ಮಳೆಗಾಲದಲ್ಲಿ ವೀರಾವೇಷ ತಾಳಿ ಹರಿಯೋ ಭದ್ರೇ ಇನ್ನು ಉಳಿದಂತೆ ಪೂರ್ತಿ ಕೂಲ್ ಕೂಲ್ ಅಗಿಯೇ ಹರಿಯತ್ತಾಳೆ. ಇಲ್ಲಿಗೆ ಪ್ರವಾಸಿಗರಂತೂ ಬರ್ತಾನೇ ಇರ್ತಾರೆ..ಕೊಂಚ ಹೊತ್ತು ಕೆಲ ಕಾಲ ಕಳೆಯುವವರೂ ಇರ್ತಾರೆ..ಇಂತಹ ಶಾಂತಳಾಗಿದ್ದ ಭದ್ರಯ ಒಡಲಲ್ಲಿ ಕಾಣಿಸಿದ್ದು ಕುರಿಗಳ ಶವ..ಆರು ಕುರಿಗಳ ಶವ ತೇಲಿ ಹೋಗ್ತಿರೋದು ಸ್ಥಳೀಯರ ಕಣ್ಣಿಗೆ ಬಿದ್ದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಫೆ.08): ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೆಬ್ಬಾಳೆ ಸಮೀಪ ಭದ್ರಾ ನದಿ ತಟದಲ್ಲಿ ವಾಮಾಚಾರದ ಕುರುಹುಗಳು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಅರಿಶಿನ, ಕುಂಕುಮ, ತೆಂಗಿನಕಾಯಿ, ಬಾಳೆಹಣ್ಣು, ಲಿಂಬೆಹಣ್ಣು, ಹೂವು ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಬಳಸಿ ಪೂಜೆ ಮಾಡಿರುವುದು ನದಿಯ ದಡದಲ್ಲಿ ಪತ್ತೆಯಾಗಿದೆ.
undefined
ನದಿಯಲ್ಲಿ ರುಂಡ-ಮುಂಡ ಬೇರ್ಪಟ್ಟ ಕುರಿ :
ಮಳೆಗಾಲದಲ್ಲಿ ವೀರಾವೇಷ ತಾಳಿ ಹರಿಯೋ ಭದ್ರೇ ಇನ್ನು ಉಳಿದಂತೆ ಪೂರ್ತಿ ಕೂಲ್ ಕೂಲ್ ಅಗಿಯೇ ಹರಿಯತ್ತಾಳೆ. ಇಲ್ಲಿಗೆ ಪ್ರವಾಸಿಗರಂತೂ ಬರ್ತಾನೇ ಇರ್ತಾರೆ..ಕೊಂಚ ಹೊತ್ತು ಕೆಲ ಕಾಲ ಕಳೆಯುವವರೂ ಇರ್ತಾರೆ..ಇಂತಹ ಶಾಂತಳಾಗಿದ್ದ ಭದ್ರಯ ಒಡಲಲ್ಲಿ ಕಾಣಿಸಿದ್ದು ಕುರಿಗಳ ಶವ..ಆರು ಕುರಿಗಳ ಶವ ತೇಲಿ ಹೋಗ್ತಿರೋದು ಸ್ಥಳೀಯರ ಕಣ್ಣಿಗೆ ಬಿದ್ದಿದೆ. ಈ ಭಾಗದಲ್ಲಿ ಕುರಿ ಸಾಕಣೆಯಂತೂ ಇಲ್ಲ..ಅದ್ರೂ ಹೇಗಪ್ಪ ಕುರಿಗಳ ಶವ ಅಂತಾ ನದಿಯ ಹತ್ರ ಹೋದಾಗ್ಲೇ ಕಂಡಿದ್ದು ಅಲ್ಲಿ ಒಂದು ಚೀಲ.ಅದ್ರಲ್ಲಿ ಕುಂಕುಮದ ಕಲೆಗಳು. ಕೊಂಚ ದೂರದಲ್ಲಿ ಬಣ್ಣ ಬಣ್ಣದಿಂದ ಚಿತ್ರೀಸಿರೋ ರಂಗೋಲಿ..ಭದ್ರಾ ನದಿಯ ದಡದಲ್ಲಿ ವಾಮಾಚಾರ ನಡೆಸಲಾಯ್ತಾ..ಕುರಿ ಬಲಿ ನೀಡಲಾಯ್ತಾ ಎಂಬ ಅನುಮಾನ ಸ್ಥಳೀಯರು ಮುಂದಿಟ್ಟಿದ್ದಾರೆ.
