ಸರ್ಕಾರಿ ದಾಖಲೆಗಳಲ್ಲಿ ಮೃತ, ಬದುಕಿದ್ದೇನೆಂದು ಸಾಬೀತುಪಡಿಸಲು ಈತ ಮಾಡಿದ ಕೆಲಸಕ್ಕೆ ಪೊಲೀಸರೇ ಶಾಕ್

By Chethan Kumar  |  First Published Jul 25, 2024, 12:51 PM IST

ಒಂದು ಸರ್ಕಾರಿ ದಾಖಲೆಯಲೆ ತಪ್ಪಿನಿಂದ ಒಬ್ಬ ಕ್ರಿಮಿನಲ್ ಹುಟ್ಟಿಕೊಂಡಿದ್ದಾನೆ. ಹೌದು, ಸರ್ಕಾರದ ಎಲ್ಲಾ ದಾಖಲೆಯಲ್ಲಿ ಈ ವ್ಯಕ್ತಿ ಜೀವಂತವಿಲ್ಲ ಎಂದು ದಾಖಲಾಗಿದೆ. ಮರಣ ಪ್ರಮಾಣ ಪತ್ರವನ್ನೂ ನೀಡಲಾಗಿದೆ. ತಪ್ಪು ತಿದ್ದಲು ಅಲೆದಾಡಿದರೂ ಪ್ರಯೋಜನವಾಗಿಲ್ಲ. ಸಿಟ್ಟಿಗೆದ್ದ ವ್ಯಕ್ತಿ ಬದುಕಿದ್ದೇನೆಂದು ಸಾಬೀತುಪಡಿಸಲು ಮಾಡಿದ ಕೆಲಸಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ. 
 


ಜೈಪುರ್(ಜು.25) ಬಾರಿ ಮಳೆಯ ದಿನವಾದ ಜುಲೈ 19 ರಂದು  2 ಘಟನೆ ನಡೆಯಿತು. ಒಂದು ಸರ್ಕಾರಿ ದಾಖಲೆಗಳ ಪ್ರಕಾರ ಆತ ಸತ್ತಿದ್ದ. ಮರಣ ಪತ್ರವನ್ನೂ ನೀಡಲಾಗಿತ್ತು. ಆದರೆ ಪೊಲೀಸರ ದಾಖಲೆಯಲ್ಲಿ ಈತನ ಮೇಲೆ ಅಪರಾಧ ಕೃತ್ಯವೊಂದು ದಾಖಲಾಗಿತ್ತು. ಕನ್ಫ್ಯೂಸ್ ಆಗಬೇಡಿ. ಬದುಕಿರುವಾಗಲೇ ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಮಿತೋರಾ ಗ್ರಾಮದ ಬಾಬುರಾಮ್ ಭಿಲ್ ಮೃತಪಟ್ಟಿದ್ದಾನೆ ಎಂದು ಸರ್ಕಾರಿ ದಾಖಲೆಯಲ್ಲಿ ದಾಖಲು ಮಾಡಲಾಗಿದೆ. ಈತನ ಹೆಸರಲ್ಲಿ ಮರಣ ಪ್ರಮಾಣಪತ್ರವೂ ತಯಾರಾಗಿದೆ. ಬದುಕಿರುವಾಗಲೇ  ಬಾಬುರಾಮ್ ಮೃತಪಟ್ಟಿದ್ದಾನೆಂದು ಸರ್ಕಾರಿ ದಾಖಲೆಗಳು, ಸರ್ಕಾರಿ ಅಧಿಕಾರಿಗಳು ದೃಢೀಕರಿಸಿದ್ದಾರೆ. ಈ ತಪ್ಪು ಸರಿಪಡಿಸಲು ಪಂಚಾಯಿತಿ, ತಾಲೂಕ ಕಚೇರಿ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ತಾನು ಬದುಕಿದ್ದೇನೆಂದು ಸಾಬೀತುಪಡಿಸಲು ಶಾಲೆ ಮೇಲೆ ಭೀಕರ ದಾಳಿ ಮಾಡಿದ್ದಾನೆ. ಶಿಕ್ಷಕರು, ಪೋಷಕರಿಗೆ ಚಾಕು ಇರಿದಿದ್ದಾನೆ. ಇತ್ತ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಬುರಾಮ್ ಅರೆಸ್ಟ್ ಮಾಡಿ ಪ್ರಕರಣ ದಾಖಲಿಸಿದ ವಿಚಿತ್ರ ಘಟನೆ ನಡೆದಿದೆ.

