
ರಾಯಪುರ(ಡಿ.15): ದೇಶದಲ್ಲಿ ಇತ್ತೀಚೆಗೆ ಭೀಕರ ಘಟನೆಗಳೇ ವರದಿಯಾಗುತ್ತಿದೆ. ಅತ್ಯಾಚಾರ, ಆ್ಯಸಿಡ್ ದಾಳಿ, ದೆಹಲಿ ಶ್ರದ್ಧಾ ಹತ್ಯೆ ಸೇರಿದಂತೆ ಸಾಲು ಸಾಲು ಘಟನೆಗಳು ಬೆಚ್ಚಿ ಬೀಳಿಸುತ್ತಿದೆ. ಇದೀಗ 8 ವರ್ಷಗ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಘಟನೆ ಚತ್ತೀಸಘಡದ ರಾಜಧಾನಿ ರಾಯಪುರದಲ್ಲಿ ನಡೆದಿದೆ. ಬಾಲಕಿಯ ರೇಪ್ ಮಾಡಿ ಹತ್ಯೆಗೈದ ಆರೋಪಿ ವಯಸ್ಸು ಕೇವಲ 14. ಈ ಪ್ರಕರಣದಲ್ಲಿ ಹತ್ಯೆಯಾದ ಬಾಲಕಿ ಹಾಗೂ ಆರೋಪಿ ಅಪ್ರಾಪ್ತರು. ಡಿಸೆಂಬರ್ 7 ರಂದು ಬಾಲಕಿ ನಾಪತ್ತೆಯಾಗಿರುವುದಾಗಿ ಪೋಷಕರು ದೂರು ದಾಖಲಿಸಿದ್ದಾರೆ. 5 ದಿನಗಳ ಬಳಿಕ ಬಾಲಕಿ ಶವ ಪತ್ತೆಯಾಗಿದೆ. ತನಿಖೆ ನಡೆಸಿದ ಪೊಲೀಸರು ಆರೋಪಿ ಬಾಲಕನನ್ನು ಅರೆಸ್ಟ್ ಮಾಡಿದ್ದಾರೆ.
ಬಾಲಕಿ ನಿವಾಸವಿದ್ದ ಅದೇ ಬಿಲ್ಡಿಂಗ್‌ನಲ್ಲಿ ಆರೋಪಿ ಬಾಲಕ ಕೂಡ ಇದ್ದ. ಡಿಸೆಂಬರ್ 7 ರಂದು ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ 14ರ ಬಾಲಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಹತ್ಯೆ ಮಾಡಿದ್ದಾನೆ. ಇತ್ತ ಪೊಷಕರು ಬಾಲಕಿಯನ್ನು ಹುಡುಕಾಡುತ್ತಿದ್ದ ಪೋಷಕರ ಆತಂಕ ಹೆಚ್ಚಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. 5 ದಿನಗಳ ಬಳಿಕ ಬಿಲ್ಡಿಂಗ್ ಪಕ್ಕದಲ್ಲಿನ ಕಾಲೋನಿಯಲ್ಲಿ ಬಾಲಕಿ ಶವ ಪತ್ತೆಯಾಗಿದೆ.
ವಿಮೆ ಮೊತ್ತ ಪಡೆಯಲು ಹತ್ಯೆ ನಾಟಕ ಪ್ಲಾನ್, 4 ಕೋಟಿ ರೂ ಆಸೆಗೆ ಬಿದ್ದ ಗೆಳೆಯರು ಕೊಂದೇ ಬಿಟ್ಟರು!
