Crime ಪತ್ನಿ ಅಜ್ಜಿ ಮೇಲೆ ಅತ್ಯಾಚಾರ,85ರ ವೃದ್ಧೆಯನ್ನೂ ಬಿಡದ ಕಾಮುಕ!

Published : Jun 04, 2022, 11:28 PM IST
Crime ಪತ್ನಿ ಅಜ್ಜಿ ಮೇಲೆ ಅತ್ಯಾಚಾರ,85ರ ವೃದ್ಧೆಯನ್ನೂ ಬಿಡದ ಕಾಮುಕ!

ಸಾರಾಂಶ

85ರ ಹರೆಯದ ವೃದ್ಧೆ ಮೇಲೆ ಅತ್ಯಾಚಾರ  ಪತ್ನಿಯ ಅಜ್ಜಿ ಮೇಲೆ ಎರಗಿದ ಕಾಮುಕ 60 ವರ್ಷದ ಕಾಮುಕನ ಬಂಧಿಸಿದ ಪೊಲೀಸ್

ಕೇರಳ(ಜೂ.04):  ಕಾಮುಕರಿಗೆ ಸಂಬಂಧ, ವಯಸ್ಸು ಯಾವುದೂ ಗಣನಗೆ ಬರುವುದಿಲ್ಲ. ಇದಕ್ಕೆ ಹಲವು ಘಟನೆಗಳೆ ಸಾಕ್ಷಿ. ಇದೀಗ ಕೇರಳದಲ್ಲಿ ಅತ್ಯಂತ ನೀಚ ಘಟನೆ ನಡೆದಿದೆ. ಪತ್ನಿಯ ಅಜ್ಜಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. 85ರ ಹರೆಯದ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಶಿವದಾಸನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

60 ವರ್ಷದ ಶಿವದಾಸನ್ ಪತ್ನಿಯ ಅಜ್ಜಿಯ ಮೇಲೆ ಅತ್ಯಾಚಾರ ಎಸಗಿ ಏನೂ ನಡೆದೇ ಇಲ್ಲವೆಂಬತೆ ತನ್ನ ಪಾಡಿಗೆ ಇದ್ದ. ಆದರೆ ಅತ್ಯಾಚಾರದಿಂದ ಸುಧಾರಿಸಿಕೊಂಡ ಅಜ್ಜಿ, ಹತ್ತಿರದ ಅಂಗನವಾಡಿಗೆ ತೆರಳಿ ಅಂಗನವಾಡಿ ಕಾರ್ಯಕರ್ತೆ ಬಳಿ ನಡೆದ ಘಟನೆಯನ್ನು ವಿವರಿಸಿ ಕಣ್ಣೀರಿಟ್ಟಿದ್ದಾರೆ.

ಮರ್ಸಿಡಿಸ್‌ ಕಾರಲ್ಲಿ ಅಪ್ರಾಪ್ತೆಯ ಗ್ಯಾಂಗ್‌ ರೇಪ್‌: ಶಾಸಕನ ಮಗನಿಗಾಗಿ ಹುಡುಕಾಟ

ಮಾಹಿತಿ ಪಡೆದ ಅಂಗನವಾಡಿ ಕಾರ್ಯಕರ್ತೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅತ್ತ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನೇರವಾಗಿ ಶಿವದಾಸನ್ ಮನೆಗೆ ಆಗಮಿಸಿದ್ದಾರೆ. ಬಳಿಕ ಶಿವದಾಸನ್ ಬಂಧಿಸಿದ್ದಾರೆ. ಪೊಲೀಸರು ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಆರೋಪಿ ಶಿವದಾನಸನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ಘಟನೆಯಿಂದ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.

ಈ ಘಟನೆ ನಡೆದಿರುವುದು ಮೇ ಎರಡನೇ ವಾರದಲ್ಲಿ.  ದೈಹಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋದ ಅಜ್ಜಿ ಮೇ ಅಂತಿಮ ವಾರದಲ್ಲಿ ಅಂಗನವಾಡಿಗೆ ತೆರಳಿ ಘಟನೆ ವಿವರಿಸಿದ್ದಾರೆ. ಇದರಿಂದ ಈ ಹೇಯ ಕೃತ್ಯ ಬೆಳಕಿಗೆ ಬಂದಿದೆ.