ಜುಲೈ 19 ರಂದು ಚುಲಿ ಬೆರಾ ಧಾರನಾ ಶಾಲೆಗೆ ಬಾಬುರಾಮ್ ಭಿಲ್ ದಾಳಿ ಮಾಡಿದ್ದಾನೆ. ಹರಿತವಾದ ಚಾಕು, ಪೆಟ್ರೋಲ್ ಹಿಡಿದು ನೇರವಾಗಿ ಶಾಲೆಗೆ ದಾಳಿ ಮಾಡಿದ್ದಾನೆ. ಎದುರಿಗೆ ಸಿಕ್ಕ ಇಬ್ಬರು ಶಿಕ್ಷಕರಿಗೆ ಚಾಕು ಇರಿದಿದ್ದಾನೆ. ಇತ್ತ ಶಾಲೆಗೆ ಆಗಮಿಸಿದ್ದ ಪೋಷಕರ ಮೇಲೂ ಈತ ದಾಳಿ ಮಾಡಿದ್ದಾನೆ. ಇಷ್ಟಕ್ಕೆ ಸಾಲದು ಎಂಬಂತೆ ಶಾಲಾ ಕೊಠಡಿಗೆ ದಾಳಿ ಮಾಡಿದ ಬಾಬುರಾಮ್ ಭಿಲ್ ಪಾಠ ಮಾಡುತ್ತಿದ್ದ ಶಿಕ್ಷಕರು ಹಾಗೂ ಮಕ್ಕಳನ್ನು ಒತ್ತೆಯಾಳಾಗಿಟ್ಟುಕೊಂಡು ಬೆದರಿಸಿದ್ದಾನೆ. 

Tap to resize

Latest Videos

ಹಾಸನ: ಅರಸೀಕೆರೆಯಲ್ಲಿ ಚಡ್ಡಿ ಗ್ಯಾಂಗ್ ಮತ್ತೆ ಪ್ರತ್ಯಕ್ಷ, ಆತಂಕದಲ್ಲಿ ಜನತೆ..!

ಈತನ ದಾಳಿಗೆ ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆ ಸಾಗಿಸಲಾಗಿದೆ. ಇತ್ತ ಶಾಲಾ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಭಾಬುರಾಮ್ ಭಿಲ್‌ನನ್ನು ಅರೆಸ್ಟ್ ಮಾಡಿದ್ದಾರೆ.ಶಾಲೆಯ ಹೆಡ್‌ಮಾಸ್ಟರ್ ಸುರೇಶ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜೋಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಬುರಾಮ್ ಭಿಲ್ ಬಂಧಿಸಿದ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಬಾಬುರಾಮ್ ಭಿಲ್ ಬಾಯ್ಬಿಟ್ಟ ಕೆಲ ಮಾಹಿತಿಗೆಗೆ ಪೊಲೀಸರೇ ಶಾಕ್ ಆಗಿದ್ದಾರೆ. ತಾನು ಬದುಕಿದ್ದೇನೆಂದು ಸಾಬೀತುಪಡಿಸಲು ಈ ದಾಳಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತನ ಮಾತು ಕೇಳಿ ಪೊಲೀಸರಿಗೆ ಅಚ್ಚರಿಯಾಗಿದೆ. ಮಾತು ಮುಂದುವರಿಸಿದ ಬಾಬುರಾಮ್ ಭಿಲ್, ಸರ್ಕಾರಿ ದಾಖಲೆಗಳಲ್ಲಿ ನಾನು ಮೃತಪಟ್ಟಿದ್ದೇನೆಂದು ದಾಖಲಾಗಿದೆ. ನನ್ನ ಫೋಟೋ, ವಿಳಾಸ, ಹೆಸರು, ವಯಸ್ಸು ಎಲ್ಲಾ ದಾಖಲಿಸಿ ಮರಣ ಪ್ರಮಾಣ ಪತ್ರವೂ ಇದೆ. ಆದರೆ ನಾನು ಸತ್ತಿಲ್ಲ, ಜೀವಂತವಾಗಿದ್ದೇನೆಂದು ಹೇಳಿದರೂ ಸರ್ಕಾರಿ ಅಧಿಕಾರಿಗಳು ದಾಖಲೆ ಸಲ್ಲಿಸಲು ಹೇಳುತ್ತಿದ್ದಾರೆ. 

