ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ಪ್ರಭಾವ, 7 ವರ್ಷದ ಬಾಲಕನಿಂದ 5 ವರ್ಷದ ಬಾಲಕಿಯ ರೇಪ್‌

By Santosh Naik  |  First Published Sep 20, 2023, 6:24 PM IST


7 ವರ್ಷದ ಬಾಲಕ ತನ್ನೊಂದಿಗೆ ಆಡುತ್ತಿದ್ದ 5 ವರ್ಷದ ಬಾಲಕಿಯನ್ನು ರೇಪ್‌ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಇದರ ಬೆನ್ನಲ್ಲಿಯೇ 7 ವರ್ಷದ ಹುಡುಗನ್ನು ಬಂದಿಸಲಾಗಿದೆ.
 


ನವದೆಹಲಿ (ಸೆ.20): ಉತ್ತರ ಪ್ರದೇಶದ ಕಾನ್ಪುರದಲ್ಲಿ ಪೋಷಕರು ಆತಂಕಗೊಳ್ಳುವಂಥ ವರದಿಯೊಂದು ಬಿತ್ತರವಾಗಿದೆ. ಇಲ್ಲಿ ಐದು ವರ್ಷದ ಮುಗ್ಧ ಬಾಲಕಿಯ ಮೇಲೆ ಏಳು ವರ್ಷದ ಬಾಲಕ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮಗುವನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಮತ್ತು ಆರೋಪಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಬಾಲಕಿಯನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂದು ಜಿಲ್ಲಾ ಮಹಿಳಾ ಆಸ್ಪತ್ರೆ ಪ್ರಭಾರಿ ಡಾ.ವಂದನಾ ಸಿಂಗ್ ತಿಳಿಸಿದ್ದಾರೆ. ವೈದ್ಯಕೀಯ ಮತ್ತು ಪ್ರಥಮ ಚಿಕಿತ್ಸೆ ನಂತರ ಕುಟುಂಬ ಸಮೇತ ಆಕೆಯನ್ನು ಮನೆಗೆ ಕಳುಹಿಸಲಾಗಿದೆ. ಕಾನ್ಪುರ ದೇಹತ್‌ನ ಅಕ್ಬರ್‌ಪುರದ ಹಳ್ಳಿಯಲ್ಲಿ ವಾಸಿಸುತ್ತಿದ್ದ ಐದು ವರ್ಷದ  ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಳು. ಇನ್ನು ಏಳು ವರ್ಷದ ಬಾಲಕ ಆಕೆಯ ನೆರೆಮನೆಯವನೇ ಆಗಿದ್ದಾನೆ. ಇದೇ ವೇಳೆ ಆರೋಪಿಯು ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಅಮಾಯಕ ಹುಡುಗಿಯ ಮೇಲೆ ಅತ್ಯಾಚಾರ ನಡೆದಿದೆ. ಬಳಿಕ ಬಾಲಕಿಯ ಖಾಸಗಿ ಭಾಗದಿಂದ ರಕ್ತ ಸೋರಲು ಆರಂಭವಾಗಿತ್ತು. ತಕ್ಷಣವೇ ಆಕೆ ಮನೆಗೆ ಓಡಿ ಬಂದಿದ್ದಾಳೆ.

