ಉದ್ಯೋಗದಾಸೆ ತೋರಿಸಿ ವಿದೇಶಿ ಯುವತಿಯರ ಬಳಸಿ ಕೃತ್ಯ | ಬೆಂಗಳೂರು ಡೇಟಿಂಗ್ ಕ್ಲಬ್ ಹೆಸರಲ್ಲಿ ವಾಟ್ಸಾಪ್ ಗ್ರೂಪ್ ರಚಿಸಿ ದಂಧೆ
ಬೆಂಗಳೂರು(ಜ.10): ಹೋಟೆಲ್‌ವೊಂದರ ಮೇಲೆ ದಾಳಿ ನಡೆಸಿ ಆನ್ ಲೈನ್ ಮೂಲಕ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ವಿದೇಶಿ ಮಹಿಳೆ ಸೇರಿದಂತೆ ಒಂಭತ್ತು ಮಂದಿಯನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಪ್ರಮೋದ್ ಕುಮಾರ್ ಲೆಂಕ, ಮನೋಜ್ ವಾಸ್, ಅಸ್ಸಾಂನೆ ಸೌಮಿತ್ರ ಚಂದ್ರ, ರಾಜಗೋಪಾಲ ನಗರದ ಜತೇಂದ್ರ ಸಾಹೂ, ಮಹಾಲಕ್ಷ್ಮಿ ಲೇಔಟ್ ನ ಕೆ.ಪ್ರಕಾಶ್ ಅಲಿಯಾಸ್ ಆಕಾಶ್, ಲಗ್ಗೆರೆಯ ವೈಶಾಖ್, ಪರಪ್ಪನ ಅಗ್ರಹಾರದಗೋವಿಂದರಾಜ್, ನಂದಿನಿಲೇಔಟ್‌ನ ಅಕ್ಷಯ್, ಪುಲಕೇತಿ ನಗರದ ಬಿಯೋಯಿನ್ಯಾಜ್ ಬಂಧಿತರಾಗಿದ್ದು, ಈ ದಾಳಿ ವೇಳೆ ಆರೋಪಿಗಳಿಂದ ಐವರು ವಿದೇಶಿ ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚೆಗೆ ದೊಮ್ಮಲೂರು ಸಮೀಪದ 'ಲೇಔಟ್‌ನಲ್ಲಿದ್ದ 'ದಿ ಲೀಲಾಪಾರ್ಕ್ ಹೋಟೆಲ್' ಮೇಲೆ ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಸಾರಥ್ಯದಲ್ಲಿ ಕಾರ್ಯಾಚರಣೆ ನಡೆಸಿ ಆನ್‌ಲೈನ್ ವೇಶ್ಯಾವಾಟಿಕೆ ಜಾಲವನ್ನು
ಪೊಲೀಸರು ಪತ್ತೆ ಹಚ್ಚಿದ್ದಾರೆ. ಆನ್‌ಲೈನ್ ಮೂಲಕಬುಕ್ಕಿಂಗ್: ಟೆಲಿಗ್ರಾಂಹಾಗೂ ವಾಟ್ಸ್‌ಆಪ್‌ನಲ್ಲಿಬೆಂಗಳೂರುಡೇಟಿಂಗ್‌ಕ್ಲಬ್ ಎಂಬ ಗ್ರೂಪ್ ಅನ್ನು ಆರೋಪಿಗಳು ಸೃಷ್ಟಿಸಿದ್ದು, ಇದರ ಮೂಲಕ ಆನ್‌ಲೈನ್ ಮೂಲಕ ವೇಶ್ಯಾವಾಟಿಕೆ ನಡೆಸುತ್ತಿದ್ದರು.
ಮಸಾಜ್ ಪಾರ್ಲರ್ ಮೇಲೆ ಸಿಸಿಬಿ ಪೊಲೀಸರ ದಾಳಿ; 44 ಮಹಿಳೆಯರು, 34 ಪುರುಷರು ಪೊಲೀಸರ ವಶಕ್ಕೆ!
