ಫ್ರೆಂಡ್ ಹೆಂಡ್ತಿಗಾಗಿ, ಒಂದೇ ತಟ್ಟೇಲ್ ಅನ್ನ ತಿಂದು ಮುಹೂರ್ತ ಇಟ್ಟ ಬಾಲ್ಯದ ಗೆಳೆಯ!

Published : Aug 13, 2025, 07:45 PM IST
Murder Case

ಸಾರಾಂಶ

ಬೆಂಗಳೂರಿನಲ್ಲಿ ಬಾಲ್ಯ ಸ್ನೇಹಿತನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ  ವ್ಯಕ್ತಿಯು ಆಕೆಯ ಗಂಡನನ್ನ ಕೊಲೆ ಮಾಡಿದ್ದು. ಪೊಲೀಸರ ತನಿಖೆಯಲ್ಲಿ ಹೆಂಡತಿ ಮತ್ತು ಆಕೆಯ ಪ್ರಿಯಕರನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು (ಆ.13): ಇಬ್ಬರೂ ಬಾಲ್ಯ ಸ್ನೇಹಿತರು ಬೆಂಗಳೂರು ನಗರದ ಗಲ್ಲಿ ಗಲ್ಲಿಗಳಲ್ಲಿ ಒಟ್ಟಿಗೆ ಆಡಿ ಬೆಳದವರ ಪೈಕಿ ವಿಜಯ್ ಮದುವೆ ಮಾಡಿಕೊಂಡು ಸುಂದರ ಕುಟುಂಬ ಕಟ್ಟಿಕೊಂಡಿದ್ದನು. ಸ್ನೇಹಿತನ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಬಾಲ್ಯ ಸ್ನೇಹಿತ ಧನಂಜಯನ  ಹೆಂಡತಿ ಅತ್ತಿಗೆಗೆ ಸಮಾನ ಎನ್ನುವುದನ್ನು ಮರೆತು ಕಣ್ಣು ಹಾಕಿದ್ದಾನೆ. ಇವರಿಬ್ಬರ ಸಂಬಂಧ ಬೇಗನೇ ಅನೈತಿಕ ಸಂಬಂಧವಾಗಿ ತಿರುವು ಪಡೆದುಕೊಂಡಿದೆ. ಇಬ್ಬರ ಏಕಾಂತರ ವಿಚಾರ ಗಂಡನಿಗೆ ತಿಳಿದ ಬೆನ್ನಲ್ಲಿಯೇ, ಪ್ರಶ್ನೆ ಮಾಡಿದ್ದಾನೆ. ಅವರಿಬ್ಬರ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನೇ ಹೆಂಡತಿ ಮುಗಿಸಿದ್ದಾಳೆ. 

ಈ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯ ಕಡಬಗೆರೆ ಕ್ರಾಸ್‌ನ ಜನಪ್ರಿಯ ಅಪಾರ್ಟ್‌ಮೆಂಟ್‌ನ ಬಳಿ ನಡೆದಿದೆ. ವಿಜಯ್ (28) ಕೊಲೆಯಾದ ಮೃತ ದುರ್ದೈವಿ ಆಗಿದ್ದಾನೆ. ಮಾಗಡಿ ಮೂಲದ ವಿಜಯ್ ಕಡಬಗೆರೆ ಬಳಿ ವಾಸ ಮಾಡುತ್ತಿದ್ದರು. ಅಂದು ಮೂರ್ನಾಲ್ಕು ಜನ ಸೇರಿ ಪಾರ್ಟಿ ಮಾಡಿದ ನಂತರ ಗಲಾಟೆ ಮಾಡಿಕೊಂಡಿದ್ದಾರೆ. ನಂತರ, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ತನಿಖೆ ಬೆನ್ನಟ್ಟಿ ಹೋದವರಿಗೆ ಆತನ ಹೆಂಡತಿಯೇ ಕೊಲೆ ಮಾಡಿರುವ ಅನುಮಾನ ಬಂದಿದೆ. 

ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದ್ದೇನು?
ಧನಂಜಯ, ವಿಜಯ ಇಬ್ಬರೂ ಬಾಲ್ಯ ಸ್ನೇಹಿತರು. ಮಾಗಡಿಯ ನಿವಾಸಿಗಳಾಗಿದ್ದವರು ಸುಂಕದಕಟ್ಟೆಯಲ್ಲಿ ವಾಸವಿದ್ದರು. ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ವಿಜಯ್ 10 ವರ್ಷದ ಹಿಂದೆ ಆಶಾಳನ್ನ ಮದುವೆಯಾಗಿ ವಿಜಯ್ ಕುಮಾರ್ ಕಾಮಾಕ್ಷಿಪಾಳ್ಯ ವಾಸವಾಗಿದ್ದನು. ಈ ವೇಳೆ ವಿಜಯ್‌ ಪತ್ನಿಯ ಜೊತೆ ಆತನ ಬಾಲ್ಯ ಸ್ನೇಹಿತ ಧನಂಜಯ ಲವ್ವಿಡವ್ವಿ ಶುರು ಹಚ್ಚಿಕೊಂಡಿದ್ದನು. ವಿಜಯ ಹೆಂಡತಿ ಆಶಾ ಜೊತೆ ಅನೈತಿಕ ಸಂಬಂಧ ಪೋಟೋ ಕೂಡ ಗಂಡನಿಗೆ ಸಿಕ್ಕಿತ್ತು. ಇಬ್ಬರ ಸಂಬಂಧದ ಬಗ್ಗೆ ವಿಜಯ್ ತನ್ನ ಹೆಂಡತಿ ಆಶಾ ಜೊತೆಗೆ ಗಲಾಟೆ ಕೂಡಾ ಮಾಡಿದ್ದನು. ನಂತರ ಕಾಮಾಕ್ಷಿಪಾಳ್ಯ ಮನೆ ಬಿಟ್ಟು ಕಡಬಗೆರೆಯ ಮಾಚೋಹಳ್ಳಿ ಬಳಿ ಮನೆ ಬಾಡಿಗೆ ಮಾಡಿಕೊಂಡು ವಾಸವಾಗಿದ್ದನು. ಇಷ್ಟಾದರೂ ಹೆಂಡತಿ ಅನೈತಿಕ ಸಂಬಂಧಕ್ಕೆ ಬ್ರೇಕ್ ಬಿದ್ದಿರಲಿಲ್ಲ. 

ಮೊನ್ನೆ ವೇಳೆ ಸಂಜೆ ವರೆಗೂ ಮನೆಯಲ್ಲೇ ಇದ್ದ ವಿಜಯ್ ಸಂಜೆ ವೇಳೆ ಮನೆಯಿಂದ ಹೊರಟಿದ್ದಾನೆ. ರಾತ್ರಿ ವೇಳೆಗೆ ವಿಜಯ್ ಮಾಚೋಹಳ್ಳಿಯ ಡಿಗ್ರೂಪ್ ಲೇಔಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದನು.ಇದಕ್ಕೆ ಸಂಬಂಧಪಟ್ಟಂತೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಈ ಘಟನೆ ಸಂಬಂಧ ಆಶಾಳನ್ನ ವಶಕ್ಕೆ ಪಡೆದಿರುವ ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. 

ಈ ಬಗ್ಗೆ ಮಾಹಿತಿ ನೀಡಿದ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಅವರು, ಮೊನ್ನೆ ರಾತ್ರಿ ಅಕ್ರಮ ಸಂಬಂದ ವಿಚಾರಕ್ಕೆ ವಿಜಯ್ ಎಂಬಾತನ ಕೊಲೆ ಆಗಿತ್ತು. ಪೊಲೀಸರು 2 ತಂಡದೊಂದಿಗೆ 7 ಆರೋಪಿಗಳನ್ನು ಬಂಧಿಸಿದ್ದೇವೆ. ಒಟ್ಟು 48 ಗಂಟೆಯಲ್ಲಿ ಪ್ರಕರಣ ಭೇದಿಸಿದ್ದೇವೆ. ಕೊಲೆ ಮಾಡಿರುವವರು ಎಲ್ಲರೂ ವಿಜಯ್‌ಗೆ ಪರಿಚಯಸ್ಥರೆ ಆಗಿದ್ದಾರೆ. ಇದರಲ್ಲಿ ಮೃತನ ಪತ್ನಿ ಪಾತ್ರವು ಇದೆ. ಮೃತ ವಿಜಯ್‌ನ ಹೆಂಡತಿಯನ್ನು ಬಂಧಿಸಿದ್ದೇವೆ. ಆಕೆಯ ಗಂಡನಿಗೆ ಅಕ್ರಮ ಸಂಬಂಧ ವಿಚಾರವೂ ಗೊತ್ತಿತ್ತು. ಗಂಡ & ಹೆಂಡತಿಗೆ ಒಂದೆರಡು ಬಾರಿ ಜಗಳ ಆಗಿತ್ತು. ಇದೇ ವಿಚಾರವಾಗಿ ಪತ್ನಿ ಮತ್ತು ಗೆಳೆಯ ಒಟ್ಟಿಗೆ ಇರಲು ಸಂಚು ಮಾಡಿ ಈ ರೀತಿ‌ ಮಾಡಿದ್ದಾರೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Chikkaballapur: ಡ್ರಾಪ್ ಕೊಡುವ ನೆಪದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ
₹1000+ ಕೋಟಿ ಸೈಬರ್‌ ವಂಚನೆ : ಸ್ವಾಮೀಜಿ.ಕಾಂ, ನಿಯೋ ಸಿಸ್ಟಮ್‌ ಹೆಸರಲ್ಲಿ ಜಾಲ ಪತ್ತೆ