ಸಂಬಳ ಕೊಡ್ತೇವೆ ಬಾ ಅಂತಾ ಕರೆಸಿಕೊಂಡು ಕಾರ್ಮಿಕನಿಗೆ ಚಿತ್ರಹಿಂಸೆ; ಐವರು ಆರೋಪಿಗಳು ಅರೆಸ್ಟ್
ಕುಡಿಯುವ ನೀರಿನ ಮೂಲದಲ್ಲಿ ವಾಮಾಚಾರ :
ಎರಡು ದಿನ ಇಲ್ಲಿ ವಾಮಾಚಾರ ನಡೆದಿರೋ ಶಂಕೆ ವ್ಯಕ್ತವಾಗಿದೆ. ಅದ್ರಲ್ಲಿಯೂ ಕುರಿ ಬಲಿಯಾಗಿದ್ದು ಏಕೇ..ಬಲಿಯಾದ ನಂತ್ರ ಅದನ್ನ ಭದ್ರಾ ನದಿಗೆ ಬಿಡಲಾಯ್ತಾ? ಆ ಕುರಿಗಳು ತೇಲಿ ಹೋಗ್ತಿರೋದ್ರಿಂದ ಏನೂ ಯಾತಕ್ಕಾಗಿ ನಡೆಯಿತು ಇಲ್ಲಿ ಪೂಜೆ ಅನ್ನೋ ಅನುಮಾನ ಜೊತೆ ಅತಂಕವನ್ನ ಹೊರಹಾಕಿದ್ದಾರೆ. ತಕ್ಷಣವೇ ಪೊಲೀಸ್ರಿಗೆ ಮಾಹಿತಿಯನ್ನ ರವಾನಿಸಿದ್ದಾರೆ ಸ್ಥಳೀಯರು.ಸ್ಥಳಕ್ಕೆ ಬಂದ ಪೊಲೀಸ್ರು ಸ್ಥಳೀಯರು, ಭದ್ರಾ ನದಿಯಲ್ಲಿದ್ದ ಕುರಿಗಳ ಶವವನ್ನ ಹೊರತೆಗೆದು ನದಿಯ ದಡದಿಂದ ಕೊಂಚ ದೂರದಲ್ಲಿ ಗುಂಡಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ನಿತ್ಯ ಪ್ರವಾಸಿಗರು ಓಡಾಡೋ ಸ್ಥಳ.ಅದಕ್ಕಿಂತಲೂ ಕಳಸ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ನೀಡೋ ಭದ್ರೇ..ಇದಲ್ಲದೆ ಕುದುರೆಮುಖದಲ್ಲಿ ಉಗಮವಾಗಿ ಕಳಸದ ಮೂಲಕ ಹೊರರಾಜ್ಯದವರೆಗೂ ತುಂಗೆಯ ಸಂಗಮವಾಗಿ ಹರಿಯುತ್ತಾಳೆ. ಕಾಫಿನಾಡು ಚಿಕ್ಕಮಗಳೂರಿನ ಕಳಸದ ಹೆಬ್ಬಾಳೆ ಸೇತುವೆ ಸಮೀಪ ನಡೆದಿರೋ ಪೂಜೆ,ಕುರಿಗಳ ಶವ ವಾಮಾಚಾರ ನಡೆಯಿತಾ ಎಂಬ ಅನುಮಾನ ಅವರಿಸಿದೆ.
ಪೊಲೀಸ್ರು ತನಿಖೆ ನಡೆಸೋಕೆ ಮುಂದಾಗಿದ್ದಾರೆ. ಘಟನಾ ಸ್ಥಳಕ್ಕೆ ಪಿಡಿಒ ಕವೀಶ್, ಕಳಸ ಪಿಎಸ್ಐ ಬ್ರಮ್ಮಪ್ಪ ಬಿಳಗಲಿ, ಮತ್ತುಎಸ್ಐ ಮೋಹನ್ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕುರಿಗಳ ಕಳೇಬರವನ್ನು ನದಿಯಿಂದ ಎತ್ತಿ ಹೂಳಲಾಗಿದೆ. ಮಧ್ಯರಾತ್ರಿ ವಾಮಾಚಾರ ಮಾಡಿ ಸಾವಿರಾರು ಮಂದಿ ಕುಡಿಯುವ ನೀರನ್ನು ಹೀಗೆ ಕಲುಷಿತ ಮಾಡುವುದು ಸರಿಯಲ್ಲ, ಇದರ ಕುರಿತು ಸೂಕ್ತ ತನಿಖೆ ಆಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.