ಸಿವಿಲ್ ಎಂಜಿನಿಯರ್ ರಾಮಚಂದ್ರ ಬಾಬಣಿ ಪೆಡ್ನೇಕರ (58) ಅವರ ಮೃತ ದೇಹವು ಪಟ್ಟಣದ ಬಂಡಿಕಟ್ಟೆಯ ಎದುಗಿರುವ ಪಿಎಲ್‌ಡಿ ಬ್ಯಾಂಕಿನ ಆವರಣದಲ್ಲಿರುವ ಬಾವಿಯಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ.
ಅಂಕೋಲಾ (ಜು.29) : ಸಿವಿಲ್ ಎಂಜಿನಿಯರ್ ರಾಮಚಂದ್ರ ಬಾಬಣಿ ಪೆಡ್ನೇಕರ (58) ಅವರ ಮೃತ ದೇಹವು ಪಟ್ಟಣದ ಬಂಡಿಕಟ್ಟೆಯ ಎದುಗಿರುವ ಪಿಎಲ್‌ಡಿ ಬ್ಯಾಂಕಿನ ಆವರಣದಲ್ಲಿರುವ ಬಾವಿಯಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ.
ಇದು ಆತ್ಮಹತ್ಯೆಯೋ ಅಥವಾ ಇನ್ನಿತರ ಕಾರಣಗಳಿಂದಾಗಿ ಸಾವು ಸಂಭವಿಸಿದೆಯೋ ಎಂದು ತನಿಖೆಯಿಂದ ತಿಳಿದು ಬರಬೇಕಿದೆ. ಪಿಎಲ್‌ಡಿ ಬ್ಯಾಂಕಿನ ಸಿಬ್ಬಂದಿ ಬಾವಿಗೆ ನೀರು ತರಲು ಬಂದಾಗ ಬಾವಿಯಲ್ಲಿ ಮೃತದೇಹ ಇರುವುದನ್ನು ನೋಡಿದ್ದಾರೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು ಸ್ಥಳಕ್ಕಾಗಮಿಸಿದ ಅವರು ವಿವಿಧ ಆಯಾಮಗಳಿಂದ ತನಿಖೆ ಕೈಗೊಂಡಿದ್ದಾರೆ. ರರರರ
undefined
ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ- ವಿದ್ಯುತ್ ಸ್ಪರ್ಶದಿಂದ ಇಬ್ಬರು ಸಾವು, ನಾಲ್ವರಿಗೆ ಗಾಯ
ಪಟ್ಟಣದ ಶಾಂತಾದುರ್ಗಾ ದೇವಸ್ಥಾನದ ಬಳಿ ವಾಸವಾಗಿರುವ ರಾಮಚಂದ್ರ ಪೆಡ್ನೇಕರ ಪಟ್ಟಣ ಪಂಚಾಯಿತಿ ಎಂಜಿನಿಯರ್ ಆಗಿಯೂ ಕೆಲ ಕಾಲ ಕಾರ್ಯ ನಿರ್ವಹಿಸಿದ್ದರು. ಬಡವರಿಂದ ಕಡಿಮೆ ಹಣ ಪಡೆದು ಮನೆಗಳ ನೀಲನಕ್ಷೆ ಹಾಕಿಕೊಡುತ್ತಿದ್ದರು. ಮೃತರು ಪತ್ನಿ, ಪುತ್ರಿ ಅಗಲಿದ್ದಾರೆ. ಪಿಎಸೈ ಗೀತಾ ಶಿರಶಿಕರ, ಸಿಬ್ಬಂದಿಗಳಾದ ರಮೇಶ ತುಂಗಳ, ಅರುಣ ಮೇತ್ರಿ ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಅಡ್ಡಗಟ್ಟಿದರೋಡೆ, ಮೊಬೈಲ್, ಮಾಂಗಲ್ಯ ಸರ ಕಿತ್ತು ಪರಾರಿ
ನಂಜನಗೂಡು: ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿಮಚ್ಚು ಲಾಂಗುಗಳನ್ನು ತೋರಿಸಿ ಮೊಬೈಲ… ಮತ್ತು ಮಾಂಗಲ್ಯ ಸರವನ್ನು ಕಿತ್ತುಕೊಂಡು ದರೋಡೆ ಮಾಡಿರುವ ಘಟನೆ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಹೊಸಹಳ್ಳಿ ಗೇಟ್ ಬಳಿ ಶುಕ್ರವಾರ ಸಂಜೆ ಜರುಗಿದೆ. ಮೈಸೂರಿನ ಅಶೋಕರಸ್ತೆಯ ನಿವಾಸಿಗಳಾದ ಜಯಶ್ರೀ (45) ಮತ್ತು ಮಕ್ಕಳಾದ ವಿಶಾಲ… ಮತ್ತು ವಿಜಯ… ದರೋಡೆ ಒಳಗಾದವರು.
