಗೆ ಅಣ್ಣ ಜಿ.ಎಸ್.ನಾಗರಾಜ, ಕಿರಿಯ ಸಹೋದರ ಗೌಡರ್ ಶ್ರೀನಿವಾಸ ಹಾಗೂ ಕಾಮಗಾರಿ ಬಿಲ್ ಮಾಡಿಕೊಡದ ಕೆಆರ್‌ಐಡಿಎಲ್ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಈ ಸಂಬಂಧ ಮೃತರ ಪತ್ನಿ ವಸಂತಕುಮಾರಿ ಸಂತೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.