ಮನೆಗೆ ಬಂದು ತಾಯಿ ಎದುರು ಅಳುತ್ತಿದ್ದ ಆಕೆ, ಪಕ್ಕದ ಮನೆಯ ಹುಡುಗ ಈ ಕೆಲಸ ಮಾಡಿದ್ದಾನೆ ಎಂದು ಹೇಳಿದ್ದಳು. ಇದಾದ ಬಳಿಕ ಊರಿನಲ್ಲಿ ದೊಡ್ಡ ವಾಗ್ವಾದವೇ ಉಂಟಾಗಿದೆ.  ಸಂತ್ರಸ್ತೆಯ ಮನೆಯವರು ಬಾಲಕಿಯನ್ನು ಠಾಣೆಗೆ ಕರೆದೊಯ್ದು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಇದಾದ ನಂತರ ಪೊಲೀಸರು ಆರೋಪಿ ಮಗು ಮತ್ತು ಸಂತ್ರಸ್ತೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಸಂತ್ರಸ್ತೆ ಮತ್ತು ಆರೋಪಿಗಳು ಒಂದೇ ಸಮುದಾಯಕ್ಕೆ ಸೇರಿದವರು. ಇದರಿಂದಾಗಿ ಆರಂಭದಲ್ಲಿ ಇಬ್ಬರ ನಡುವೆ ರಾಜಿ ಮಾಡಿಕೊಳ್ಳಲು ಪಂಚಾಯಿತಿ ಮುಂದಾಗಿತ್ತು. ಬಾಲಕಿಯ ಪೋಷಕರು ಆರೋಪಿಯ ಮನೆಗೆ ತೆರಳಿ ನಡೆದ ಘಟನೆಯನ್ನೆಲ್ಲ ವಿವರಿಸಿ ಗದರಿಸಿದ್ದರು. ಇಲ್ಲಿ ಬಾಲಕನ ತಾಯಿ ಕೋಪಗೊಂಡು ಸಂತ್ರಸ್ತೆಯ ತಾಯಿಯೊಂದಿಗೆ ಜಗಳವಾಡಿದರು. ಇದು ವಿಷಯವನ್ನು ಮತ್ತಷ್ಟು ಉಲ್ಬಣಗೊಳಿಸಿತು ಎನ್ನಲಾಗಿದೆ.

ಆರೋಪಿಯಾಗಿರುವ ಮಗು ಕೂಡ ಇನ್ನೂ ಚಿಕ್ಕದು. ಹಾಗಾಗಿ ಯಾವುದೇ ಕ್ರಮವೂ ಆತನ ಮೇಲೆ ಮಾಡಲು ಸಾಧ್ಯವಿಲ್ಲ ಎಂದು ಸಂತ್ರಸ್ಥೆಯ ತಾಯಿ ಹೇಳಿದ್ದರು. ಆದರೆ, ಬಾಲಕನ ತಾಯಿ ಮಾತ್ರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮಗುವಿಗೆ ತಿಳಿ ಹೇಳಿ ಬೈಯುವ ಬದಲು ನನ್ನೊಂದಿಗೆ ಜಗಳವಾಡಿದರು. ವಿಷಯ ಕೈಗೂಡದಿದ್ದಾಗ ವಿಷಯ ಅಕ್ಬರ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಸತೀಶ್ ಸಿಂಗ್‌ಗೆ ತಲುಪಿತು. ಸಂತ್ರಸ್ತ ಬಾಲಕಿಯ ತಂದೆಯ ದೂರಿನ ಮೇರೆಗೆ ಠಾಣಾ ಪ್ರಭಾರಿ ತಕ್ಷಣವೇ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಕೇಸ್‌ ದಾಖಲಿಸಿದ್ದಾರೆ.

ಆರೋಪಿಯಾರುವ 7 ವರ್ಷದ ಬಾಲಕ ಪ್ರತಿ ದಿನವೂ ತನಗಿಂತ ಎರಡು ವರ್ಷ ದೊಡ್ಡವರಾದ ಹುಡುಗರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿತ್ತು. ಅದಲ್ಲದೆ, ದಿನದ ಹೆಚ್ಚಿನ ಸಮಯವನ್ನು ಮೊಬೈಲ್‌ನಲ್ಲಿಯೇ ಕಳೆಯುತ್ತಿತ್ತು. ಅದಲ್ಲದೆ, ಬಾಲಕ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ಕೂಡ ವೀಕ್ಷಣೆ ಮಾಡುತ್ತಿದ್ದ. ಇದು ಈ ಘಟನೆಗೆ ಕಾರಣವಾಗಿತುವ ಸಾಧ್ಯತೆ ಇದೆ. ಇನ್ನು ಬಾಲಕಿಯ ಸ್ಥಿತಿ ಕೂಡ ಗಂಭೀರವಾಗಿದೆ. 

