Bengaluru Crime: ಮನೆ ಮಾಲೀಕರ ಕಟ್ಟಿಹಾಕಿ 88 ಲಕ್ಷ ದೋಚಿದ ಖದೀಮರು

By Kannadaprabha News  |  First Published Feb 24, 2022, 4:38 AM IST

*  ಕಮಲಾನಗರದಲ್ಲಿ ನೇಪಾಳಿ ಮೂಲದ ಕೆಲಸದಾಳುಗಳಿಂದ ದರೋಡೆ
*  2 ವರ್ಷದಿಂದ ಕೆಲಸಕ್ಕಿಂದ ನೇಪಾಳಿ ದಂಪತಿ
*  ಸೆಕ್ಯೂರಿಟಿ ಗಾರ್ಡ್‌ಗೆ ಮನೆ ಕೀ ಕೊಟ್ಟು ದೇವಸ್ಥಾನಕ್ಕೆ ತೆರಳಿದ್ದ ಮನೆ ಮಾಲೀಕರು
 


ಬೆಂಗಳೂರು(ಫೆ.24): ಖಾಸಗಿ ಲೆಕ್ಕ ಪರಿಶೋಧಕರ ಪತ್ನಿಯೊಬ್ಬರ ಕೈ-ಕಾಲು ಕಟ್ಟಿಹಾಕಿ ಅವರ ಮನೆಗೆಲಸದಾಳುಗಳು ಸುಮಾರು 88 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ(Theft) ಪರಾರಿಯಾಗಿರುವ ಘಟನೆ ಕಮಲಾ ನಗರದಲ್ಲಿ ನಡೆದಿದೆ. ಕಮಲಾನಗರದ ನಿವಾಸಿ ವಾಗೇಶ್ವರಿ ಗುರುಕುಮಾರ್‌ ಚೌಕಿಮಠ್‌ ಅವರು ಹಲ್ಲೆಗೆ ತುತ್ತಾಗಿದ್ದು, ಮನೆಯಲ್ಲಿ ಮಂಗಳವಾರ ವಾಗೇಶ್ವರಿ ಒಬ್ಬರೇ ಇದ್ದಾಗ ಈ ಕೃತ್ಯ ನಡೆದಿದೆ. ಈ ಕೃತ್ಯ ಎಸಗಿ ಪರಾರಿಯಾಗಿರುವ ನೇಪಾಳ(Nepal) ಮೂಲದ ಅನು, ಆಕೆಯ ಪತಿ ರಾಜೇಂದ್ರ ಹಾಗೂ ಮೂವರು ಸಹಚರರ ಪತ್ತೆಗೆ ಬಸವೇಶ್ವರ ನಗರ ಪೊಲೀಸರು(Police) ಬಲೆ ಬೀಸಿದ್ದಾರೆ.

ಎರಡು ತಿಂಗಳಿಂದ ವಾಗೇಶ್ವರಿ ಅವರ ಮನೆಯಲ್ಲಿ ಅನು ದಂಪತಿ ಕೆಲಸಕ್ಕಿದ್ದು, ಮಾಲೀಕರ ಮನೆಯ ಔಟ್‌ ಹೌಸ್‌ನಲ್ಲಿ ನೆಲೆಸಿದ್ದರು. ಬೆಳಗ್ಗೆ ವಾಗೇಶ್ವರಿ ದಂಪತಿ ದೇವಾಲಯಕ್ಕೆ(Temple) ತೆರಳಿದರೆ, ಅವರ ಪುತ್ರ ಕಾಲೇಜಿಗೆ ಹೋಗಿದ್ದ. ಆ ವೇಳೆ ಮನೆಯ ಕೀಯನ್ನು ಸೆಕ್ಯೂರಿಟಿ ಗಾರ್ಡ್‌ಗೆ(Security Guard) ಕೊಟ್ಟು ವಾಗೇಶ್ವರಿ ತೆರಳಿದ್ದರು. ಆಗ ಕೀ ಪಡೆದ ಅನು, ತನ್ನ ಪತಿ ಮತ್ತು ಸಹಚರರ ಜತೆ ಸೇರಿ ಮನೆಯೊಳಗೆ ಹೋಗಿ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣವನ್ನು ಗಂಟು ಕಟ್ಟುತ್ತಿದ್ದರು. ಅದೇ ಹೊತ್ತಿಗೆ ವಾಗೇಶ್ವರಿ ಮನೆಗೆ ಮರಳಿದ್ದಾರೆ. ದೇವಾಲಯದಿಂದ ಪತಿಯನ್ನು ಕಚೇರಿಗೆ ಬಿಟ್ಟು ಅವರೊಬ್ಬರೇ ಮನೆಗೆ ಬಂದಿದ್ದರು. ಅನಿರೀಕ್ಷಿತವಾಗಿ ಮನೆಯೊಡತಿ ಆಗಮನದಿಂದ ಆತಂಕಗೊಂಡ ಅನು, ತಕ್ಷಣವೇ ತನ್ನ ಸಹಚರರಿಗೆ ಅವಿತುಕೊಳ್ಳುವಂತೆ ಹೇಳಿದ್ದಾಳೆ. ಏಳೆಂಟು ಬಾರಿ ಬೆಲ್‌ ಮಾಡಿದರೂ ಬಾಗಿಲು ತೆರೆಯದ ಅನು, ಬಳಿಕ ಬಾಗಿಲು ತೆರೆದಿದ್ದಾಳೆ.

