
ಭೋಪಾಲ್, (ಮೇ.15): ಹಲವು ಕೊರೊನಾ ರೋಗಿಗಳು ರೆಮ್‍ಡಿಸಿವಿರ್ ಸಿಗದೆ ನರಳಾಡುತ್ತಿದ್ದಾರೆ. ಇದರ ಮಧ್ಯೆ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ದಂಧೆ ಜೋರಾಗಿ ನಡೆಯುತ್ತಿದೆ.
ಅಚ್ಚರಿ ಅಂದ್ರೆ, ನಕಲಿ ರೆಮ್‌ಡೆಸಿವಿರ್ ಪಡೆದುಕೊಂಡಿದ್ದ ಶೇ 90ರಷ್ಟು ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರಂತೆ. ಅಚ್ಚರಿ ಎನಿಸಿದರೂ ಸತ್ಯ. ಯಾಕಂದ್ರೆ ಈ ಮಾಹಿತಿಯನ್ನು ಸ್ವತಃ ಮಧ್ಯಪ್ರದೇಶದ ಪೊಲೀಸರು ಬಹಿರಂಗಪಡಿಸಿದ್ದಾರೆ.
ಹೌದು...ಗುಜರಾತ್ ಮೂಲದ ಗ್ಯಾಂಗ್ ಒಂದು ಪೂರೈಕೆ ಮಾಡಿದ್ದ ನಕಲಿ ರೆಮ್‌ಡೆಸಿವಿರ್ ಇಂಜೆಕ್ಷನ್ ನೀಡಿದ್ದ ಶೇ 90ರಷ್ಟು ರೋಗಿಗಳು ಶ್ವಾಸಕೋಶದ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಮಧ್ಯಪ್ರದೇಶದ ಪೊಲೀಸರು ತಿಳಿಸಿದ್ದಾರೆ.
ರೆಮ್‌ಡೆಸಿವಿರ್ ದಂಧೆ: ರಾಜ್ಯಾದ್ಯಂತ 90 ಮಂದಿ ಸೆರೆ
ಇಂದೋರ್ ಮತ್ತು ಜಬಲ್ಪುರದಲ್ಲಿ ಈ ನಕಲಿ ಔಷಧಿಯ ಜಾಲವನ್ನು ಪೊಲೀಸರು ಭೇದಿಸಿದ್ದರು. ಈ ದಂಧೆಕೋರರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆದೇಶಿಸಿದ್ದರು.
ಆದ್ರೆ, ಆರೋಪಿಗಳ ವಿಚಾರಣೆ ವೇಳೆ ಪೊಲೀಸರಿಗೆ ದೊರೆತ ಅಂಶಗಳು ಅಚ್ಚರಿ ಮೂಡಿಸಿದೆ. ಅಸಲಿ ರೆಮ್‌ಡಿಸಿವಿರ್ ಲಸಿಕೆ ಪಡೆದುಕೊಂಡ ಸೊಂಕಿತರಿಗಿಂತ ನಕಲಿ ರೆಮ್‌ಡಿಸಿವಿರ್ ಪಡೆದುಕೊಂಡ ಸೋಂಕಿತರೇ ಬದುಕಿದ್ದಾರೆ.
ನಾವು ವೈದ್ಯಕೀಯ ಪರಿಣತರಲ್ಲ. ಆದರೆ ಈ ಬಗ್ಗೆ ವೈದ್ಯರು ಗಮನ ಹರಿಸಬೇಕಾಗಿದೆ. ನಕಲಿ ಎಂಜೆಕ್ಷನ್‌ಗಳನ್ನು ಸಾಮಾನ್ಯ ಗ್ಲೂಕೋಸ್-ಉಪ್ಪಿನ ಅಂಶಗಳಿಂದ ತಯಾರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಜರಾತ್ ಮೂಲದ ಗ್ಯಾಂಗ್ ಪೂರೈಸಿರುವ ನಕಲಿ ರೆಮ್‌ಡಿಸಿವಿರ್ ಪಡೆದ 10 ಕೊರೋನಾ ರೋಗಿಗಳು ಇಂದೋರ್‌ನಲ್ಲಿ ಮೃತಪಟ್ಟಿದ್ದಾರೆ. ಇನ್ನು 100ಕ್ಕೂ ಹೆಚ್ಚು ಕೋವಿಡ್ ರೋಗಿಗಳು ಈ ನಕಲಿ ಇಂಜೆಕ್ಷನ್ ಪಡೆದ ಬಳಿಕವೂ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಮೃತರ ದೇಹಗಳನ್ನು ಈಗಾಗಲೇ ಅಂತ್ಯಸಂಸ್ಕಾರ ಮಾಡಿರುವುದರಿಂದ ಈ ನಕಲಿ ಔಷಧಗಳ ಅಡ್ಡ ಪರಿಣಾಮಗಳ ಬಗ್ಗೆ ತನಿಖೆ ನಡೆಸುವುದು ಅಸಾಧ್ಯವಾಗಿದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ನಕಲಿ ರೆಮ್‌ಡಿಸಿವಿರ್ ಮಾಡಿದ ಕೆಲಸದಿಂದ ಸೊಂಕಿತರು ಬದುಕುಳಿದಿರುವುದು ಇಡೀ ವೈದ್ಯ ಲೋಕವೇ ಅಚ್ಚರಿಪಡುವಂತಾಗಿದೆ. ಈ ಪ್ರಕಣ ಇದು ಮುಂದೆ ಯಾವ ರೀತಿ ಪಡೆದುಕೊಳ್ಳುತ್ತಿದೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