Bizarre Crime : ತುಮಕೂರಲ್ಲಿ ಕೋಳಿ ಕಳ್ಳರ ಕೈಚಳಕ... ಬಾಕ್ಸ್ ಮಂಗಮಾಯ!

Published : Feb 23, 2022, 06:22 PM IST
Bizarre Crime : ತುಮಕೂರಲ್ಲಿ ಕೋಳಿ ಕಳ್ಳರ ಕೈಚಳಕ... ಬಾಕ್ಸ್ ಮಂಗಮಾಯ!

ಸಾರಾಂಶ

* ತುಮಕೂರಿನಲ್ಲಿ ಕೋಳಿ ಕಳ್ಳರ ಹಾವಳಿ * ಅಂಗಡಿ ಮುಂದೆ ತಂದಿಟ್ಟಿದ್ದ ಕೋಳಿ ಬಾಕ್ಸ್ ಎತ್ತಿಕೊಂಡು ಪರಾರಿ * ವ್ಯಾಪಾರಿಗಳಲ್ಲಿ ದಿಗಿಲು ಹುಟ್ಟಿಸಿದ ಪ್ರಕರಣ

ತುಮಕೂರು( ಫೆ. 23)  ಕಳ್ಳರು (Robbery) ಎಲ್ಲೆಲ್ಲಿಯೂ ಕೈಚಳಕ ತೋರಿಸಲು ಆರಂಭಿದಿದ್ದಾರೆ.  ಒಟ್ಟು 640 ಕೆಜಿ ಕೋಳಿ (Chicken) ಹಾಗೂ ಕೋಳಿ ತುಂಬುವ ಬಾಕ್ಸ್ ಗಳನ್ನು ಕದ್ದು ಪರಾರಿಯಾಗಿದ್ದಾರೆ.

ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ವಿವಿಧ ಕೋಳಿ ಅಂಗಡಿಗಳಲ್ಲಿ ಕಳ್ಳತನ ಮಾಡುವ ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತುಮಕೂರು ತಾಲೂಕಿನ ಹೆಬ್ಬೂರು, ರಂಗನಾಥ ಪುರ ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ್ದಾರೆ.

ಅಶೋಕ ಲೇಲ್ಯಾಂಡ್ ಗೂಡ್ಸ್  ವಾಹನದಲ್ಲಿ ಬಂದು ಕೋಳಿ ಬಾಕ್ಸ್ ಗಳನ್ನ  ಕದ್ದು ಎಸ್ಕೇಪ್ ಆಗಿದ್ದಾರೆ. ಕೋಳಿ ಅಂಗಡಿ ಮಾಲೀಕರು ಬಂದು ಕೋಳಿ ಸರಬರಾಜು ಮಾಡುವವರನ್ನ ಪೋನ್ ಮಾಡಿ‌ ಕೇಳಿದಾಗ ಘಟನೆ ಬೆಳಕಿಗೆ ಬಂದಿದೆ. ನಾಗೇಂದ್ರ ಎಂಬವರಿಂದ ಹೆಬ್ಬೂರು ಪೊಲೀಸ್ ಠಾಣೆಗೆ ದೂರು  ನೀಡಿದ್ದು ಕೋಳಿ ಕಳ್ಳರ  ಪತ್ತೆಗೆ ಬಲೆ ಬೀಸಲಾಗಿದೆ.

Davanagere: 6 ಫೈಟರ್ ಕೋಳಿ ಕದ್ದೊಯ್ದ ಕಳ್ಳರು: ಕೈಚಳಕ ಸಿಸಿಟಿವಿಯಲ್ಲಿ ಸೆರೆ

ದಾವಣಗೆರೆ ಕೋಳಿ ಕಳ್ಳತನ: ಮನೆ ಮುಂದಿನ ಕೋಳಿ ಗೂಡಿನಲ್ಲಿಟ್ಟಿದ್ದ ಕೋಳಿ ಕಾಳಗಕ್ಕೆ ಬಳಸುತ್ತಿದ್ದ ಕೋಳಿಗಳನ್ನು (Fighter Cocks) ರಾತ್ರೋರಾತ್ರಿ 2-3 ಜನರ ಕಳ್ಳರು ಕಳವು ಮಾಡಲಾಗಿತ್ತು.   ದಾವಣೆಗೆರೆ ನಗರದ ಹೊರ ವಲಯದ ಹೊಸ ಕುಂದುವಾಡ ಗ್ರಾಮದಲ್ಲಿ ಕೈಚಳಕ ತೋರಿದ್ದರು.