Tap to resize

Latest Videos

Bengaluru Crime: ಬೈಕ್‌ ಕದ್ದು ಬರೀ 5000ಗೆ ಮಾರಾಟ ಮಾಡ್ತಿದ್ದ ಖತರ್ನಾಕ್‌ ಕಳ್ಳನ ಸೆರೆ

ಮನೆಗೆಲಸದವಳ ದುಷ್ಕೃತ್ಯ ಅರಿಯದೆ ಒಳ ಬಂದ ವಾಗೇಶ್ವರಿ ಅವರನ್ನು ಕೂಡಲೇ ಆರೋಪಿಗಳು ಬಾಯಿ ಮುಚ್ಚಿ ಆಕೆಯನ್ನು ಕೊಠಡಿಗೆ ಎಳೆದೊಯ್ದಿದ್ದಾರೆ. ನಂತರ ಆಕೆಯ ಬಾಯಿಗೆ ಬಟ್ಟೆತುರುಕಿ ಕೈ-ಕಾಲು ಕಟ್ಟಿಹಾಕಿದ ಆರೋಪಿಗಳು(Accused), ಲಾಕರ್‌ ಕೀ ತೆಗೆದು ಚಿನ್ನಾಭರಣ(Gold) ದೋಚಿ ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪರಾರಿಯಾಗುವ ಮುನ್ನ ವಾಗೇಶ್ವರಿ ಅವರ ಕಾಲಿಗೆ ಕಟ್ಟಿದ್ದ ಕ್ರೇಪ್‌ ಬ್ಯಾಂಡೇಜ್‌ನ್ನು ಬಿಚ್ಚಿ ಪರಾರಿಯಾಗಿದ್ದರು. ಇದಾದ ಕೆಲ ಹೊತ್ತಿನ ಬಳಿಕ ನೆಲಮಹಡಿಗೆ ರಕ್ಷಣೆ ಕೋರಿ ಬಂದ ಮನೆಯೊಡತಿಯನ್ನು ಕಂಡು ಕಾರು ಚಾಲಕ ಯುವರಾಜ್‌ ಆತಂಕಗೊಂಡಿದ್ದಾನೆ. ಕೂಡಲೇ ವಾಗೇಶ್ವರಿ ಅವರ ಕೈ ಮತ್ತು ಬಾಯಿಗೆ ಸುತ್ತಿದ್ದ ಪ್ಲಾಸ್ಟರ್‌ ಅನ್ನು ಆತ ತೆಗೆದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಬಸವೇಶ್ವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kodagu Crime: ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡ್ತಿರುವ ದರೋಡೆಕೋರರು..!

ಮದುವೆಗೆ ಬಂದು ಒಡವೆ ಎಗರಿಸಿದ ಮಹಿಳೆ

ಚಿಕ್ಕಬಳ್ಳಾಪುರ: ಮದುವೆ(Marriage) ಆಗಮಿಸಿದ್ದ ವೇಳೆ ಮಹಿಳೆಯೊಬ್ಬಳು(Women) ಲಕ್ಷಾಂತರ ರು, ಮೌಲ್ಯದ ಚಿನ್ನಾಭರಣಗಳನ್ನು(Gold) ಕದ್ದು ಎಸ್ಕೇಪ್‌ ಆಗಿರುವ ಘಟನೆ ನಡೆದಿದ್ದು ಈ ಸಂಬಂದ ಚಿನ್ನಾಭರಣ ಕಳೆದುಕೊಂಡ ಕುಟುಂಬಸ್ಥರು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರಿಗೆ(Police) ದೂರು ನೀಡಿದ್ದಾರೆ.

ಚಿಂತಾಮಣಿ ನಗರದ ಅಂಜನಿ ಬಡಾವಣೆ ನಿವಾಸಿ ಗೀತಾ.ಎಂ.ವಿ. ಕೋಂ ರಘುರಾಮರೆಡ್ಡಿ.ಬಿ.ವಿ, (48) ಫೆ.18 ರಂದು ಚಿಂತಾಮಣಿ ತಾಲ್ಲೂಕು, ಕೈವಾರ ಗ್ರಾಮದ ಶ್ರೀ ಯೋಗಿ ನಾರಾಯಣ ಸಭಾಂಗಣದಲ್ಲಿ ಬೆಳಗಿನ ಸಮಯದ 3 ರಿಂದ 4 ರ ಸಮಯದಲ್ಲಿ ಮದುವೆ ಶಾಸ್ತ್ರವನ್ನು ಮಾಡುತ್ತಿದ್ದಾಗ, ಇದೇ ಚಿಂತಾಮಣಿ ನಗರದ ಡೆಕ್ಕನ್‌ ಆಸ್ಪತ್ರೆಯ ಬಳಿ ವಾಸವಾಗಿರುವ ಶಿವಣ್ಣ ಪತ್ನಿ 35 ವರ್ಷದ ಜಾನಕಮ್ಮ ಈ ಸಮಯದಲ್ಲಿ ಇವರು ಮಾತ್ರ ರೂಂನಲ್ಲಿದ್ದು, ನನಗೆ ಸೇರಿದ ಒಂದು ನಕ್ಲೇಸ್‌ ಹಾಗೂ ಒಂದು ಜೊತೆ ಓಲೆ ಇದರ ಒಟ್ಟು 45 ಗ್ರಾಂ ಇರುತ್ತದೆ. ಜಾನಕಮ್ಮ ರವರೇ ಕಳ್ಳತನ(Theft) ಮಾಡಿಕೊಂಡು ಹೋಗಿರುಬಹುದೆಂದು ಗುಮಾನಿ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
 

click me!