ಜಿಂಕೆ ಮರಿ ಸಾಕಲು ಹೋಗಿ ಪೇಚಿಗೆ ಸಿಲುಕಿದ ಎಸ್ಟೇಟ್ ಮಾಲೀಕ ಕಾಫಿ ಎಸ್ಟೇಟ್ ಒಂದರಲ್ಲಿ ಜಿಂಕೆ ಮರಿ ಸಾಕಿದ ಮಾಲೀಕರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಫೆ.5): ಜಿಂಕೆ ಮರಿ ಸಾಕಲು ಹೋಗಿ ಪೇಚಿಗೆ ಸಿಲುಕಿದ ಎಸ್ಟೇಟ್ ಮಾಲೀಕ ಕಾಫಿ ಎಸ್ಟೇಟ್ ಒಂದರಲ್ಲಿ ಜಿಂಕೆ ಮರಿ ಸಾಕಿದ ಮಾಲೀಕರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕಿನ ಕೆ. ತಲಗೂರು ಗ್ರಾಮದ ಕಾಫಿ ಎಸ್ಟೇಟ್ ಮಾಲೀಕ ತಿಮೋತಿ ಮಿಸ್ಕಿತ್ ಅವರ ತೋಟದ ಮನೆಯಲ್ಲಿ ಸಾಕಿದ್ದ ಚುಕ್ಕಿ ಜಿಂಕೆ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ತಿಮೋತಿ ಮಿಸ್ಕಿತ್ ಅವರ ಮನೆಯಲ್ಲಿ ಜಿಂಕೆಯ ಉಗುರು ಸೇರಿದಂತೆ ಅಲಂಕಾರಿಕ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಅವರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ.
ನಿರೀಕ್ಷಕಿ ಸುನಿತಾ ಅವರ ನೇತೃತ್ವದ ತಂಡ ಖಚಿತ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ್ದಾರೆ. ಜಿಂಕೆ ಮರಿಯನ್ನು ವಶಪಡಿಸಿಕೊಂಡಿದ್ದಾರೆ. ತೋಟದಲ್ಲಿ ಸಿಕ್ಕಿದ್ದ ಜಿಂಕೆ ಮರಿಯನ್ನು ಸಾಕಲು ಹೋಗಿ ಈಗ ತೋಟದ ಮಾಲೀಕರು ಪೇಚಿಗೆ ಸಿಲುಕಿದ್ದಾರೆ.
ಉಗುರು ಮಾರಾಟ ಆರೋಪಿ ಬಂಧನ :
ಕಾಡುಬೆಕ್ಕಿನ ಉಗುರು ಮಾರಾಟ ಮಾಡುತ್ತಿದ್ದ ಅರೋಪಿಯನ್ನ ಅರಣ್ಯ ಸಂಚಾರಿ ದಳ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ನಗರದ ಬೋಳಾರಾಮೇಶ್ವರ ದೇವಾಲಯ ಸಮೀಪ ಅಕ್ರಮವಾಗಿ ಕಾಡು ಬೆಂಕಿನ ಪಂಜಾ ಮತ್ತು ಹಲ್ಲು, ಉಗುರುಗಳನ್ನ ಮಾರಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ಮಾಡಿ ಆರೋಪಿಯನ್ನ ಬಂಧಿಸಿದ್ದಾರೆ. ಈ ಸಂಬಂಧ ಅರಣ್ಯ ಸಂಚಾರಿ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನವ, ವನ್ಯಜೀವಿ ಸಂಘರ್ಷ ತಡೆಗೆ ಕ್ರಮ ಅಗತ್ಯ: ರಿಷಬ್ ಶೆಟ್ಟಿ