ನಗರದ ಹೊರ ವಲಯದ ಹೊಸ ಕುಂದುವಾಡ ಗ್ರಾಮದಲ್ಲಿ ಬಸವರಾಜ ಎಂಬುವರು ತಮ್ಮ ಮನೆ ಬಾಗಿಲಿಗೆ ಹೊಂದಿಕೊಂಡಂತೆ ಇರುವ ಕೋಳಿಗಳ ಗೂಡಿನಲ್ಲಿ ತಾವು ಸಾಕಿದ್ದ ಕಾಳಗದ ಕೋಳಿಗಳನ್ನು ಬಿಟ್ಟಿದ್ದರು.  ರಾತ್ರಿ ಮನೆ ಬಾಗಿಲು ಹಾಕಿರುವುದನ್ನು ಗಮನಿಸಿದ ಕೋಳಿ ಕಳ್ಳರು ಸದ್ದಿಲ್ಲದಂತೆ ಬಂದು, ಹೊಂಚು ಹಾಕಿ ಸುಮಾರು 10-12 ಸಾವಿರ ರು. ಮೌಲ್ಯದ 6 ಕೋಳಿಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. 

ಬಸವರಾಜ ಮನೆಯ ಬಾಗಿಲ ಚಿಲಕ ಹಾಕಿದ ಕೋಳಿ ಕಳ್ಳರು ಗೂಡಿನಲ್ಲಿದ್ದ ಕಾಳಗದ 6 ಕೋಳಿಗಳನ್ನು ಒಂದೊಂದಾಗಿ ಅವುಗಳ ಕಾಲು, ಬಾಯಿಯನ್ನು ಕೈನಿಂದ ಬಿಗಿಯಾಗಿ ಅದುಮಿ ಹಿಡಿದು, ಅಲ್ಲಿಂದ ಕದ್ದೊಯ್ಯುವ ದೃಶ್ಯವು ಬಸವರಾಜ ಮನೆಯ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಗೋಡೆ ಕೊರೆದು ಚಿನ್ನ ದೋಚಿದರು:  ಚಿನ್ನದಂಗಡಿ ಗೋಡೆ ಕೊರೆದು ಎರಡು ಕೆಜಿ ಚಿನ್ನಾಭರಣವನ್ನು ಸಲೀಸಾಗಿ ದರೋಡೆ ಮಾಡಿಕೊಂಡು ಹೋಗಲಾಗಿದೆ ಬೆಂಗಳೂರಿನ ಹೆಣ್ಣೂರು ಬಳಿಯ ಸಾರಾಯಿಪಾಳ್ಯದ ಜ್ಯುವೆಲರಿ ದರೋಡೆ ಮಾಡಲಾಗಿದೆ.

ಶ್ರೀ ರಾಘವೇಂದ್ರ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಕಳ್ಳತನ‌‌ವಾಗಿದೆ.  ಮಂಗಳವಾರ ಮಧ್ಯರಾತ್ರಿ  ಕನ್ನ ಹಾಕಿದ್ದಾರೆ ಕಿರಾತಕರು ಚಿನ್ನದಂಗಡಿಯ ಸಿಸಿ ಟಿವಿ ಡಿಸಿಆರ್ ರನ್ನೂ  ಹೊತ್ತುಕೊಂಡು ಹೋಗಿದ್ದಾರೆ.

ಈ ಹಿಂದೆ ಪುಲಿಕೇಶಿನಗರ ಮುತ್ತೂಟ್ ಫೈನಾನ್ಸ್  ನಲ್ಲೂ ಕೆಜಿ ಕೆಜಿ ಚಿನ್ನಾಭರಣ ಹೊತ್ತೊಯ್ದಿದ್ದ ಪ್ರಕರಣ ದಾಖಲಾಗಿತ್ತು.  ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