ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ, ತಲೆಯ ಮೇಲೆ ಟಿಪ್ಪರ್ ಹರಿದು 15 ವರ್ಷದ ವಿದ್ಯಾರ್ಥಿನಿ ಸಾವು

By Gowthami K  |  First Published May 29, 2023, 2:58 PM IST

ಶಿವಮೊಗ್ಗ ತಾಲೂಕಿನ ಹೊಳೆ ಬೆನವಳ್ಳಿ ಗ್ರಾಮದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 15 ವರ್ಷದ ಶಾಲಾ ಬಾಲಕಿ ಮೇಲೆ ಟ್ರಿಪ್ಪರ್ ಹರಿದು ದಾರುಣ ಸಾವು ಕಂಡಿದ್ದಾಳೆ.


ಶಿವಮೊಗ್ಗ (ಮೇ.29): ಶಿವಮೊಗ್ಗ ತಾಲೂಕಿನ ಹೊಳೆ ಬೆನವಳ್ಳಿ ಗ್ರಾಮದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 15 ವರ್ಷದ ಶಾಲಾ ಬಾಲಕಿ ದುರಂತ ಸಾವು ಕಂಡಿದ್ದಾಳೆ.  ಹೊಳೆಹೊನ್ನೂರಿನಿಂದ  ಬೈಕ್ ನಲ್ಲಿ ಬರುತ್ತಿದ್ದ ತಂದೆ ಮಗಳಿಗೆ ಶಿವಮೊಗ್ಗದಿಂದ ಹೊಳೆಹೊನ್ನೂರು ಕಡೆ ಹೋಗುತ್ತಿದ್ದ ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದ ರಭಸಕ್ಕೆ ಬೈಕ್ ನಲ್ಲಿದ್ದ 15 ವರ್ಷದ ಐಶ್ವರ್ಯ  ಕೆಳಗೆ ಬಿದ್ದು  ಬಾಲಕಿಯ ತಲೆಯ ಮೇಲೆ ಟಿಪ್ಪರ್ ಹರಿದಿದೆ. ಪರಿಣಾಮ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟು ಆಕೆಯ ತಂದೆಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯನ್ನು ಬಲಿ ಪಡೆದ ರೆಸಾರ್ಟ್‌ ಈಜುಕೊಳ: ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಬಾಲಕಿ ಸಾವನ್ನಪ್ಪಿರುವ ಘಟನೆ ಮೇ.28ರಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ  ಬಿಕ್ಕೋಡು ಬಳಿ ನಡೆದಿದೆ. ಧನರಾಜ್-ವೀಣಾ ದಂಪತಿ ಪುತ್ರಿ ಖುಷಿ  (12) ಸಾವನ್ನಪ್ಪಿದ ಬಾಲಕಿಯಾಗಿದ್ದಾಳೆ.

Latest Videos

undefined

ಪ್ರವಾಸ ವೇಳೆ ಗ್ರೀನ್ ಪಾಸ್ಟೋ ರೆಸಾರ್ಟ್‌‌ಗೆ ಕುಟುಂಬ ಬಂದಿತ್ತು. ಊಟ ಮಾಡುವ ವೇಳೆ ಪೋಷಕರಿಗೆ ತಿಳಿಯದಂತೆ ಬಾಲಕಿ ಖುಷಿ ಈಜಲು ತೆರಳಿದ್ದಳು. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಮಗಳನ್ನು ಹುಡುಕಿದಾಗ ಈಜುಕೊಳದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ತುಮಕೂರಿನಲ್ಲಿ 70 ವರ್ಷದ ವೃದ್ಧೆಯ ಸಾಮೂಹಿಕ ಅತ್ಯಾಚಾರ, ವೃದ್ಧೆಯ ಅಳಿಯನ

ಬಸ್‌- ಕಾರಿನ ನಡುವೆ ಭೀಕರ ಅಪಘಾತ: ಚಾಲಕ ಸಾವು
ಹೊನ್ನಾವರ: ಬಸ್‌ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಕಾರ್‌ ಚಾಲಕ ಸ್ಥಳದಲ್ಲೇ ಮೃತಪಟ್ಟಘಟನೆ ತಾಲೂಕಿನ ಮಂಕಿ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಖಾಸಗಿ ಬಸ್‌ ಮಂಗಳೂರಿನಿಂದ ಮುಂಬೈಗೆ ತೆರಳುತ್ತಿತ್ತು. ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗುತ್ತಿರುವಾಗ ಮಂಕಿ ಸಮೀಪ ಬಸ್‌ ಕಾರ್‌ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿದ್ದರಿಂದ ಬಸ್‌ ಹೆದ್ದಾರಿ ಪಕ್ಕದಲ್ಲಿಯೇ ಪಲ್ಟಿಯಾಗಿದೆ. ಅಪಘಾತದಲ್ಲಿ ಕಾರು ಚಾಲಕ ಮಂಕಿ ಬೊಳೆಬಸ್ತಿ ನಿವಾಸಿ ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದ ಮೋಹನ್‌ ವಿಷ್ಣು ನಾಯ್ಕ(45) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಆರೋಪಿತ ಬಸ್‌ ಚಾಲಕ ವಿಜಯಪುರದ ಪುರು ರಾಮಸಿಂಗ್‌ ಚವ್ಹಾಣ ಎಂದು ಗುರುತಿಸಲಾಗಿದೆ.

Bengaluru: ಒಂಟಿ ಮಹಿಳೆಯ ಕೈ-ಕಾಲು ಕಟ್ಟಿ ಉಸಿರು ಗಟ್ಟಿಸಿ ಹತ್ಯೆ, ಮನೆ ದರೋಡೆ!

ಬಸ್‌ನಲ್ಲಿ ಸುಮಾರು 36 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಬಸ್‌ನಲ್ಲಿದ್ದ ಮಣಿಪಾಲದ ಪ್ರವೀಣ್‌ ಕುಮಾರ್‌ ಬಿ.ಪಿ. ಸಿಂಗ್‌, ಮಂಗಳೂರು ತಲಪಾಡಿಯ ಅಹ್ಮದ್‌ ಆಸಿಕ್‌ ಮುಸಾ, ಉಡುಪಿ ಜಿಲ್ಲೆ ಕಾರ್ಕಳದ ರವೀಂದ್ರ ಮಹಾಬಲ ಶೆಟ್ಟಿ, ಬಾಂಬೆಯ ನಿಶಾ ಶೆಟ್ಟಿಸೇರಿದಂತೆ ಇನ್ನೂ ಹಲವಾರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೊನ್ನಾವರ ಮತ್ತು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!