
ರಿಪ್ಪನ್‌ಪೇಟೆ(ಜೂ.01): ಆಟವಾಡುತ್ತಿದ್ದ ಬಾಲಕಿಯೊಬ್ಬಳಿಗೆ ಆಕಸ್ಮಿಕವಾಗಿ ಹಾವೊಂದು ಕಚ್ಚಿ ಸಾವನ್ನಪ್ಪಿರುವ ಘಟನೆ ಹರತಾಳು ಗ್ರಾಮದಲ್ಲಿ ನಡೆದಿದೆ. ಸುಮಾರು 7 ವರ್ಷದ ಬಾಲಕಿ ವಿನುತಾ ಮನೆಯಂಗಳದಲ್ಲಿ ಆಟವಾಡುವಾಗ ಈ ಘಟನೆ ಸಂಭವಿಸಿದೆ. ಬಾಲಕಿಯ ಪೋಷಕರು ಕೂಡಲೇ ಸಾಗರ ತಾ ಸರಸೀಪುರಕ್ಕೆ ಚಿಕಿತ್ಸೆ ಕೊಡಿಸಲು ಕರೆದೊಯಿದ್ದಿದ್ದು ಅಲ್ಲಿ ಬಾಲಕಿ ಸಾವನ್ನಪ್ಪಿರುವುದು ದೃಢಪಡಿಸಿದ್ದಾರೆ.
ಆನಂದಪುರಂ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿ ನಂತರ ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಗೆ ಬರುವುದರಿಂದ ಪುನಾ ಕರೆತಂದು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ತರಲಾಯಿತು. ಬಾಲಕಿ ವಿನುತಾ ಶವದ ಮರಣೋತ್ತರ ಪರೀಕ್ಷೆಗೆ ಪೊಲೀಸ್ ಅಧಿಕಾರಿಗಳು ವಿಳಂಬ ಮಾಡಿದರೆಂಬ ಕಾರಣಕ್ಕೆ ಶಾಸಕ ಹರತಾಳು ಹಾಲಪ್ಪ ಠಾಣೆಗೆ ಭೇಟಿ ನೀಡಿ ಠಾಣಾಧಿಕಾರಿ ಮೇಲೆ ಗರಂ ಅದರು.
ಖ್ಯಾತ ಗಾಯಕ, ಸಂಗೀತ ನಿರ್ದೇಶಕ ವಾಜಿದ್ ಖಾನ್ ಕೊರೋನಾಗೆ ಬಲಿ!
ಅಲ್ಲದೇ ಶಾಸಕರು ಜಿಲ್ಲಾ ರಕ್ಷಣಾಧಿಕಾರಿ ಮತ್ತು ದಾವಣಗೆರೆ ಪೂರ್ವವಲಯ ಪೊಲೀಸ್ ವರಿಷ್ಠಾಧಿಕಾರಿ ಜತೆ ದೂರವಾಣಿಯಲ್ಲಿ ಮಾತನಾಡಿ ತಕ್ಷಣ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ನಾಪತ್ತೆಯಾಗಿದ್ದ ಖಾಸಗಿ ಬಸ್ ಚಾಲಕನ ಮೃತ ದೇಹ ಪತ್ತೆ
ಶಿವಮೊಗ್ಗ: ತೀರ್ಥಹಳ್ಳಿ ತಾ. ಶೇಡ್ಗಾರ್ ಗ್ರಾಮದ ಬೊಮ್ಮನಹಳ್ಳಿ ಗದ್ದೆಯ ಹಳ್ಳದಲ್ಲಿ ಕೊಳೆತ ಸ್ಥಿತಿಯಲ್ಲೊಂದು ಶವ ಪತ್ತೆಯಾಗಿದೆ. ಈ ಮೃತ ವ್ಯಕ್ತಿಯನ್ನು ಸಹಕಾರ ಸಾರಿಗೆ ಬಸ್ ಚಾಲಕ ವಿಜಯ್(50) ಎಂದು ಗುರುತಿಸಲಾಗಿದೆ.
ಕಳೆದ ವಾರ ತಮ್ಮ ಪತಿ ವಿಜಯ್ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಸವಿತಾ ಮಾಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಇವರಿಗಾಗಿ ಕುಟುಂಬ ಸದಸ್ಯರು ಹುಡುಕಾಟ ನಡೆಸಿದ್ದರು. ಇವರ ನಿಗೂಢ ಸಾವು ಸಾರ್ವಜನಿಕರಲ್ಲಿ ಸಂಶಯ ಮತ್ತು ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