ಬಾಲಕಿಯ ಹತ್ಯೆಗೈದು ಅಲ್ಲೇ ಬಿಸಾಡಿದ್ದ 14ರ ಬಾಲಕ ಮನೆಗೆ ವಾಪಸ್ಸಾಗಿದ್ದ. ತಾನು ಈ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಗದಂತೆ ತಪ್ಪಿಸಿಕೊಳ್ಳಲು ಪ್ಲಾನ್ ರೂಪಿಸಿದ್ದ. ಇದಕ್ಕಾಗಿ ಊರು ಬಿಡಲು ಸಜ್ಜಾಗಿದ್ದ. ಇದಕ್ಕಾಗಿ ಹಣ ಹೊಂದಿಸಲು ಪ್ಲಾನ್ ರೆಡಿ ಮಾಡಿದ್ದ. ಇತ್ತ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಆದರೆ ಬಾಲಕಿ ಸುಳಿವು ಪತ್ತೆಯಾಗಿರಲಿಲ್ಲ.
5ನೇ ದಿನ ಬಾಲಕಿ ಶವ ಬಿಲ್ಡಿಂಗ್ ಪಕ್ಕದಲ್ಲಿ ಕಾಲೋನಿಯಲ್ಲಿ ಶವ ಪತ್ತೆಯಾಗಿದೆ. ತಪಾಸಣೆ ನಡೆಸಿದ ಬಳಿಕ ಶವವನ್ನ ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ. ಈ ವೇಳೆ ಅತ್ಯಾಚಾರ ಮಾಡಿ ಹತ್ಯಗೈದಿರುವುದು ಸಾಬೀತಾಗಿದೆ. ಇತ್ತ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಚತ್ತೀಸಘಡದಲ್ಲಿ ಮಹಿಳೆಯ ಸುರಕ್ಷತೆಯನ್ನು ಸರ್ಕಾರ ನಿರ್ಲಕ್ಷ್ಯಿಸಿದೆ. ಮೇಲಿಂದ ಮೇಲೆ ಇಂತಹ ಘಟನೆಗಳು ಮರುಕಳಿಸುತ್ತಿದೆ ಎಂದು ಆರೋಪಿಸಿದೆ.
ಶಿಕ್ಷಕನಿಂದ ಲೈಂಗಿಕ ಕಿರುಕುಳ, ಬೇಸತ್ತ ವಿದ್ಯಾರ್ಥಿನಿಯರಿಂದ ಧರ್ಮದೇಟು
ಬಾಲಕಿ ಮೇಲೆ ಅತ್ಯಾಚಾರ; 10 ವರ್ಷ ಜೈಲು
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 30 ಸಾವಿರ ರು. ದಂಡ ವಿಧಿಸಿ ವಿಶೇಷ ಪೋಕ್ಸೋ ನ್ಯಾಯಾಲಯ ಆದೇಶ ನೀಡಿದೆ. ದಾವಣಗೆರೆಯ ನ್ಯಾಮತಿ ಪಟ್ಟಣದ ಶಿವಾನಂದ ಬಡಾವಣೆಯ ರಂಗನಾಥ(23 ವರ್ಷ) ಶಿಕ್ಷೆಗೆ ಗುರಿಯಾದ ಅಪರಾಧಿ. ಅದೇ ಪಟ್ಟಣದ ವಾಸಿಯೊಬ್ಬರ ಪುತ್ರಿ ಶಾಲೆಗೆ ಹೋಗುತ್ತಿದ್ದ ವೇಳೆ ಅಪಹರಿಸಿ, ಪುಸಲಾಯಿಸಿದ್ದ ಆರೋಪಿ ರಂಗನಾಥ ಆಕೆಯ ಮದುವೆಯಾಗಿ ನಂಬಿಸಿ, ಕುಂದುವಾಡ, ಯರಬನಹಳ್ಳಿ, ಹಿರೇಕೆರೂರು, ಅರಳಿಕಟ್ಟೆಇತರೆ ಗ್ರಾಮಗಳ ತಮ್ಮ ಸಂಬಂಧಿಗಳ ಮನೆಗೆ ಕರೆದೊಯ್ದು, ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದು ತನಿಖೆಯಿಂದ ದೃಢಪಟ್ಟಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