ಹಸುವನ್ನೂ ಬಿಡದ ಕಾಮುಕ: 22 ವರ್ಷದ ಯುವಕನ ಬಂಧನ

ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿಗಳ ಸೆರೆ
ಅಪ್ರಾಪ್ತಯ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಮೂರು ಪ್ರತ್ಯೇಕ ಪ್ರಕರಣಗಳ ಆರೋಪಿಗಳನ್ನು ಚನ್ನಪಟ್ಟಣ  ಗ್ರಾಮಾಂತರ ಠಾಣೆ ಪೊಲೀ​ಸರು ಬಂಧಿ​ಸಿ​ದ್ದಾರೆ. ಅಕ್ಕೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಎರಡು, ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಒಂದು ಅಪ್ರಾಪ್ತೆಯ ಅಪಹರಣ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡ ಗ್ರಾಮಾಂತರ ವೃತ್ತನಿರೀಕ್ಷಕ ಶಿವಕುಮಾರ್‌ ಮತ್ತು ಸಿಬ್ಬಂದಿ ಆರೋಪಿಗಳನ್ನು ಪತ್ತೆಹಚ್ಚಿ, ಸಂತ್ರಸ್ತ ಬಾಲಕಿಯರನ್ನು ರಕ್ಷಿಸಿದ್ದಾರೆ.

ಕೋಲಾರ ಮೂಲದ ವ್ಯಕ್ತಿ ಬಂಧನ: ಅಕ್ಕೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಅಪ್ರಾಪ್ತೆ ಅಪಹರಣ ಪ್ರಕರಣಕ್ಕೆ ಸಂಬಂ​ಧ ಕೋಲಾರದ ಎಂ.ಕೊತ್ತೂರು ಗ್ರಾಮದ ಅಭಿಷೇಕ್‌ ಎಂಬ ವ್ಯಕ್ತಿಯನ್ನು ಗ್ರಾಮಾಂತರ ಪೊಲೀಸರು ಬಂ​ಧಿಸಿದ್ದಾರೆ. 17 ವರ್ಷ ವಯಸ್ಸಿನ ಬಾಲಕಿಯನ್ನು ಅಪಹರಣ ಮಾಡಿದ್ದ ಈತ ಅತ್ಯಾಚಾರ ವೆಸಗಿದ್ದಾನೆ ಎಂದು ಈತನ ವಿರುದ್ಧ ದೂರು ದಾಖಲಾಗಿತ್ತು.

ಅಕ್ಕೂರು ​ಪೊಲೀಸ್‌ ಠಾಣೆ ವ್ಯಾಪ್ತಿಯ ಮತ್ತೊಂದು ಪ್ರಕರಣಕ್ಕೆ ಸಂಬಂ​ಧಿಸಿದಂತೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ ವೆಸಗಿದ್ದ ಅಂಬಾಡಹಳ್ಳಿ ಗ್ರಾಮದ ಪ್ರದೀಪ್‌ ಎಂಬ ವ್ಯಕ್ತಿಯನ್ನು ​ಪೊಲೀಸರು ಬಂ​ಧಿಸಿದ್ದಾರೆ. 16 ವರ್ಷ ವಯಸ್ಸಿನ ಮಗಳನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿದ್ದಾನೆಂದು ಆರೋಪಿಸಿ ಅಪ್ರಾಪ್ತ ಬಾಲಕಿಯ ಪೋಷಕರು ದೂರು ನೀಡಿದ್ದರು.

ಚನ್ನಪಟ್ಟಣದ ವ್ಯಕ್ತಿ ಬಂಧನ: ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಕುಗ್ರಾಮದ 17 ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ್ದ ಆರೋಪಕ್ಕೆ ಸಂಬಂಧಿ​ಸಿದಂತೆ ನಗರ ಮಂಗಳವಾರಪೇಟೆಯ ಅಯ್ಯಪ್ಪ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂ​ಧಿತ ಮೂರು ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಫೋಕ್ಸೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