ಮೈಸೂರಿನ ಅಶೋಕ ರಸ್ತೆಯ ನಿವಾಸಿಗಳಾದ ಜಯಶ್ರೀ ಅವರು ತಮ್ಮ ಮಕ್ಕಳಾದ ವಿಶಾಲ… ಮತ್ತು ವಿಜಯ… ರವರ ಜೊತೆ ತಮ್ಮ ಕಾರ್‌ನಲ್ಲಿ ಕೇರಳದ ಕ್ಯಾಲಿಕೆಟ್‌ಗೆ ತಮ್ಮ ಮಗಳ ಮನೆಗೆ ತೆರಳಿದ್ದರು. ಶುಕ್ರವಾರ ರಾತ್ರಿ 7ರ ಸಮಯದಲ್ಲಿ ಮೈಸೂರಿಗೆ ವಾಪಸ್ ಆಗುವ ವೇಳೆ ತಾಲೂಕಿನ ಹೊಸಹಳ್ಳಿ ಗೇಟ್ ಬಳಿ ಇನೋವಾ ಕಾರಿನಲ್ಲಿ 4 ಜನ ಮತ್ತು ಐ20 ಕಾರಿನಲ್ಲಿ 4 ಜನ ಒಟ್ಟು 8 ಮಂದಿ ದರೋಡೆಕೋರರು ಕಾರನ್ನು ಅಡ್ಡಗಟ್ಟಿಇನ್ನೋವಾ ಕಾರಿನಲ್ಲಿದ್ದ 4 ಜನ ದರೋಡೆಕೋರರು ಕಾರಿನ ಕೆಳಗಿಳಿದು ಜಯಶ್ರೀ ಅವರಿದ್ದ ಕಾರಿನ ಮೇಲೆ ಲಾಂಗ್‌ಗಳನ್ನು ಕಾರಿನ ಗ್ಲಾಸ್‌ನ ಮೇಲೆ ಬಿಸಿ 3 ಕಡೆ ಪುಡಿ ಮಾಡಿದ್ದಾರೆ. ನಂತರ ಕಾರಿನಲ್ಲಿದ್ದವರ 2 ಮೊಬೈಲ… ಗಳನ್ನು ಕಸಿದುಕೊಂಡು ನಂತರ ಜಯಶ್ರೀ ಅವರ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾರೆ. ಇಷ್ಟರಲ್ಲಾಗಲೆ ಜನರೆಲ್ಲರೂ ಜಮಾವಣೆ ಯಾಗುತ್ತಿದ್ದಂತೆ ದರೋಡೆಕೋರರು ತಮ್ಮ ಇನೋವಾ ಕಾರ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಪಿಕ್ನಿಕ್ ಮುಗಿಸಿ ಮರಳುತ್ತಿದ್ದ ಕಾಲೇಜು ಬಸ್ ಅಪಘಾತ, ವಿದ್ಯುತ್ ಕಂಬಕ್ಕೆ ಡಿಕ್ಕಾಯಾಗಿ ಪಲ್ಟಿ!
ವಿಷಯ ತಿಳಿದು ನಂಜನಗೂಡು ಗ್ರಾಮಾಂತರ ಪೊಲಿಸ… ಠಾಣೆಯ ಇನ್‌ಸ್ಪೆಕ್ಟರ್ ಶಿವನಂದ ಶೆಟ್ಟಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.