ಬೆಂಗಳೂರು: 2 ತಿಂಗಳಲ್ಲಿ ವಿದೇಶಿ ಪ್ರಜೆ ಸೇರಿ 27 ಮಂದಿ ಡ್ರಗ್ಸ್‌ ಪೆಡ್ಲ​ರ್ಸ್‌ ಸೆರೆ

By Kannadaprabha NewsFirst Published Dec 3, 2022, 11:00 AM IST
Highlights

ವಾಟ್ಸಾಪ್‌ ಹಾಗೂ ಟೆಲಿಗ್ರಾಂ ಆ್ಯಪ್‌ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಬಿಟ್‌ ಕಾಯಿನ್‌ ಹಾಗೂ ಆನ್‌ಲೈನ್‌ ಮೂಲಕ ವ್ಯವಹಾರ 

ಬೆಂಗಳೂರು(ಡಿ.03): ಕಳೆದ ಎರಡು ತಿಂಗಳ ಅವಧಿಯಲ್ಲಿ ವಿದೇಶಿ ಪ್ರಜೆ ಸೇರಿದಂತೆ 27 ಮಂದಿ ಪೆಡ್ಲರ್‌ಗಳನ್ನು ಬಂಧಿಸಿ ಸುಮಾರು 15 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ ಎಂದು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕ (ಎನ್‌ಸಿಬಿ) ಬೆಂಗಳೂರು ವಲಯ ನಿರ್ದೇಶಕ ಪಿ.ಅರವಿಂದನ್‌ ತಿಳಿಸಿದ್ದಾರೆ.

ಚೆನ್ನೈ, ಕೊಲ್ಕತ್ತಾ ಹಾಗೂ ದೆಹಲಿ ಮೂಲದ ಬಂಧಿತ ಆರೋಪಿಗಳು 20-25 ವರ್ಷದ ವಯೋಮಾನದವರಾಗಿದ್ದು, ಹಲವು ದಿನಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ನಗರದಲ್ಲಿ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲವರು ಉದ್ಯೋಗದಲ್ಲಿದ್ದರು. ವಾಟ್ಸಾಪ್‌ ಹಾಗೂ ಟೆಲಿಗ್ರಾಂ ಆ್ಯಪ್‌ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಬಿಟ್‌ ಕಾಯಿನ್‌ ಹಾಗೂ ಆನ್‌ಲೈನ್‌ ಮೂಲಕ ವ್ಯವಹರಿಸುತ್ತಿದ್ದರು. ಈ ಆರೋಪಿಗಳ ಕುರಿತು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ನಿರ್ದೇಶಕರು ವಿವರಿಸಿದ್ದಾರೆ.

Bengaluru: ಟಾಕಿಂಗ್‌ ಟಾಮ್‌ ಬಳಸಿ ಡ್ರಗ್ಸ್‌ ಕಳ್ಳಸಾಗಣೆ: ಮೂವರ ಬಂಧನ

ಆರೋಪಿಗಳಿಂದ ಕೊಕೇನ್‌, ಎಲ್‌ಎಸ್‌ಡಿ ಹಾಗೂ ಹ್ಯಾಶೀಶ್‌ ಸೇರಿದಂತೆ ಇತರೆ ಡ್ರಗ್‌್ಸ ಜಪ್ತಿ ಮಾಡಲಾಗಿದೆ. ಈ ಬಂಧಿತರ ಪೈಕಿ ಪಶ್ಚಿಮ ಬಂಗಾಳ ಮೂಲದ ಡ್ರಗ್ಸ್‌ ಪೂರೈಕೆದಾರನಾಗಿದ್ದು, ಸ್ಥಳೀಯ ಕೊರಿಯರ್‌ ಕಂಪನಿ ಮೂಲಕ ಬೆಂಗಳೂರು ಸೇರಿದಂತೆ ದೇಶದ ವಿವಿಧಡೆಗೆ ಆತ ಡ್ರಗ್ಸ್‌ ಪೂರೈಸುತ್ತಿದ್ದ. ಡ್ರಗ್ಸ್‌ ಬಯಸಿ ವಾಟ್ಸ್‌ಆಪ್‌ ಮೂಲಕ ಆತನನ್ನು ಗ್ರಾಹಕರು ಸಂಪರ್ಕಿಸುತ್ತಿದ್ದರು ಎಂದು ಅರವಿಂದನ್‌ ಮಾಹಿತಿ ನೀಡಿದ್ದಾರೆ.

ಬಂಧಿತರ ವಿವರ:

ಇರಾನ್‌ ದೇಶದ ಓರ್ವ ಪ್ರಜೆ, ಬೆಂಗಳೂರು (13), ತಮಿಳುನಾಡು (2), ಕೊಲ್ಕತ್ತಾ (2), ಹೈದರಾಬಾದ್‌ (3), ಮಿಜಾರೋಂ, ಮುಂಬೈ, ದೆಹಲಿ, ಹರಿಯಾಣ, ರಾಜಸ್ಥಾನ ಹಾಗೂ ಉತ್ತರಪ್ರದೇಶದ ತಲಾ ಒಬ್ಬ ಸೇರಿದಂತೆ 27 ಮಂದಿ ಆರೋಪಿಗಳು ಬಂಧಿತರಾಗಿದ್ದಾರೆ ಎಂದು ವಲಯ ನಿರ್ದೇಶಕ ತಿಳಿಸಿದ್ದಾರೆ.
 

click me!