ಕುರಿ ಹೊಲಕ್ಕೆ ಬಂತೆಂದು ಜಾತಿ ನಿಂದನೆ ಮಾಡಿ ಕಾಲಿಗೆ ಬೀಳಿಸಿಕೊಂಡ್ರು!

By Suvarna NewsFirst Published Oct 13, 2020, 8:59 PM IST
Highlights

ಉತ್ತರ ಪ್ರದೇಶದಲ್ಲಿ ದಲಿತನಿಗೆ ಮೂತ್ರ ಕುಡಿಸಿದ ಪ್ರಕರಣ ವರದಿಯಾಗಿತ್ತು/ ತಮಿಳುನಾಡಿನಲ್ಲೊಂದು ಅಮಾನವೀಯ ಘಟನೆ/ ಕುರಿ ಹೊಲಕ್ಕೆ ಬಂದಿದ್ದರಿಂದ ಜಾತಿ ನಿಂದನೆ ಮಾಡಿ ಕಾಲಿಗೆ ಬೀಳಿಸಿದ್ರು/ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಚೆನ್ನೈ(ಅ. 13) ಥೇವಾರ್ ಸಮುದಾಯಕ್ಕೆ ಸೇರಿದ ಏಳು ಜನರನ್ನು ತಮಿಳುನಾಡು ತೂತುಕುಡಿ ಪೊಲೀಸರು ಬಂಧಿಸಿದ್ದಾರೆ. ತಮ್ಮ ಪಾದದ ಮೇಲೆ ಬಿದ್ದು ದಲಿತನೊಬ್ಬನಿಂದ ಕ್ಷಮೆ ಕೇಳಿಸಿಕೊಂಡಿದ್ದ ಆರೋಪ ಇವರ ಮೇಲೆ ಇದೆ. ಅಕ್ಟೋಬ್  8  ರಂದು ನಡೆದ ಘಟನೆ  ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ನಂತರ ಬೆಳಕಿಗೆ ಬಂದಿದೆ.

ಎಂಪಿ ಮತ್ತು ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮುಖ್ಯಸ್ಥ ಥೋಲ್ ತಿರುಮಾವಾಲವನ್ ಈ ಅಮಾನವೀಯ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.  ವಿಡಿಯೋ ವೈರಲ್ ಆದ ನಂತರ, ತೂತುಕುಡಿ ಜಿಲ್ಲೆಯ ಕಾಯತಾರ್ ತಾಲ್ಲೂಕಿನ ಹಳ್ಳಿಯ  60 ವರ್ಷದ ಪೌಲ್ರಾಜ್ ದೌರ್ಜನ್ಯಕ್ಕೆ ಗುರಿಯಾದ ವ್ಯಕ್ತಿ ಎಂದು ಪತ್ತೆ ಮಾಡಲಾಗಿದೆ. 

ಪೊಲೀಸ್ ದೂರು ನೀಡಿದ್ದಕ್ಕೆ ಹಲ್ಲೆ ಮಾಡಿ ಮೂತ್ರ ಕುಡಿಸಲು ಮುಂದಾದ್ರು!

ಜೀವನೋಪಾಯಕ್ಕೆ ಪೌಲ್ರಾಜ್  100 ಆಡು ಮತ್ತು ಕುರಿಗಳನ್ನು ಸಾಕಿಕೊಂಡಿದ್ದಾರೆ.  ಘಟನೆ ನಡೆದ ದಿನ ಸಾಕಿಕೊಂಡಿದ್ದ ಕುರಿಯೊಂದು ಸಂಗ್ಲಿ ಥೆವಾರ್ ಎಂಬುವರ ಹೊಲಕ್ಕೆ ನುಗ್ಗಿತ್ತು.  ಇದನ್ನು ಕಂಡು ಕೋಪಗೊಂಡ ಸಂಗ್ಲಿ ಜಾತಿ ನಿಂದನೆ ಮಾಡಿದ್ದು ಅಲ್ಲದೆ ತನ್ನ ಸಂಬಂಧಿಕರನ್ನು ಸ್ಥಳಕ್ಕೆ ಕರೆತಂದಿದ್ದಾನೆ. ಮಹೇಂದ್ರಮ್, ಮಹಾರಾಜನ್, ಉದಯಮಲ್ ಮತ್ತು ವೀರಯ್ಯ ಎಂಬುವರನ್ನು ಸ್ಥಳಕ್ಕೆ ಕರೆತಂದಿದ್ದು ಕಾಲಿಗೆ ಬಿದ್ದು ಕ್ಷಮೆ ಕೇಳಲು ಹೇಳಿದ್ದಾನೆ. ಈ ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿ ಹರಿದಾಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

 

: வட இந்திய மாநிலங்களில் மட்டுமல்ல; தமிழ்நாட்டிலும் தொடரும் அநாகரிகம். கயத்தாறு அருகே ஓலைக்குளம் கிராமம் ஆதிக்குடியினத்தைச் சார்ந்தவரின் ஆடுகள் தங்களின் கொல்லைப் பகுதியில் எப்படி நுழையலாமென இந்தக் கேவலத்தை அரங்கேற்றியுள்ளனராம். pic.twitter.com/6BBvT2PkfF

— Thol. Thirumavalavan (@thirumaofficial)
click me!