ಅವನು ರೀಲ್​ ಹೀರೋ ರಿಯಲ್​ ವಿಲನ್ ಪೊಲೀಸರಿಗೆ ಹೆದರಿ ರಾತ್ರೋ ರಾತ್ರಿ ಮದುವೆ 2 ತಿಂಗಳಿಗೆ ಮತ್ತೊಬ್ಬಳ ನಂಟು!

ಇದಕ್ಕಾಗಿ ಅಲೆದಾಡಿದ್ದೇನೆ, ಆದರೆ ಸರಿಪಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ದಾಳಿ ಮಾಡಿದ್ದೇನೆ. ಈ ದಾಳಿಯಿಂದ ನಾನು ಬದುಕಿದ್ದೇನೆಂದು ಸಾಬೀತಾಗಲಿದೆ ಎಂದಿದ್ದಾನೆ. ಆದರೆ ಈತನ ಮಾತಿಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು, ಬದುಕಿದ್ದೇನೆಂದು ಸಾಬೀತು ಮಾಡಲು ಭೀಕರ ದಾಳಿ ಯಾಕೆ? ಎಂದು ಪ್ರಶ್ನಿಸದ್ದಾರೆ.  ಇದಕ್ಕೆ ಉತ್ತರಿಸಿದ ಬಾಬುರಾಮ್ ಭಿಲ್, ನನ್ನ ಹೆಸರಿನಲ್ಲಿ ಕೆಲ ಎಕರೆ ಜಮೀನಿದೆ. ಈ ಜಮೀನು ಕಬಳಿಸಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ನಾನು ಮತಪಟ್ಟಿದ್ದೇನೆಂದು ದಾಖಲೆ ಸೃಷ್ಟಿಸಿ ನನ್ನ ಜಮೀನು, ಆಸ್ತಿ ಕಬಳಿಸಲು ನನಗೆ ಮೃತ ಪಟ್ಟ ನೀಡಲಾಗಿದೆ. ಹೀಗಾಗಿ ನನ್ನ ಜಮೀನು ಉಳಿಸಿಕೊಳ್ಳಬೇಕು, ನಾನು ಬದುಕಿದ್ದೇನೆಂದು ಸಾಬೀತುಪಡಿಸಲು ನನಗೆ ಈ ದಾಳಿ ಬಿಟ್ಟರೆ ಇನ್ಯಾವ ದಾರಿಯೂ ಕಾಣಿಸಿಲ್ಲ ಎಂದು ಪೊಲೀಸರು ಮುಂದೆ ಬಾಬುರಾಮ್ ಭಿಲ್ ಹೇಳಿದ್ದಾನೆ. ಇದೀಗ ಪೊಲೀಸರು ಈತನ ದಾಖಲೆ ಪತ್ರಗಳ ಕುರಿತೂ ತನಿಖೆ ನಡೆಸುತ್ತಿದ್ದಾರೆ.
 

click me!