ಬೆಂಗಳೂರು: ವೇಶ್ಯಾವಾಟಿಕೆ ಅಥವಾ ಮಾನವ ಕಳ್ಳಸಾಗಾಣಿಕೆ ಎನ್ನುವುದು ಭಯೋತ್ಪಾದಕ ಚಟುವಟಿಕೆಗಳ ಗಿಂತಲೂ ಹೀನ ಕೃತ್ಯವಾಗಿದ್ದು, ಇದರ ವಿರುದ್ಧ ನಗರ ಪೊಲೀಸರುಸಮರವನ್ನೇ ಸಾರಿದ್ದೇವೆ ಎಂದು ಬಿ.ದಯಾನಂದ್ ಗುಡುಗಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾನವ ಕಳ್ಳಸಾಗಾಣಿಕೆ ಅಥವಾ ವೇಶ್ಯಾವಾಟಿಕೆ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು. ಭಯೋತ್ಪಾದಕ ಕೃತ್ಯವು ಒಂದು ಸಲ ನಡೆಯುವ ಕೃತ್ಯವಾಗಿದ್ದು, ಅದರಲ್ಲಿ ಸಾಕಷ್ಟು ಸಾವು ನೋವು ಸಂಭವಿಸುತ್ತದೆ. ಆದರೆ ವೇಶ್ಯಾವಾಟಿಕೆ ಅಥವಾ ಮಾನವ ಕಳ್ಳ ಸಾಗಾಣಿಕೆ ಜಾಲದಲ್ಲಿ ಸಿಲುಕಿದ ಸಂತ್ರಸ್ತರು ಜೀವನ ಪರ್ಯಂತ ಮಾನಸಿಕ ಹಾಗೂ ದೈಹಿಕ ಆಘಾತ ಅನುಭವಿಸಿ ಜರ್ಜರಿ್ರತರಾಗುತ್ತಾರೆ. ಆತ್ಮಗೌರವ ಧಕ್ಕೆ ಮಾಡುವ ಕೃತ್ಯವಾಗಿದೆ. ಹೀಗಾಗಿ ಈ ಕೃತ್ಯವು ಭಯೋತ್ಪಾದಕ ಹಲಸೂರು ಹಾಗೂ ಬೈಯಪ್ಪನಪ್ಪನಹಳ್ಳಿ ಠಾಣೆಗಳ ಪೊಲೀಸರು ದಾಳಿ ನಡೆಸಿದ್ದರು ಎಂದು ಅಧಿಕಾರಿಗಳು ಚಟುವಟಿಕೆಗಳಿಗಿಂತಲೂ ಹೀನಾಯವಾಗಿದೆ ಎಂದು ಕಟುವಾಗಿ ನುಡಿದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಹಾಗೂ ಪೂರ್ವ ವಿಭಾಗದ ಪೊಲೀಸರು ಕೆಲವೊಂದು ವೇಶ್ಯಾವಾಟಿಕೆ ಜಾಲಗಳನ್ನು ಪತ್ತೆ ಹಚ್ಚಿದ್ದಾರೆ. ಈ ಜಾಲದ ವಿರುದ್ಧ ಕಾರ್ಯಾಚರಣೆ ನಿರಂತವಾಗಿ ನಡೆಯಲಿದೆ ಎಂದು ಹೇಳಿದರು.
ಮಸಾಜ್ ಪಾರ್ಲರ್, ಸ್ಪಾ ಹೆಸರಲ್ಲಿ ವೇಶ್ಯವಾಟಿಕೆ ದಂಧೆ; ಹೊರರಾಜ್ಯಗಳಿಂದ ಉದ್ಯೋಗಕ್ಕೆ ಬರೋ ಹುಡುಗಿಯರೇ ಇವನ ಟಾರ್ಗೆಟ್!
ಸ್ವಾಗಳ ತಾಪಸಣೆ:
ಅಕ್ರಮ ಚಟುವಟಿಕೆ ಆರೋಪ ನಗರ ವ್ಯಾಪ್ತಿಯ ಎಲ್ಲ ಸ್ಪಾಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಕೆಲವು ಸ್ವಾಗಳುಕಾನೂನು ಪ್ರಕಾರವಹಿವಾಟು ನಡೆಸಿದರೆ, ಕೆಲವು ಆಕ್ರಮದಲ್ಲಿ ತೊಡಗಿರುವುದು ಕಂಡು ಬಂದಿದೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಸ್ವಾಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ದಯಾನಂದ್ ತಿಳಿಸಿದರು.
ಈ ಸಂತ್ರಸ್ತೆಯನ್ನು ಅವರ ದೇಶಕ್ಕೆ ಮರಳಿ ಕಳುಹಿಸಲು ಎಫ್‌ಆರ್‌ಆರ್‌ಬಿ ಮೂಲಕ ಕಾನೂನು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹದಿನೈದು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದ ಉಜೈಕಿಸ್ತಾನದೇಶದ ಬಿಯೋಯಿನ್ಯಾಜ್, ಸ್ಥಳೀಯ ವ್ಯಕ್ತಿಯೊಬ್ಬರ ಜತೆ ಪ್ರೇಮ ವಿವಾಹವಾಗಿದ್ದಳು. ಈ ದಂಪತಿಗೆ ಓರ್ವ ಮಗನಿದ್ದಾನೆ. ವಿದೇಶದಿಂದ ಉದ್ಯೋಗ ನೆಪದಲ್ಲಿ ನಗರಕ್ಕೆ ಮಹಿಳೆಯರನ್ನು ಕರೆ ತಂದುವೇಶ್ಯಾವಾಟಿಕೆಗೆ ಆಕೆ ದೂಡುತ್ತಿದ್ದಳು. ಹಲವು ವರ್ಷಗಳಿಂದ ಬೆಂಗಳೂರು ಹಾಗೂ ಮೈಸೂರು ಮಾತ್ರವಲ್ಲದೆ ರಾಜಸ್ಥಾನದ ಜೈಪುರ, ಚೆನ್ನೈ, ದೆಹಲಿ, ಉದಯ್‌ಪುರ ಹಾಗೂ ಮುಂಬೈ ಸೇರಿದಂತೆ ದೇಶ ವಿವಿಧ ನಗರಗಳಲ್ಲಿ ವೇಶ್ಯಾವಾಟಿಕೆ ದಂಧೆಯನ್ನು ನ್ಯಾಜ್ ನಡೆಸುತ್ತಿದ್ದು, ವಿದೇಶಿ ಮಹಿಳೆಯರಮಾನವ ಕಳ್ಳ ಸಾಗಾಣಿಕೆಯನ್ನು ಆಕೆ ಕಿಂಗ್ ಪಿನ್ ಆಗಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.