
ಚಿತ್ರದುರ್ಗ (ಜು.25): ವಿದ್ಯುತ್ ತಂತಿಗೆ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳ ಉಳಿಸಲು ಹೋಗಿ ಬಾಲಕನೋರ್ವ ತನ್ನ ಜೀವವನ್ನೇ ಬಲಿಕೊಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹನುಮಾಪುರದಲ್ಲಿ ನಡೆದಿದೆ.
ರಾಮಚಂದ್ರ (12) ಮೃತ ದುರ್ದೈವಿ ಬಾಲಕ. ಹನುಮಾಪುರ ಗ್ರಾಮದ ಓಬಳಸ್ವಾಮಿ ಎಂಬಾತ ಹಿರಿಮಗನಾಗಿದ್ದ ರಾಮಚಂದ್ರ. ವಿದ್ಯುತ್ ಕಂಬದ ಮೇಲೆ ಕುಳಿತಿದ್ದ ಪಾರಿವಾಳವೊಂದು ಒದ್ದಾಡುತ್ತಿತ್ತು. ಇದನ್ನು ಗಮನಿಸಿದ. ವಿದ್ಯುತ್ ಇರುವುದು ತಿಳಿಯದೇ ಬಾಲಕ ವಿದ್ಯುತ್ ಕಂಬ ಏರಿ, ಪಾರಿವಾಳದ ರಕ್ಷಣೆಗೆ ಮುಂದಾಗಿದ್ದಾನೆ. ಈ ವೇಳೆ ಬಾಲಕನಿಗೆ ವಿದ್ಯುತ್ ಸ್ಪರ್ಶವಾಗಿ ಮೃತಪಟ್ಟಿದ್ದಾನೆ.
ತಂದೆ ತಾಯಿ ಕೂಲಿಕಾರ್ಮಿಕರಾಗಿದ್ದು ಬಡವರಾಗಿದ್ದಾರೆ. ಇಬ್ಬರು ಮಕ್ಕಳಲ್ಲಿ ಹಿರಿಯವನಾಗಿದ್ದ ರಾಮಚಂದ್ರ. ಇದೀಗ ಮಗ ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿರುವುದುದ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ.
ಬೆಳಗಾವಿ: ಮಹಿಳೆಯನ್ನು ಚಟ್ಟದ ಮೇಲೆ ಆಸ್ಪತ್ರೆಗೆ ಕರೆತಂದ ಜನ : ಚಿಕಿತ್ಸೆ ಫಲಿಸದೇ ಸಾವು!
ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು!
ಚಳ್ಳಕೆರೆ: ನಗರದ ಬಳ್ಳಾರಿ ರಸ್ತೆಯ ಎಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿ ಮೋಟಾರ್ ಬೈಕ್‌ಗೆ ಟಾಟಾಬುಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ನವವಿವಾಹಿತ, ಹಣ್ಣಿನ ವ್ಯಾಪಾರಿ ನೇರಲೇಹಳ್ಳಿ ಬೆಳವಿನಮರದ ಹಟ್ಟಿಯ ಸಮೀವುಲ್ಲಾ ಯಾನೆ ಸಮೀರ್(24) ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು! ರೈತನ ವಿರುದ್ಧ ಎಫ್‌ಐಆರ್!
ಮೃತ ಸಮೀರ್ ಕಳೆದ 20 ದಿನಗಳ ಹಿಂದೆ ಇಮಾಮ್‌ಪುರ ಆಫ್ರೀನ್‌ತಾಜ್ ಎಂಬುವವರನ್ನು ವಿವಾಹವಾಗಿದ್ದು ತನ್ನ ಸ್ವಗ್ರಾಮದಿಂದ ಇಮಾಮ್‌ಪುರಕ್ಕೆ ಬೈಕ್‌ನಲ್ಲಿ ಬರುವ ಸಂದರ್ಭದಲ್ಲಿ ಏಕಮುಖ ರಸ್ತೆಯಲ್ಲಿ ಬುಲೆರೋ ಪಿಕಪ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ. ತಲೆ ಹಾಗೂ ಮುಖಕ್ಕೆ ರಕ್ತಗಾಯವಾಗಿ ಸಮೀರ್ ಸ್ಥಳದಲ್ಲೇ ಮೃತಪಟ್ಟಿದ್ದು. ತೀರ್ವವಾಗಿ ಗಾಯಗೊಂಡು ನವ ವಿವಾಹಿತೆ ಆಪ್ರೀನ್ ತಾಜ್‌ರವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಿಎಸ್‌ಐ ಜೆ.ಶಿವರಾಜ್ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಬುಲೆರೋ ಚಾಲಕ ಸುನೀಲ್‌ಕುಮಾರ್‌ನನ್ನು ವಶಕ್ಕೆ ಪಡೆಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