ಅತ್ಯಾಚಾರ ಘಟನೆಯ ವರದಿಯನ್ನು ದಾಖಲಿಸುವುದರಿಂದ ಹಿಡಿದು ವೈದ್ಯಕೀಯ ಚಿಕಿತ್ಸೆಯವರೆಗೆ, ಭಾಗಿಯಾದ ಪೊಲೀಸರು ಮತ್ತು ವೈದ್ಯರು ಎಲ್ಲರೂ ಆಘಾತಕ್ಕೆ ಒಳಗಾಗಿದ್ದರು. ಇಷ್ಟು ಚಿಕ್ಕ ವಯಸ್ಸಿನ ಅತ್ಯಾಚಾರ ಆರೋಪಿ ಮತ್ತು ಸಂತ್ರಸ್ತೆಯ ಪ್ರಕರಣ ಇದೇ ಮೊದಲ ಬಾರಿಗೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೆಡಿಕಲ್ ಮಾಡುವ ವೈದ್ಯರೂ ಕೂಡ ತಮ್ಮ ಕೆಲಸದಲ್ಲಿ ಮೊದಲ ಸಲ ಇಂತಹ ಮೆಡಿಕಲ್ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದರು. ಈ ಘಟನೆ ಗ್ರಾಮದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಸಂತ್ರಸ್ತ ಬಾಲಕಿ ಮತ್ತು ಆರೋಪಿ ಬಾಲಕನನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಸತೀಶ್ ಸಿಂಗ್ ತಿಳಿಸಿದ್ದಾರೆ. ಏಳು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಯಾವುದೇ ಅಪರಾಧ ಮಾಡಿದರೆ, ಅದು ಅಪರಾಧದ ವರ್ಗಕ್ಕೆ ಬರುವುದಿಲ್ಲ. ಆದರೂ ಕಾನೂನು ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Tap to resize

Latest Videos

 

ಗಂಡು ಮಗು ಆಗ್ಲಿ ಅಂತ ಹೆಣ್ಣು ಮಕ್ಕಳ ಮೇಲೆ ಸತತ 10 ವರ್ಷ ರೇಪ್‌ ಮಾಡಿದ ನೀಚ ತಂದೆ!

ಇದಕ್ಕೆ ಕಾರಣವೇನು: ಬಾಲಕನ ಮನೆಯ ವಾತಾವರಣವೇ ಇಂಥ ಪರಿಸ್ಥಿತಿಗೆ ಕಾರಣವಾಗಿರುವ ಸಾಧ್ಯತೆ. ಮೊಬೈಲ್‌ನಲ್ಲಿ ಪ್ರತಿ ದಿನ ಅಶ್ಲೀಲ ಚಿತ್ರ ವೀಕ್ಷಣೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದರೂ, ಈ ಬಗ್ಗೆ ಮನೆಯಲ್ಲಿ ಎಚ್ಚರಿಕೆ ಅಥವಾ ಬೈದು ಬುದ್ಧಿ ಹೇಳಿರುವುದು ನಡೆದಿರುವ ಸಾಧ್ಯತೆ ಕಡಿಮೆ. ಇದರಿಂದಾಗಿ ಈ ಅಶ್ಲೀಲತೆ ಆತನ ತಲೆಗೆ ಚಿಕ್ಕ ವಯಸ್ಸಿನಲ್ಲಿಯೇ ಹೊಕ್ಕಿದೆ. ಅದಕ್ಕಾಗಿ ಪುಟ್ಟ ಬಾಲಕಿಯ ಜೊತೆ ಈ ಕೃತ್ಯ ಮಾಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

45 ಮಹಿಳೆಯರ ರೇಪ್; ಶಿಕ್ಷಕಿ ಜತೆ ರಾಸಲೀಲೆ: ಕಾಮುಕ ಪ್ರಿನ್ಸಿಪಾಲ್ ವಿಡಿಯೋ ವೈರಲ್‌

click me!